Top

ಉತ್ತರ ಕರ್ನಾಟಕದ ಜನರ ನೆರವಿಗೆ ನಿಂತ ಹರ್ಷಿಕಾ-ಭುವನ್

50 ಬಡ ಕುಟುಂಬಗಳಿಗೆ ದಿನಸಿ, ಔಷಧಿ, ಮಾಸ್ಕ್ ವಿತರಣೆ

ಉತ್ತರ ಕರ್ನಾಟಕದ ಜನರ ನೆರವಿಗೆ ನಿಂತ ಹರ್ಷಿಕಾ-ಭುವನ್
X

ಕೊರೊನಾ ಮತ್ತು ಲಾಕ್​ಡೌನ್​​ನ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಕಷ್ಟು ಸೆಲೆಬ್ರೆಟಿಗಳು ರಸ್ತೆಗಳಿದು ಕೊರೊನಾ ವಾರಿಯರ್ಸ್​ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್​ ಪೊನ್ನಣ್ಣ ನೆರವಿನ ಕಾರ್ಯ ನಿರಂತರವಾಗಿ ನಡೀತಾನೇ ಇದೆ. ಇದೀಗ ಉತ್ತರ ಕರ್ನಾಟಕದ ಕಡೆ ಹೆಜ್ಜೆ ಹಾಕಿರೋ ಈ ಜೋಡಿ ನೆರವಿನ ಜೊತೆಗೆ ಜಾಗೃತಿ ಮೂಡಿಸುವಂತಹ ಕೆಲಸ ಮಾಡುತ್ತಿದ್ದಾರೆ.

ಸ್ಯಾಂಡಲ್​ವುಡ್​ನ ಸಾಕಷ್ಟು ಸೆಲೆಬ್ರೆಟಿಗಳು ಕೊರೊನಾ ಸಂಕಷ್ಟದಲ್ಲಿ ನೆರವಿಗೆ ನಿಂತಿದ್ದಾರೆ. ರಸ್ತೆಗಳಿದು ಕೊರೊನಾ ವಾರಿಯರ್​ಗಳಾಗಿ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನಟಿ ಹರ್ಷೀಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ದೊಡ್ಡ ಮಟ್ಟದಲ್ಲಿ ನೆರವಿನ ಹಸ್ತ ಚಾಚ್ತಿದ್ದಾರೆ. ಹರ್ಷಿಕಾ ಮತ್ತು ಭುವನ್​ ಯಾವುದೇ ಕಷ್ಟದ ಪರಿಸ್ಥಿತಿಯಲ್ಲಿಯೂ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.


ಕಳೆದ ಬಾರಿ ಲಾಕ್​​ಡೌನ್​ನಲ್ಲಿಯೂ ಒಂದಷ್ಟು ಸಾಮಾಜಿಕ ಕೆಲಸಗಳನ್ನ ಮಾಡಿದ್ದ ಭುವನ್​ ಮತ್ತು ಹರ್ಷಿಕಾ ಈ ಬಾರಿ ಲಾಕ್​ಡೌನ್​ನಲ್ಲಿಯೂ ತಮ್ಮ ಕೆಲಸ ಮುಂದುವರೆಸಿದ್ದಾರೆ. ಇದೀಗ ಈ ಜೋಡಿ ಬೆಳಗವಾವಿ ಜಿಲ್ಲೆಯ, ಚಿಕ್ಕೋಡಿ ತಾಲ್ಲೂಕಿನ ರಾಯಭಾಗದ ಸವಸುದ್ದಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ಗ್ರಾಮದಲ್ಲಿ ಒಂದೇ ತಿಂಗಳಿನಲ್ಲಿ 50ಕ್ಕೂ ಹೆಚ್ಚು ಸಾವುಗಳಾಗಿರೋದನ್ನ ಗಮನಿಸಿ, ಅಲ್ಲಿಗೆ ಭೇಟಿ ನೀಡಿ, ಸುಮಾರು 50 ಬಡ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳು, ಔಷಧಿ, ಹಾಗೂ ಮಾಸ್ಕ್ ವಿತರಿಸಿದ್ದಾರೆ. ಅಷ್ಟೆಅಲ್ಲಾ ಉಷಾರ್​ ಹೆಸರಿನಲ್ಲಿ ಜಾಗೃತಿ ಅಭಿಯಾನ ಕೂಡ ಮಾಡಿದ್ದಾರೆ.

ಇನ್ನು ಹರ್ಷಿಕಾ ಭುವನ್​ ಸಹಾಯ ಉತ್ತರ ಕರ್ನಾಟಕ ಮಾತ್ರವಲ್ದೆ ಈ ಹಿಂದೆ ಕೊಡಗಿಗೂ ಭೇಟಿ ನೀಡಿದ್ದು, ಅನುಕೂಲವೇ ಇಲ್ಲದ ಮನೆಗಳಿಗೆ, ದಾರಿ ಇಲ್ಲದ ಬೆಟ್ಟದ ಮೇಲಿರುವ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ದಿನಸಿ ಕಿಟ್​ಗಳನ್ನ ತಲುಪಿಸಿದರು. ಅಷ್ಟೇಅಲ್ಲಾ ಕೊಡಗಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಸೋಂಕಿತ ರೋಗಿಗಳ ಜೊತೆ ಹೆಜ್ಜೆ ಹಾಕಿ, ಅವರನ್ನ ರಂಜಿಸಿದರು.


ಇನ್ನು ಬೆಂಗಳೂರಿನ ಕೆಲವಡೆ ಕೂಡ ದಿನಸಿ ಕಿಟ್ ವಿತರಣೆ ಹಾಗೂ ಶ್ವಾಸ ಮತ್ತು ಭಾಂಧವ ಹೆಸರಿನಲ್ಲಿ ಆಟೋ ಹಾಗೂ ಬಸ್​​ಗಳಲ್ಲಿ ಆಮ್ಲಜನಕ ಯಂತ್ರಗಳನ್ನು ಅಳವಡಿಸಿ, ಅವಶ್ಯಕತೆ ಇದ್ದವರಿಗೆ ಆಕ್ಸಿಜನ್​ ಪೂರೈಸುವ ಕೆಲಸ ಮಾಡಿದ್ದಾರೆ.

ಒಟ್ನಲ್ಲಿ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ಸೆಲೆಬ್ರೆಟಿಗಳು ರಸ್ತೆಗಿಳಿದು ಕೊರೊನಾ ವರಿಯರ್ಸ್​ ಆಗಿ ಕೆಲಸ ಮಾಡ್ತಾ ಇರೋದು ನಿಜಕ್ಕೂ ಮೆಚ್ಚುವಂತಹ ವಿಚಾರ, ಅದರಲ್ಲೂ ಭುವನ್​ ಮತ್ತು ಹರ್ಷಿಕಾ ಪೂಣಚ್ಚ ತಮ್ಮ ನೆರವಿನ ಮೂಲಕ ಎಷ್ಟೋ ಜೀವಗಳ ಉಳಿವಿಗೆ ನೆರವಾಗ್ತಿದ್ದಾರೆ. ಅವರ ಈ ಕೆಲಸ ಮುಂದುವರಿಲಿ ಅನ್ನೋದೇ ಎಲ್ಲರ ಆಶಯ.

Next Story

RELATED STORIES