Top

KGF​​ ಅಭಿಮಾನಿಗಳಿಗೂ ಸಿಕ್ತು ಬೊಂಬಾಟ್​ ನ್ಯೂಸ್

  • ಕ್ಯಾನ್ಸರ್​ಗೆ ಜಗ್ಗದೇ ಚಿತ್ರೀಕರಣಕ್ಕೆ ಸಂಜುಬಾಬಾ ವಾಪಸ್.
  • ಬಾಲಿವುಡ್​ 'ಶಂಶೇರ' ಸಿನಿಮಾ ಚಿತ್ರೀಕರಣದಲ್ಲಿ ದತ್​ ಭಾಗಿ.
  • ಅಧೀರ ರೋಲ್​ ಕಂಪ್ಲೀಟ್​ ಮಾಡಲು ಸಂಜು ಉತ್ಸುಕ.
  • ಡಿಸೆಂಬರ್​ನಲ್ಲಿ ಕ್ಯಾನ್ಸರ್​ ಚಿಕಿತ್ಸೆಗಾಗಿ ವಿದೇಶಕ್ಕೆ ಸಂಜಯ್​ ದತ್..!

KGF​​ ಅಭಿಮಾನಿಗಳಿಗೂ ಸಿಕ್ತು ಬೊಂಬಾಟ್​ ನ್ಯೂಸ್
X

ಬಾಲಿವುಡ್​ ನಟ ಸಂಜಯ್​ ದತ್​

ಬಾಲಿವುಡ್​ ನಟ ಸಂಜಯ್​ ದತ್​​ ಶ್ವಾಸ ಕೋಶ ಕ್ಯಾನ್ಸರ್​ನಿಂದ ಬಳಲುತ್ತಿರುವ ಸುದ್ದಿ ಕೇಳಿ, ಅಭಿಮಾನಿಗಳು ಮತ್ತು ಆಪ್ತರು ಶಾಕ್​ ಆಗಿದರು. ಕ್ಯಾನ್ಸರ್​ ನಾಲ್ಕನೇ ಹಂತ ತಲುಪಿದೆ, ಶೀಘ್ರದಲ್ಲೇ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗ್ತಾರೆ ಅಂದಾಗ ಅರ್ಧಕ್ಕೆ ನಿಂತಿರೋ ಅವರ ಸಿನಿಮಾಗಳ ಕಥೆಯೇನು ಅನ್ನುವ ಪ್ರಶ್ನೆ ಎದ್ದಿತ್ತು. ಅದರಲ್ಲೂ ಕೆಜಿಎಫ್​​ ಚಾಪ್ಟರ್​​-2 ಚಿತ್ರೀಕರಣಕ್ಕೆ ಸಂಜು ಯಾವಾಗ ಭಾಗವಹಿಸ್ತಾರೆ ಅನ್ನುವ ಗೊಂದಲ ಮೂಡಿತ್ತು. ಆದರೆ, ಇದೀಗ ಬಿಟೌನ್​ ಅಂಗಳದಿಂದ ಸಮಾಧಾನಕರ ಸುದ್ದಿ ಬಂದಿದೆ.

ಕ್ಯಾನ್ಸರ್​ನಿಂದ ಬಳಲುತ್ತಿರುವ ನಟ ಸಂಜಯ್​ ದತ್​ ಬೇಗ ಗುಣಮುಖರಾಗಲಿ ಅಂತ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಅವರು ಈಗಾಗಲೇ ಮುಂಬೈ ಆಸ್ಪತ್ರೆಯಲ್ಲಿಯೇ ಮೊದಲ ಹಂತದ ಕಿಮೊಥೆರಪಿಗೆ ಒಳಗಾಗಿದ್ದಾರೆ. ಮುಂಬೈನಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಫಾರಿನ್​ ಫ್ಲೈಟ್​ ಏರಲಿದ್ದಾರೆ. ಈಗಾಗಲೇ ಸಂಜುಬಾಬ 5 ವರ್ಷಗಳ ಅವಧಿಗೆ ವೀಸಾ ಕೂಡ ಪಡೆದಿರೋದಾಗಿ ವರದಿಯಾಗ್ತಿದೆ. ಹಾಗಾದ್ರೆ, ಸಂಜಯ್​ ದತ್ ನಟಿಸ್ತಿರೋ ಸಿನಿಮಾಗಳ ಕಥೆ ಏನು(?) ಅಂತ ಕೆಲವರು ಯೋಚಿಸುತ್ತಿದ್ದರು.


ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿ, ಅಂತ ಹೇಳಿದ್ದು ಬಿಟ್ರೆ, ಸಂಜಯ್​ ದತ್​ ಈವರೆಗೆ ಕ್ಯಾನ್ಸರ್​​ ಬಳಲುತ್ತಿರುವ ಬಗ್ಗೆ ಮಾತನಾಡಿಲ್ಲ. ಆದರೆ, ಮೆಡಿಕಲ್​ ಟ್ರೀಟ್​ಮೆಂಟ್​ಗಾಗಿ ಬ್ರೇಕ್​ ತೆಗೆದುಕೊಳ್ತಿದ್ದೇನೆ, ಅಂತ ಕಳೆದ ತಿಂಗಳು ಟ್ವೀಟ್​ ಮಾಡಿದ್ದರು. 'ಶಂಶೇರ', ಭುಜ್, ಪೃಥ್ವಿರಾಜ್​​, ಕೆಜಿಎಫ್​-2 ಸಿನಿಮಾಗಳ ಶೂಟಿಂಗ್​ ನಡುವೆಯೂ ಸಂಜು ಬಾಬಾ ಈ ರೀತಿ ಹೇಳಿದ್ದು ಗೊಂದಲಕ್ಕೆ ಕಾರಣವಾಗಿತ್ತು. ಅಷ್ಟರಲ್ಲೇ ಅವರು ಕ್ಯಾನ್ಸರ್​ನಿಂದ ಬಳಲುತ್ತಿರುವುದು ಗೊತ್ತಾಗಿತ್ತು. ಹಾಗಾದ್ರೆ, ಅರ್ಧಕ್ಕೆ ನಿಂತ ಸಿನಿಮಾಗಳನ್ನ ಯಾವಾಗ ಮುಗಿಸ್ತಾರೆ ಅನ್ನೋ ಪ್ರಶ್ನೆ ಎದ್ದಿತ್ತು.

ಕರಣ್​ ಮಲ್ಹೋತ್ರ ನಿರ್ದೇಶನದ 'ಶಂಶೇರ' ಸಿನಿಮಾದಲ್ಲಿ ಸಂಜಯ್​ ದತ್​ ನಟಿಸ್ತಿದ್ದು, ಇತ್ತೀಚೆಗೆ ಎರಡು ದಿನಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. 'ಶಂಶೇರ' ಚಿತ್ರದ ಪ್ಯಾಚ್​ವರ್ಕ್​ ಬಾಕಿಯಿದ್ದು, ಸಂಜು ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ ಅನ್ನಲಾಗುತ್ತಿದೆ. ರಣ್ಬೀರ್​ ಕಪೂರ್​ ಈ ಚಿತ್ರದ ಲೀಡ್​ ರೋಲ್​ನಲ್ಲಿ ನಟಿಸ್ತಿದ್ದಾರೆ.


'ಶಂಶೇರ' ಬಿಟ್ರೆ, ಸಂಜಯ್​ ದತ್​ ನಟಿಸಬೇಕಿರುವ ಸಿನಿಮಾ ಕೆಜಿಎಫ್​ ಚಾಪ್ಟರ್​ -2. ಈಗಾಗಲೇ ಪ್ರೀಕ್ವೆಲ್​ ಸೂಪರ್​ ಹಿಟ್​ ಆಗಿ ಸೀಕ್ವೆಲ್​ ಮಾಡಿ ಭಾರೀ ನಿರೀಕ್ಷೆಯಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ, ಇಷ್ಟೊತ್ತಿಗೆ ಕೆಜಿಎಫ್​-2 ಶೂಟಿಂಗ್​ ಮುಗಿದು ಪ್ರಮೋಷನ್​ ಶುರುವಾಗಬೇಕಿತ್ತು. ಆದರೆ, ಕೊರೊನಾ ಹಾವಳಿಯಿಂದ ಚಿತ್ರೀಕರಣಕ್ಕೆ ಬ್ರೇಕ್​ ಬಿದ್ದು ಸಮಸ್ಯೆಯಾಗಿದೆ. ಅಕ್ಟೋಬರ್ 23ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿದೆ.

ಹೇಳಿ ಕೇಳಿ KGF​ ಚಾಪ್ಟರ್​ -2 ಬಹಳ ದೊಡ್ಡ ಸಿನಿಮಾ. ಸಂಜಯ್​ ದತ್​ ಆಗಮನದಿಂದ ಚಿತ್ರದ ಮೇಲಿನ ನಿರೀಕ್ಷೆ ಡಬಲ್​ ಆಗಿದೆ. ವೈಕಿಂಗ್ಸ್​​ನಿಂದ ಪ್ರೇರಣೆಗೊಂಡು ಪ್ರಶಾಂತ್​ ನೀಲ್​ ಅಧೀರನ ಪಾತ್ರವನ್ನ ಡಿಸೈನ್​ ಮಾಡಿದ್ದಾರೆ. ಈಗಾಗಲೇ ಸಂಜುಬಾಬು ಒಂದಷ್ಟು ಶೂಟಿಂಗ್​​​ನಲ್ಲೂ ಭಾಗವಹಿಸಿದ್ದಾರೆ. ಅಧೀರ ಫಸ್ಟ್​ ಲುಕ್ ಪೋಸ್ಟರ್​ಗೂ ಭರ್ಜರಿ ರೆಸ್ಪಾನ್ಸ್​​ ಸಿಕ್ಕಿದೆ. ಇಂತಹ ಹೊತ್ತಲ್ಲಿ ಶೂಟಿಂಗ್​ ತಡ ಮಾಡೋದು ಸರಿಯಲ್ಲ. ಈಗಾಗಲೇ ಕೆಜಿಎಫ್​-2 ಶೂಟಿಂಗ್​ ಪುನರಾರಂಭವಾಗಿದೆ. ಶೀಘ್ರದಲ್ಲೇ ದತ್​​ ಚಿತ್ರೀಕರಣದಲ್ಲಿ ಭಾಗಿಯಾಗೋ ಸುಳಿವು ಸಿಕ್ತಿದೆ.


ಡಿಸೆಂಬರ್​​ನಲ್ಲಿ ಸಂಜಯ್​ ದತ್​​​ ಕ್ಯಾನ್ಸರ್​ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳುವ ಸಾಧ್ಯತೆಯಿದೆ. ಅಷ್ಟರಲ್ಲಿ ಅರ್ಧಕ್ಕೆ ನಿಂತಿರುವ ಸಿನಿಮಾಗಳನ್ನ ಪೂರ್ಣಗೊಳಿಸಲು ತೀರ್ಮಾನಿಸಿದ್ದಾರಂತೆ. ಇದು ಸಹಜವಾಗಿಯೇ ಕೆಜಿಎಫ್​ ಅಭಿಮಾನಿಗಳಿಗೆ ಖುಷಿ ತಂದಿದೆ. ಸಂಜಯ್​ ದತ್​ ಕಾಣಿಸಿಕೊಳ್ಳಲಿರುವ ಸನ್ನಿವೇಶಗಳ ಚಿತ್ರೀಕರಣಕ್ಕೆ ಹತ್ತರಿಂದ ಹದಿನೈದು ದಿನಗಳ ಕಾಲ್​ಶೀಟ್​ ಬೇಕಾಗಿದೆ. ಈಗಾಗಲೇ ಶೂಟಿಂಗ್​ ಪುನರಾರಂಭವಾಗಿರೋದ್ರಿಂದ ಅಧೀರ ಯೆಸ್​ ಅಂದ್ರೆ, ಬೇಗ ಚಿತ್ರೀಕರಣ ಮುಗಿಸಲು ಪ್ರಶಾಂತ್​ ನೀಲ್​ ಅಂಡ್​ ಟೀಂ ರೆಡಿಯಾಗಿದೆ.

ಆದಷ್ಟು ಬೇಗ ಸಂಜಯ್​ ದತ್​​ ಕ್ಯಾನ್ಸರ್​ ಗೆದ್ದು ಬರಲಿ, ಸಾಧ್ಯವಾದಷ್ಟು ಬೇಗ ಅರ್ಧಕ್ಕೆ ನಿಂತಿರುವ ಅವರ ಸಿನಿಮಾಗಳ ಶೂಟಿಂಗ್ ಕಂಪ್ಲೀಟ್ ಆಗ್ಲಿ ಅಂತ ಅಭಿಮಾನಿಗಳು ಆಶಿಸುತ್ತಿದ್ದಾರೆ. ಅದೇ ರೀತಿ ತೆರೆಮೇಲೆ ರಾಕಿ ಭಾಯ್​ ವರ್ಸಸ್​ ಅಧೀರ ಫೈಟ್​ ನೋಡೋದಕ್ಕೂ ಕಾಯ್ತಿದ್ದಾರೆ.

Next Story

RELATED STORIES