Top

ಬಿಟೌನ್​ನಲ್ಲಿ ರೆಡಿಯಾಗುತ್ತಿದೆ ಬ್ಯಾಡ್ಮಿಂಟನ್​ ಆಟಗಾರ್ತಿಯ ಬಯೋಪಿಕ್

ಸೈನಾರಂತೆ ಹೇರ್​ಕಟ್ ಮಾಡಿಸಿ ಪರಿಣಿತಾ ಮಿಂಚು

ಬಿಟೌನ್​ನಲ್ಲಿ ರೆಡಿಯಾಗುತ್ತಿದೆ ಬ್ಯಾಡ್ಮಿಂಟನ್​ ಆಟಗಾರ್ತಿಯ ಬಯೋಪಿಕ್
X

ಬಾಲಿವುಡ್​ನಲ್ಲಿ ಬಯೋಪಿಕ್​ಗಳಿಗೇನೂ ಬರ ಇಲ್ಲ. ಸಾಧಕರ ಜೀವನಾಧಾರಿತ ಕಥೆಗಳು ಹೆಚ್ಚು ಸಿನಿಮಾ ರೂಪ ಪಡೆದಿರೋದೇ ಬಿಟೌನ್​ನಲ್ಲಿ ಸದ್ಯ ಖ್ಯಾತ ಬಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್​ ಕಥೆ ಸಿನಿಮಾ ಆಗುತ್ತಿರೋದು ಗೊತ್ತೇಯಿದೆ. ಇದೀಗ ಈ ಚಿತ್ರದ ನಾಯಕಿ ಪರಿಣಿತಾ ಚೋಪ್ರಾ ಫಸ್ಟ್ ಲುಕ್​ ರಿವೀಲ್​ ಆಗಿದೆ.

ಬಾಲಿವುಡ್​ನಲ್ಲಿ ಈಗಾಗಲೇ ಸಾಕಷ್ಟು ಸಾಧಕರ ಕಥೆಗಳು ಸಿನಿಮಾ ರೂಪ ತಾಳಿವೆ. ಇದೀಗ ಬಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್​ ಸರದಿ. ಈಗಾಗಲೇ ಈ ಚಿತ್ರದ ಶೂಟಿಂಗ್​ ಶುರುವಾಗಿದ್ದು, ಪರಿಣಿ ಚೋಪ್ರಾ, ಸೈನಾ ಪಾತ್ರದಲ್ಲಿ ಮಿಂಚ್ತಿರೋದು ಗೊತ್ತೇಯಿದೆ ಇದಕ್ಕಾಗಿ ಪರಿಣಿತಾ ಚೋಪ್ರಾ ಸೈನಾರನ್ನ ಭೇಟಿ ಮಾಡಿ ಸಾಕಷ್ಟು ವಿಚಾರಗಳನ್ನ ತಿಳಿದುಕೊಂಡಿದ್ದಾರೆ ಜೊತೆಗೆ ಬ್ಯಾಡ್ಮಿಂಟನ್​​ ಪ್ರಾಕ್ಟೀಸ್ ಮಾಡಿ, ಸಾಕಷ್ಟು ಕಸರತ್ತು ನಡೆಸಿದ್ದಾರೆ.

ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಪರಿಣಿತಾ ಚೋಪ್ರಾರ ಲುಕ್​ ರಿವೀಲ್​ ಆಗಿದೆ. ಈ ಲುಕ್​ ಅಫೀಶಿಯಲ್​ ಸಿನಿಮಾತಂಡದಿಂದ ರಿವೀಲ್​ ಆಗದೇ ಒದ್ರೂ, ಪರಿಣಿತಿ ಫ್ಯಾನ್​ ಪೇಜ್​ನಲ್ಲಿ ಹರಿದಾಡುತ್ತಿದೆ. ಆದರೆ ಈ ಲುಕ್​ ನೋಡಿ ರಿಯಾಕ್ಟ್ ಮಾಡಿರೋ ಸೈನಾ ನೆಹ್ವಾಲ್​, ನನ್ನಂತೆಯೇ ಕಾಣುತ್ತಿದೆ ಅಂತ ಥಮ್ಸ್​ ಅಪ್ ಬಟನ್​ ಒತ್ತಿದ್ದಾರೆ.

ಅಂದ್ಹಾಗೇ ಈ ಫೋಟೋದಲ್ಲಿ ಪರಿಣಿತಾ ಚೋಪ್ರಾ, ಸೈನಾ ನೆಹ್ವಾಲ್ ಹಾಗೆ ಹೇರ್ ಕಟ್ ಮಾಡಿಸಿಕೊಂಡು ಭಾರತೀಯ ಜೆರ್ಸಿ ಧರಿಸಿ, ಗಂಭೀರ ಲುಕ್ ಬೀರಿದ್ದು,ಸದ್ಯ ಈ ಫೋಸ್ಟರ್ ವೈರಲ್​ ಆಗಿದೆ. ಇನ್ನು ಸೈನಾ ಪಾತ್ರಕ್ಕೆ ಈ ಹಿಂದೆ ಶ್ರದ್ಧಾ ಕಪೂರ್ ಆಯ್ಕೆಯಾಗಿದ್ದು, ಫಸ್ಟ್ ಲುಕ್ ಸಹ ರಿಲೀಸ್ ಆಗಿತ್ತು. ಆದರೆ ಕಾರಣಾಂತರಗಳಿಂದ ಶ್ರದ್ಧಾ ಜಾಗಕ್ಕೆ ಪರಿಣೀತಿ ಚೋಪ್ರಾ ಎಂಟ್ರಿ ಕೊಟ್ಟಿದ್ದು, ಸದ್ಯ ಭರದಿಂದ ಚಿತ್ರೀಕರಣ ಸಾಗುತ್ತಿದೆ.

Next Story

RELATED STORIES