Top

ಶ್ರೀಮುರಳಿ ಹುಟ್ಟುಹಬ್ಬಕ್ಕೆ 'ಮದಗಜ' ಚಿತ್ರದ ಫಸ್ಟ್​ಲುಕ್​ ಟೀಸರ್​ ಬಿಡುಗಡೆ

ಅಭಿಮಾನಿಗಳಿಗೆ ಮದಗಜ ಫಸ್ಟ್ ಲುಕ್​ ಟೀಸರ್ ಗಿಫ್ಟ್

ಶ್ರೀಮುರಳಿ ಹುಟ್ಟುಹಬ್ಬಕ್ಕೆ  ಮದಗಜ ಚಿತ್ರದ ಫಸ್ಟ್​ಲುಕ್​ ಟೀಸರ್​ ಬಿಡುಗಡೆ
X

ಸ್ಯಾಂಡಲ್​ವುಡ್​ನ ಮೋಸ್ಟ್ ಎಕ್ಸ್​ಪೆಕ್ಡೆಡ್​ ಮದಗಜ ದಿನದಿಂದ ದಿನಕ್ಕೆ ಕ್ಯೂರಿಯಾಸಿಟಿ ಬಿಲ್ಡ್ ಮಾಡುತ್ತಿದೆ. ಒಂದಲ್ಲ ಒಂದಲ್ಲ ವಿಶೇಷತೆಯಿಂದ ಸುದ್ದಿ ಮಾಡುತ್ತಿದೆ. ಇದೀಗ ಮದಗಜನ ಫಸ್ಟ್ ಸ್ಯಾಂಪಲ್​ ರಿಲೀಸ್​ಗೆ ರೆಡಿಯಾಗಿದ್ದು, ಕೆಜಿಎಫ್ ಸಾರಥಿ ರೋರಿಂಗ್​ ಸ್ಟಾರ್​ಗೆ ಸಾಥ್ ಕೊಡುತ್ತಿದ್ದಾರೆ.

ರೋರಿಂಗ್​ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಸಿನಿಮಾ ಈಗಾಗ್ಲೇ ವಾರಣಾಸಿ ಮತ್ತು ಮೈಸೂರಿನಲ್ಲಿ 2 ಹಂತದ ಚಿತ್ರೀಕರಣ ಮುಗಿಸಿ ವಾಪಸ್ಸಾಗಿದ್ದಾರೆ. ಸದ್ಯ 3ನೇ ಶೆಡ್ಯೂಲ್​ ಶೂಟಿಂಗ್​ನ್ನ ಬೆಂಗಳೂರಿನ ಮಿನರ್ವ ಮಿಲ್​ನಲ್ಲಿ ಚಿತ್ರೀಕರಿಸುತ್ತಿದ್ದು, ಲಾಸ್ಟ್ ಶೆಡ್ಯೂಲ್​ ಶೂಟಿಂಗ್​ಅನ್ನ ಮೈಸೂರು ಮತ್ತು ಬಾಗೇಪಲ್ಲಿಯಲ್ಲಿ ಪ್ಲಾನ್​ ಮಾಡಲಾಗಿದೆ.

ಮದಗಜ ಶುರುವಾದಾಗಿನಿಂದ ಈವೆಗೂ ಕೇವಲ ಪೋಸ್ಟರ್​ಗಳನ್ನ ಬಿಟ್ರೆ, ಸಿನಿಮಾದ ಯಾವ ಸ್ಯಾಂಪಲ್​ಗಳನ್ನ ರಿಲೀಸ್ ಮಾಡಿರಲಿಲ್ಲ. ಇದೀಗ ರೋರಿಂಗ್​ ಸ್ಟಾರ್​ ಶ್ರೀಮುರಳಿ ಹುಟ್ಟುಹಬ್ಬಕ್ಕೆ ಫಸ್ಟ್ ಸ್ಯಾಂಪಲ್​ಅನ್ನ ಬಿಡುಗಡೆ ಮಾಡ್ತಿದೆ ಮದಗಜ ಟೀಂ. ಮದಗಜ ಚಿತ್ರದ ಫಸ್ಟ್ ಲುಕ್​ ಟೀಸರ್ ರಿಲೀಸ್​ ಆಗುತ್ತಿದ್ದು, ಡಿಸೆಂಬರ್​ 17 ಅಂದ್ರೆ ಶ್ರೀಮುರಳಿ ಹುಟ್ಟುಹಬ್ಬದ ದಿನ ಬೆಳಿಗ್ಗೆ 9.09ಕ್ಕೆ ಬಿಡುಗಡೆ ಆಗಲಿದೆ.


ವಿಶೇಷ ಅಂದ್ರೆ ಮದಗಜ ಫಸ್ಟ್ ಲುಕ್​ ಟೀಸರ್​ನ್ನ ಕೆಜಿಎಫ್​ ಸಾರಥೀ ಪ್ರಶಾಂತ್​ ನೀಲ್​ ಲೋಕಾರ್ಪಣೆ ಮಾಡುತ್ತಿದ್ದಾರೆ. ಸದ್ಯ ಕೆಜಿಎಫ್ ಶೂಟಿಂಗ್​ನಲ್ಲಿ ಬ್ಯುಸಿಯಾಗಿರೋ ನಿರ್ದೇಶಕ ನೀಲ್​, ಕೆಜಿಎಫ್​ ಸೆಟ್​ನಿಂದಲೇ , ರೋರಿಂಗ್​ ಸ್ಟಾರ್​ಗೆ ಹುಟ್ಟುಹಬ್ಬದ ಶುಭಾಶಯದ ಜೊತೆಗ ಮದಗಜನಿಗೆ ಬೆಸ್ಟ್ ವಿಶಸ್​ ತಿಳಿಸಲಿದ್ದಾರೆ. ಆ ನಂತರ ಟೀಸರ್ ಆನಂದ್​ ಆಡಿಯೋ ಮೂಲಕ ಬಿಡುಗಡೆ ಆಗಲಿದೆ.

ಅಂದ್ಹಾಗೇ ಸಂಬಂಧಲ್ಲಿ ಶ್ರೀಮುರಳಿ ಮತ್ತು ಪ್ರಶಾಂತ್​ ನೀಲ್ ಭಾವ ಭಾಮೈದ ಆಗಬೇಕಿರೋದು ಗೊತ್ತೇಯಿದೆ. ಅಷ್ಟೇ ಅಲ್ಲಾ ಮದಗಜ ಶುರುವಿಂದಲೂ ಪ್ರಶಾಂತ್​ ನೀಲ್​ ಚಿತ್ರತಂಡಕ್ಕೆ ಬೆನ್ನೆಲುವಾಗಿ ನಿಂತಿದ್ದಾರೆ. ಇನ್ನು ಶ್ರೀಮುರಳಿ ಸೆಕಂಡ್​ ಇನ್ನಿಂಗ್ಸ್​ ಶುರುಮಾಡಿದ್ದೇ ಪ್ರಶಾಂತ್​ ನೀಲ್​ ನಿರ್ದೇಶನದ ಉಗ್ರಂ ಸಿನಿಮಾ ಮೂಲಕ. ಉಗ್ರಂನಿಂದ ಸ್ವತಃ ಪ್ರಶಾಂತ್ ನೀಲ್, ರೋರಿಂಗ್​ ಸ್ಟಾರ್ ಇಮೇಜನ್ನೇ ಬದಲಿಸಿದರು.

ಇನ್ನು ಮದಗಜ ಟೀಸರ್​ ರಿಲೀಸ್​ಗೆ 3 ದಿನಗಳಷ್ಟೇ ಬಾಕಿಯಿದ್ದು, ಚಿತ್ರದಲ್ಲಿ ಬಹುದೊಡ್ಡ ತಾರಾಬಳಗವೇ ಇದೆ. ಶ್ರೀಮುರಳೀ ಜೋಡಿಯಾಗಿ ಆಶಿಕಾ ರಂಗನಾಥ್​, ಶಿವರಾಜ್​ ಕೆ.ಆರ್ ಪೇಟೆ, ತೆಲುಗು ನಟ ಜಗಪತಿ ಬಾಬು, ಹಿರಿಯ ನಟ ದೇವಯಾನಿ ಹೀಗೆ ದೊಡ್ಡ ಸ್ಟಾರ್ ಕಾಸ್ಟ್ ಚಿತ್ರದಲ್ಲಿದೆ. ಇನ್ನು ಚಿತ್ರಕ್ಕೆ ಮಹೇಶ್​​ ಕುಮಾರ್ ನಿರ್ದೇಶನ, ಉಮಾಪತಿ ಶ್ರೀನಿವಾಸ್ ನಿರ್ಮಾಣವಿದ್ದು, ದಿನೇ ದಿನೇ ಮದಗಜನ ಕ್ರೇಜ್​ ಹೆಚ್ಚಾಗುತ್ತಿದೆ.

Next Story

RELATED STORIES