Top

ಒಂದೇ ಸಿನಿಮಾದಲ್ಲಿ ತಂದೆ- ಮಗನ ಜುಗಲ್​ಬಂದಿ

ಕೊರಟಾಲ ಶಿವ ನಿರ್ದೇಶನದ ಆಚಾರ್ಯ ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ, ನಟಿಸುತ್ತಿರೋದು ಗೊತ್ತೇಯಿದೆ.

ಒಂದೇ ಸಿನಿಮಾದಲ್ಲಿ ತಂದೆ- ಮಗನ ಜುಗಲ್​ಬಂದಿ
X

ಮೆಗಾ ಅಭಿಮಾನಿಗಳ ಆಸೆ ಈಡೇರುವ ಕಾಲ ಹತ್ತಿರ ಬರ್ತಿದೆ. ಮೆಗಾ ಕಾಂಪೌಂಡ್​ನಿಂದ ಬ್ರೇಕಿಂಗ್​ ನ್ಯೂಸ್​ ಹೊರ ಬಿದ್ದಿದೆ. ಆಚಾರ್ಯ ಅಖಾಡಕ್ಕೆ ಮಗಧೀರ​ ಎಂಟ್ರಿ ಪಕ್ಕಾ ಆಗಿದ್ದು, ಮುಂದಿನ ವರ್ಷ ಸಮ್ಮರ್​ನಲ್ಲಿ ಸಿಲ್ವರ್​ ಸ್ಕ್ರೀನ್​ ಮೇಲೆ ಮೆಗಾ ಧಮಾಕ ಫಿಕ್ಸಾಗಿದೆ. ಒಂದ್ಕಡೆ ಮಹೇಶ್​ ಬಾಬು ಅಭಿಮಾನಿಗಳಿಗೆ ನಿರಾಸೆಯಾಗಿದ್ರೆ, ಮತ್ತೊಂದ್ಕಡೆ ಆರಂಭದಲ್ಲೇ ವಿವಾದ ಎಬ್ಬಿಸಿ, ಆಚಾರ್ಯ ಸುದ್ದಿಯಲ್ಲಿದ್ದಾನೆ.

ಟಾಲಿವುಡ್​ ಪ್ರೇಕ್ಷಕರು ಬಹಳ ವರ್ಷಗಳಿಂದ ಕಾಯುತ್ತಿದ್ದ ಆ ದಿನ ಬಂದೇ ಬಿಟ್ಟಿದೆ. ಒಂದೇ ಸಿನಿಮಾದಲ್ಲಿ ಮೆಗಾ ಸ್ಟಾರ್​ ಚಿರಂಜೀವಿ ಮತ್ತು ಪುತ್ರ ರಾಮ್​ ಚರಣ್​ ತೇಜಾ ನಟಿಸೋ ಸುದ್ದಿ ಬಂದಿದೆ. ಇದು ಸಹಜವಾಗಿಯೇ ಫಿಲ್ಮ್​​ ನಗರ್​ನಲ್ಲಿ ಹಾಟ್​ ಟಾಪಿಕ್​ ಆಗಿದೆ.

ಕೊರಟಾಲ ಶಿವ ನಿರ್ದೇಶನದ ಆಚಾರ್ಯ ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ, ನಟಿಸುತ್ತಿರೋದು ಗೊತ್ತೇಯಿದೆ. ಇತ್ತೀಚೆಗೆ ಚಿರು ಬರ್ತ್​ಡೇ ಸ್ಪೆಷಲ್ಲಾಗಿ ಚಿತ್ರದ ಮೋಷನ್​ ಪೋಸ್ಟರ್​ ಸಹ ರಿವೀಲ್​ ಆಗಿದೆ. ವಿಶೇಷ ಅಂದ್ರೆ, ಈ ಆ್ಯಕ್ಷನ್​ ಎಂಟ್ರಟ್ರೈನರ್​ ಸಿನಿಮಾದಲ್ಲಿ ಮೆಗಾಪವರ್​ ಸ್ಟಾರ್​ ರಾಮ್​ಚರಣ್​ ತೇಜಾ ಕೂಡ ಬಣ್ಣ ಹಚ್ಚುತ್ತಿದ್ದಾರೆ. ಸಿನಿಮಾ ನಿರ್ಮಾಣದ ಜೊತೆ ತೆರೆಮೇಲೂ ಆಚಾರ್ಯ ಬೆನ್ನಿಗೆ ನಿಲ್ಲುತ್ತಿದ್ದಾರೆ ಚರಣ್.

ಚಿರಂಜೀವಿ ಮತ್ತು ಕೊರಟಾಲ ಶಿವ ಕಾಂಬಿನೇಷನ್​​ನಲ್ಲಿ ಬರ್ತಿರೋ ಆಚಾರ್ಯ ಸಿನಿಮಾದಲ್ಲಿ ಮತ್ತೊಂದು ವಿಶೇಷ ಪಾತ್ರವಿದೆ. ಆ ಪಾತ್ರವನ್ನ ಸ್ಟಾರ್​ ನಟರೊಬ್ಬರು​ ಮಾಡ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಅದು ಪಕ್ಕಾ ಆಗಿದ್ದು, ರಾಮ್​ ಚರಣ್​ ತೇಜಾ ತಂದೆ ಜೊತೆ ಸ್ಕ್ರೀನ್​ ಶೇರ್​ ಮಾಡಿಕೊಳ್ಳಲಿದ್ದಾರೆ. ಈ ವಿಚಾರವನ್ನ ಸ್ವತಃ ಚರಣ್​ ಹೇಳಿದ್ದಾರೆ. ಆ ಮೂಲಕ ತಮ್ಮ ತಾಯಿ ಆಸೆ ಈಡೇರಿಸುತ್ತಿದ್ದಾರೆ.

ಚಿರಂಜೀವಿ ಮತ್ತು ರಾಮ್​ ಚರಣ್​ ಇಬ್ರು, ಈ ಹಿಂದೆ ಮಗಧೀರ, ಬ್ರೂಸ್​ಲಿ ಮತ್ತು ಕೈದಿ ನಂಬರ್​ 150 ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದರು. ಸಣ್ಣ ಸಣ್ಣ ಝಲಕ್​ನಲ್ಲಿ ಮೆಗಾ ಹೀರೋಗಳನ್ನ ನೋಡಿ ಅಭಿಮಾನಿಗಳು ಥ್ರಿಲ್ಲಾಗಿದರು.

ರಾಮ್​ಚರಣ್​ ತೇಜಾ ನಟಿಸಿದ ಮಗಧೀರ ಮತ್ತು ಬ್ರೂಸ್​ಲಿ ಸಿನಿಮಾಗಳಲ್ಲಿ ಚಿರು ಗೆಸ್ಟ್​ ಅಪಿಯರೆನ್ಸ್ ಮಾಡಿದ್ರೆ, ಚಿರು ನಟಿಸಿದ ಕೈದಿ ನಂಬರ್​ 150 ಸಿನಿಮಾ ಹಾಡೊಂದರಲ್ಲಿ ಚರಣ್​ ಸ್ಟೆಪ್ಸ್​ ಹಾಕಿದರು.

ಚಿರಂಜೀವಿ ಮತ್ತು ರಾಮ್​ ಚರಣ್​ ಇಬ್ಬರನ್ನು ಒಟ್ಟಿಗೆ ಒಂದೇ ಸಿನಿಮಾದಲ್ಲಿ ನೋಡಬೇಕು. ಇಬ್ಬರು ಮಹತ್ವದ ಪಾತ್ರಗಳನ್ನ ನಿಭಾಯಿಸಬೇಕು, ಬಹಳ ಹೊತ್ತು ತೆರೆಮೇಲೆ ದರ್ಶನ ಕೊಟ್ಟು ರಂಜಿಸಬೇಕು ಅನ್ನೋದು ಅಭಿಮಾನಿಗಳ ಆಸೆಯಾಗಿತ್ತು. ರಾಮ್​ಚರಣ್​​ ತಾಯಿ ಸುರೇಖಾ ಕೂಡ ಇದೇ ಆಸೆ ವ್ಯಕ್ತಪಡಿಸ್ತಾ ಬರ್ತಿದರು. ಆಚಾರ್ಯ ಸಿನಿಮಾ ಮೂಲಕ ಅದು ನೆರವೇರುತ್ತಿದೆ. ತಂದೆ-ಮಗ ಇಬ್ಬರೂ ಆಚಾರ್ಯ ಸಿನಿಮಾದಲ್ಲಿ ತೆರೆಹಂಚಿಕೊಳ್ಳುತ್ತಿದ್ದಾರೆ.

ಆಚಾರ್ಯ ಸಿನಿಮಾದಲ್ಲಿ ಚಿರಂಜೀವಿ ಜೊತೆ ಪ್ರಿನ್ಸ್​ ಮಹೇಶ್​ ಬಾಬು ನಟಿಸ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಮಹೇಶ್​ ಬಾಬು ಜೊತೆ ಎರಡು ಸಿನಿಮಾಗಳನ್ನ ಮಾಡಿರುವ ಕೊರಟಾಲ ಶಿವ ಅವರನ್ನೇ ಕಾಸ್ಟ್​ ಮಾಡೋದಕ್ಕೆ ಮುಂದಾಗಿದ್ದರು. ಇತ್ತ ರಾಮ್​ ಚರಣ್​ ರಾಜಮೌಳಿ ಸಿನಿಮಾದಲ್ಲಿ ಬ್ಯುಸಿಯಾಗಿದ್ರಿಂದ, ಮೆಗಾಸ್ಟಾರ್​ ಮತ್ತು ಸೂಪರ್​ ಸ್ಟಾರ್​ ಜುಗಲ್ಬಂದಿ ತೆರೆ ಮೇಲೆ ನೋಡಬಹುದು ಅಂತ ಫ್ಯಾನ್ಸ್ ಕಾಯುತ್ತಿದ್ದರು. ಆದರೆ, ಕೊರೊನಾ ಎಫೆಕ್ಟ್​ನಿಂದ ಪ್ಯಾನ್​ ಛೇಂಜ್​ ಆಗಿ ಮಹೇಶ್​ ಬಾಬು ಬದಲು ರಾಮ್​ ಚರಣ್​ ನಟಿಸುವಂತಾಗಿದೆ.

ಆಚಾರ್ಯ ಸಿನಿಮಾದಲ್ಲಿ ಸ್ಟೂಡೆಂಟ್​ ಲೀಡರ್​​ ರೋಲ್​ ಇದ್ಯಂತೆ. ಈ ಪಾತ್ರವನ್ನ ರಾಮ್​ ಚರಣ್​ ಅಥವಾ ಮಹೇಶ್​ ಬಾಬು ಮಾಡ್ಬೇಕು ಅನ್ನೋದು ನಿರ್ದೇಶಕರ ಆಸೆಯಾಗಿತ್ತು. ಚರಣ್​ ಆರ್​ಆರ್​ಆರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದು ಬಹುಕೋಟಿ ವೆಚ್ಚದ ಮಹತ್ವಾಕಾಂಕ್ಷೆಯ ಸಿನಿಮಾ. ಚಿತ್ರಕ್ಕಾಗಿ ಬಹಳ ದಿನ ಕಾಲ್​ಶೀಟ್ ಕೊಟ್ಟಿದ್ಧಾರೆ. ಅದೇ ಕಾರಣಕ್ಕೆ ಆಚಾರ್ಯ ಸಿನಿಮಾದಲ್ಲಿ ಚರಣ್​ ನಟಿಸದಿರಲು ನಿರ್ಧರಿಸಿದರು ಆದರೆ ಕೊರೊನಾ ಹಾವಳಿ ಹಿನ್ನಲೆಯಲ್ಲಿ ರಾಜಮೌಳಿ ಸಿನಿಮಾ ಶೂಟಿಂಗ್ ತಡವಾಗುತ್ತಿದೆ. ಹಾಗಾಗಿ ಆಚಾರ್ಯ ಸಿನಿಮಾದತ್ತ ಚರಣ್​ ಮುಖ ಮಾಡಿದ್ದಾರೆ.

ಮುಂದಿನ ವರ್ಷ ಸಮ್ಮರ್​ನಲ್ಲಿ ಆಚಾರ್ಯ ಸಿನಿಮಾ ರಿಲೀಸ್ ಮಾಡೋದಾಗಿ ಘೋಷಿಸಲಾಗಿದೆ. ಹಾಗಾಗಿ ಬಹಳ ಬೇಗ ಶೂಟಿಂಗ್​ ಶುರು ಮಾಡಬೇಕಿದೆ. ಕೊರೊನಾ ಆತಂಕದ ನಡುವೆ ವಯಸ್ಸಾದ ತಂದೆಯವರನ್ನ ಚಿತ್ರೀಕರಣಕ್ಕೆ ಕಳುಹಿಸೋದು ಬೇಡ ಅಂತ ಚರಣ್​ ನಿರ್ಧರಿಸಿದ್ದಾರಂತೆ. ತಂದೆ ಬದಲು ಸದ್ಯಕ್ಕೆ ತಾವೇ ಚಿತ್ರೀಕರಣದಲ್ಲಿ ಭಾಗವಹಿಸಲು ಮುಂದಾಗಿದ್ದಾರೆ. ಆಚಾರ್ಯ ಸಿನಿಮಾದಲ್ಲಿ ತಾವು ಮಾಡಬೇಕಿರುವ ಪಾತ್ರದ ಸನ್ನಿವೇಶಗಳ ಶೂಟಿಂಗ್​ ಶುರು ಮಾಡಲು ತಯಾರಿ ನಡೆಸುತ್ತಿದ್ದಾರೆ.

ಇನ್ನು ಇತ್ತೀಚೆಗೆ ಆಚಾರ್ಯ ಚಿತ್ರದ ಪೋಸ್ಟರ್ ರಿಲೀಸ್​ ಆಗಿತ್ತು. ಅದರಲ್ಲಿ ಧರ್ಮಸ್ಥಳಿ ಅನ್ನೋ ಊರಿನ ಕಥೆ ಹೇಳುತ್ತಿರೋದು ಗೊತ್ತಾಗಿತ್ತು. ಆದರೆ, ನಾನು ಮಾಡಿದ ಕಥೆಯನ್ನ ಕೊರಟಾಲ ಶಿವ, ಕದ್ದಿದ್ದಾರೆ ಅಂತ ಸಿನಿಮಾ ಬರಹಗಾರಾದ ಕನ್ನೆಗಟ್ಟಿ ಅನಿಲ್​ ಆರೋಪಿಸಿದ್ದಾರೆ. ಒಟ್ಟಾರೆಯಾಗಿ ರಾಮ್​ ಚರಣ್​ ಎಂಟ್ರಿಯಿಂದ ಆಚಾರ್ಯ ಕ್ರೇಜ್​ ಡಬಲ್ಲಾಗಿದೆ. ಎಲ್ಲಾ ಆರೋಪಗಳಿಂದ ಮುಕ್ತವಾಗಿ ಮುಂದಿನ ವರ್ಷ ತೆರೆಮೇಲೆ ಆಚಾರ್ಯ ದರ್ಬಾರ್​ ಶುರುವಾಗಲಿದೆ.

Next Story

RELATED STORIES