Top

ಅಭಿಮಾನಿಯ ಎದೆಯಲ್ಲಿ ಅಚ್ಚಾಯ್ತು ಸಲಗ

ಹೇಗಿದೆ ಗೊತ್ತಾ ಸಲಗ ಸಿನಿಮಾದ ಕ್ರೇಜ್

ಅಭಿಮಾನಿಯ ಎದೆಯಲ್ಲಿ ಅಚ್ಚಾಯ್ತು ಸಲಗ
X

ಸ್ಯಾಂಡಲ್​ವುಡ್​ನ ಮಾಸ್ ಎಂಟರ್​ಟೈನರ್​ ಸಲಗ ಸಿನಿಮಾದ ಕ್ರೇಜ್​ ದಿನೇ ದಿನೇ ಹೆಚ್ಚಾಗ್ತಾನೇ ಇದೆ. ದುನಿಯಾ ವಿಜಯ್​ ಅಭಿಮಾನಿಗಳು ಸಲಗ ಟೈಟಲ್​ನ್ನ ಟ್ಯಾಟೂ ಹಾಕಿಸಿಕೊಳ್ಳೋ ಮೂಲಕ ನೆಚ್ಚಿನ ನಟನ ಸಿನಿಮಾಗೇ ಶುಭ ಹಾರೈಸುತ್ತಿದ್ದಾರೆ. ರೀಸೆಂಟಾಗಿ ದುನಿಯಾ ವಿಜಯ್​ ಅಭಿಮಾನಿಯ ಕೈ ಮೇಲೆ ಸಲಗ ಟ್ಯಾಟೂ ನೋಡಿದ್ವಿ. ಇದೀಗ ಎದೆಯ ಮೇಲೆ ಸಲಗ ಟೈಟಲ್​ ಅಚ್ಚಾಗಿದೆ.

ದುನಿಯಾ ವಿಜಯ್​ ನಟನೆ ನಿರ್ದೇಶನದ ಸಲಗ ಸಿನಿಮಾ ಬಗ್ಗೆ ದಿನೇ ದಿನೇ ನಿರೀಕ್ಷೆ ಹೆಚ್ಚಾಗ್ತಿದೆ. ಈಗಾಗಲೇ ಟೀಸರ್, ಸಾಂಗ್ಸ್, ಅದರಲ್ಲೂ ಟೈಟಲ್​ ಟ್ರ್ಯಾಕ್​ ಅಂತೂ ಮಾಸ್ ಹಿಟ್ ಆಗಿದೆ.

ಇದೀಗ ದುನಿಯಾ ವಿಜಯ್​ರ ಅಪ್ಪಟ ಅಭಿಮಾನಿಯೊಬ್ಬರು ಎದೆಯ ಮೇಲೆ ಸಲಗ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ದುನಿಯಾ ವಿಜಯ್​ ಮನೆಗೆ ಬಂದು, ನೆಚ್ಚಿನ ನಟನ ಕೈಯ್ಯಲೇ ಟ್ಯಾಟೂ ಕವರ್​ ಓಪನ್​ ಮಾಡಿಸಿದ್ದಾರೆ. ಅಭಿಮಾನಿಯ ಅಭಿಮಾನಕ್ಕೆ ದುನಿಯಾ ವಿಜಯ್​ ಮೂಕವಿಸ್ಮಿತರಾಗಿದ್ದಾರೆ.

ಈ ಹಿಂದೆ ಕೂಡ ಉತ್ತರ ಕರ್ನಾಟಕ ಮೂಲದ, ದುನಿಯಾ ವಿಜಯ್​ರ ಅಪ್ಪಟ ಅಭಿಮಾನಿಯೊಬ್ಬ ಸಲಗ ಟ್ಯಾಟೂ ಹಾಕಿಸಿಕೊಂಡಿದರು. ಈ ಅಭಿಮಾನಿ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿರೋ ವಿಷಯ ಗೊತ್ತಾಗುತ್ತಿದ್ದ ಹಾಗೇ ಸ್ವತಃ ದುನಿಯಾ ವಿಜಯ್​ ವಿಡಿಯೋ ಕಾಲ್​ ಮಾಡಿ ಅವರ ಜೊತೆ ಮಾತನಾಡಿ ಧನ್ಯವಾದ ತಿಳಿಸಿದರು.

ಸದ್ಯ ಸಲಗ ಚಿತ್ರದ ಸ್ಯಾಂಪಲ್ಸ್​ಗೆ ಸಿನಿಪ್ರಿಯರು, ಕ್ರಿಕೆಟಿಗರು ಎಲ್ರೂ ಕೂಡ ಫಿದಾ ಆಗಿದ್ದಾರೆ. ಇನ್ನೇನಿದ್ರೂ ಥಿಯೇಟರ್ ಅಂಗಳದಲ್ಲಿ ಸಲಗ ಚಿತ್ರದ ಘರ್ಜನೆ ಕೇಳೋದೊಂದೆ ಬಾಕಿ.

Next Story

RELATED STORIES