Top

'ಸಲಾರ್'​ ಚಿತ್ರಕ್ಕೆ ಚಾಲನೆ; ಪ್ರಭಾಸ್​ಗೆ ರಾಕಿಂಗ್​ ಸ್ಟಾರ್ ಯಶ್​​ ಸಾಥ್​

ಪ್ರಶಾಂತ್‌ ನೀಲ್‌ ನಿರ್ದೇಶನದ ಬಾಹುಬಲಿ ಖ್ಯಾತಿಯ ಪ್ರಭಾಸ್‌ ನಟಿಸುತ್ತಿರುವ, ಸಲಾರ್‌ ಚಿತ್ರಕ್ಕೆ ರಾಮಾನಾಯ್ಡು ಸ್ಟುಡಿಯೋದಲ್ಲಿ ಚಾಲನೆ ನೀಡಲಾಯಿತು

ಸಲಾರ್​ ಚಿತ್ರಕ್ಕೆ ಚಾಲನೆ; ಪ್ರಭಾಸ್​ಗೆ ರಾಕಿಂಗ್​ ಸ್ಟಾರ್ ಯಶ್​​ ಸಾಥ್​
X

ಹೈದರಾಬಾದ್​: ಕೆಜಿಎಫ್‌ ಚಿತ್ರದಂಥ ಬಿಗ್‌ ಬಜೆಟ್‌ ಇಂಡಿಯನ್‌ ಸಿನಿಮಾವನ್ನು ನಿರ್ಮಾಣ ಮಾಡಿ ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್‌ನ ವಿಜಯ್‌ ಕಿರಗಂದೂರು ಅವರು ನಿರ್ಮಿಸುತ್ತಿರುವ ಹಾಗೂ ಅದೇ ಕೆಜಿಎಫ್‌ ಚಿತ್ರವನ್ನು ನಿರ್ದೇಶಿಸಿ ಮೊದಲ ಟೀಸರ್‌ನಿಂದಲೇ ಜಗತ್ತಿನ ಎಲ್ಲ ದಾಖಲೆಗಳನ್ನು ಬ್ರೇಕ್‌ ಮಾಡಿರುವ ಪ್ರಶಾಂತ್‌ ನೀಲ್‌ ನಿರ್ದೇಶನದ ಬಾಹುಬಲಿ ಖ್ಯಾತಿಯ ಪ್ರಭಾಸ್‌ ನಟಿಸುತ್ತಿರುವ, ಸಲಾರ್‌ ಚಿತ್ರಕ್ಕೆ ರಾಮಾನಾಯ್ಡು ಸ್ಟುಡಿಯೋದಲ್ಲಿ ಚಾಲನೆ ನೀಡಲಾಯಿತು.

ಮಕರ ಸಂಕ್ರಮಣದ ನಂತರ ಕನ್ನಡ ಚಿತ್ರರಂಗಕ್ಕೆ ಮತ್ತು ಭಾರತೀಯ ಚಿತ್ರಪ್ರೇಮಿಗಳಿಗೆ ಭರ್ಜರಿ ಸುದ್ದಿ ನೀಡಿರುವ ಸಲಾರ್‌ ಚಿತ್ರತಂಡದ ಸಂಭ್ರಮದಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಭಾಗವಹಿಸಿದ್ದರು.

ಇಂದು ಬೆಳಗ್ಗೆ 11 ಗಂಟೆಗೆ ಸರಿಯಾಗಿ ಮುಹೂರ್ತದ ಪೂಜೆ ನೆರವೇರಿತು. ಚಿತ್ರದ ಹೀರೋ ಪ್ರಭಾಸ್‌, ತೆಲುಗು ಮತ್ತು ಕನ್ನಡ ಚಿತ್ರರಂಗಗಳ ಅನೇಕ ಗಣ್ಯರು, ತಾರೆಯರು ಪಾಲ್ಗೊಂಡು ಶುಭ ಹಾರೈಸಿದರು. ʼಸಲಾರ್‌ʼ ಚಿತ್ರದ ಮುಹೂರ್ತದ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿ ಹೊರಹೊಮ್ಮಿದೆ.

Next Story

RELATED STORIES