Top

'ಕನಸು ಮಾರಾಟಕ್ಕಿದೆ' ಸಿನಿಮಾದ ಟೀಸರ್​ ಬಿಡುಗಡೆ

ಕನಸು ಮಾರಾಟಕ್ಕಿದೆ ಸಿನಿಮಾದ ಟೀಸರ್​ ಬಿಡುಗಡೆ
X

ಲಾಕ್​ಡೌನ್​ಗೂ ಮುನ್ನ ಮನೆ ಮಾರಾಟಕ್ಕಿದೆ ಅನ್ನೋ ಕಾಮಿಡಿ ಸಿನಿಮಾ ಬಂದು, ಪ್ರೇಕ್ಷಕರನ್ನ ನಗಿಸಿ, ಗೆದ್ದಿದ್ದು ಗೊತ್ತೇಯಿದೆ. ಲಾಕ್​ಡೌನ್​ ಮುಗಿದು ಮತ್ತೆ ಸಿನಿಮಾ ಪ್ರದರ್ಶನ ಶುರುವಾಗ್ತಿದ್ದಂತೆ, 'ಕನಸು ಮಾರಾಟಕ್ಕಿದೆ' ಅನ್ನೋ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

ಕರಾವಳಿಯ ಪ್ರತಿಭಾವಂತ ಯುವಕರು ಕನಸುಗಳನ್ನ ಮಾರಾಟ ಮಾಡಲು ಚಿತ್ರರಂಗಕ್ಕೆ ಬಂದಿದ್ದಾರೆ. ಅರ್ಥಾತ್​​ 'ಕನಸು ಮಾರಾಟಕ್ಕಿದೆ' ಅನ್ನೋ ಸಿನಿಮಾ ಮಾಡಿ ಪ್ರೇಕ್ಷಕರ ಮನಸ್ಸು ಗೆಲ್ಲಲು ಬಂದಿದ್ದಾರೆ. ಸ್ಮಿತೇಶ್​ ಎಸ್​. ಬಾರ್ಯ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದು, ಸದ್ಯ ಚಿತ್ರದ ಟೀಸರ್​ ರಿವೀಲ್​ ಆಗಿದೆ.

ಕನಸು ಮಾರಾಟಕ್ಕಿದೆ ಚಿತ್ರದಲ್ಲಿ ಪ್ರಜ್ಞೆಶ್‌ ಶೆಟ್ಟಿ ಹೀರೋ ಆಗಿ ಮಿಂಚಿದ್ರೆ, ಸ್ವಸ್ತಿಕಾ ಪೂಜಾರಿ ಹಾಗು ನವ್ಯಾ ಪೂಜಾರಿ ನಾಯಕಿಯರಾಗಿ ಸಾಥ್​ ಕೊಟ್ಟಿದ್ದಾರೆ. ಇವೆರೆಲ್ಲರಿಗೂ ಇದು ಮೊದಲ ಸಿನಿಮಾ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನೀಶ್, ಚಿತ್ರಕಥೆ, ಸಂಭಾಷಣೆ ಬರೆದು ಸಹ ನಿರ್ದೇಶಕರಾಗಿ ಚಿತ್ರತಂಡದ ಬೆನ್ನಿಗೆ ನಿಂತಿದ್ದಾರೆ. ನಿರ್ದೇಶಕ ಜೋಗಿ ಪ್ರೇಮ್,​​ ಕನಸು ಮಾರಾಟಕ್ಕಿದೆ ಚಿತ್ರದ ಟೀಸರ್​ ಲಾಂಚ್​ ಮಾಡಿ ಶುಭ ಹಾರೈಸಿದ್ದಾರೆ.

ಯುವಕರನ್ನ ಟಾರ್ಗೆಟ್​ ಮಾಡಿ ಕಟ್ಟಿಕೊಟ್ಟಿರುವ ಪಕ್ಕಾ ಕಮರ್ಷಿಯಲ್​ ಸಿನಿಮಾ ಕನಸು ಮಾರಾಟಕ್ಕಿದೆ. ಕಂಪ್ಲೀಟ್​ ಕಾಮಿಡಿ ಥ್ರಿಲ್ಲರ್​ ಸಿನಿಮಾ ಇದು. ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ, ಧೀರಜ್, ಚಿದಂಬರ, ಸೂರ್ಯ ಕುಂದಾಪುರ ಸೇರಿದಂತೆ ಸಾಕಷ್ಟು ಜನ ಕನಸು ಮಾರಾಟಕ್ಕಿದೆ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ದಕ್ಷಿಣ ಕನ್ನಡ, ಹಾಸನ, ಬೆಂಗಳೂರು ಹಾಗು ಉಡುಪಿ ಸುತ್ತಮುತ್ತ ಕನಸು ಮಾರಾಟಕ್ಕಿದೆ ಸಿನಿಮಾ ಚಿತ್ರೀಕರಣ ನಡೆಸಿದೆ. ಚಿತ್ರಕ್ಕೆ ಮಾನಸ ಹೊಳ್ಳ ಅವರು ಸಂಗೀತ ನೀಡಿದ್ದು, ವಿಜಯ ಪ್ರಕಾಶ್‌, ವಾಣಿ ಹರಿಕೃಷ್ಣ ಹಾಡಿದ್ದಾರೆ. ಕವಿರಾಜ್‌, ನಾಗೇಂದ್ರ ಪ್ರಸಾದ್‌, ಬಹದ್ದೂರ್‌' ಚೇತನ್‌ಕುಮಾರ್‌ ಹಾಡುಗಳನ್ನ ಬರೆದಿದ್ದಾರೆ. ಸಂತೋಷ್‌ ಆಚಾರ್ಯ ಛಾಯಾಗ್ರಹಣ, ಗಣೇಶ್‌ ಸಂಕಲನ ಚಿತ್ರಕ್ಕಿದೆ. ಚಿತ್ರವನ್ನು ಶಿವಕುಮಾರ್‌ ನಿರ್ಮಾಣ ಮಾಡಿದ್ದಾರೆ. ಶೀಘ್ರದಲ್ಲೇ ಕನಸು ಮಾರಾಟಕ್ಕಿದೆ ಸಿನಿಮಾ ತೆರೆಗೆ ಬರಲಿದೆ.

Next Story

RELATED STORIES