Top

ಮಲೆಯಾಳಂ ಚಿತ್ರರಂಗಕ್ಕೆ ಡಾಲಿ ಧನಂಜಯ್​ ಎಂಟ್ರಿ

ನಟ ಡಾಲಿ ಧನಂಜಯ ಸ್ಯಾಂಡಲ್​ವುಡ್​ ಮಾತ್ರವಲ್ದೆ ಪರಭಾಷೆಗಳಲ್ಲೂ ಈಗಷ್ಟೇ ಕಮಾಲ್​ ಮಾಡೋಕ್ಕೆ ಶುರು ಮಾಡಿದ್ದಾರೆ.

ಮಲೆಯಾಳಂ ಚಿತ್ರರಂಗಕ್ಕೆ ಡಾಲಿ ಧನಂಜಯ್​ ಎಂಟ್ರಿ
X

ಡಾಲಿ ಧನಂಜಯ ಸ್ಯಾಂಡಲ್​ವುಡ್​ನ ಬ್ಯುಸಿಯೆಸ್ಟ್​ ನಟ. ಹೀರೋಗೂ ಸೈ. ವಿಲನ್​​ಗೂ ಜೈ ಅಂತ ಭಿನ್ನ ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಸ್ಯಾಂಡಲ್​ವುಡ್​ ಮಾತ್ರವಲ್ದೆ ಟಾಲಿವುಡ್​ನಲ್ಲೂ ಗುರುತಿಸಿಕೊಂಡಿರುವ ಡಾಲಿ ಸದ್ಯ ಮಲೆಯಾಳಂ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ.ಸದ್ದಿಲ್ಲದೇ ಸಿನಿಮಾ ಶೂಟಿಂಗ್​ ಕೂಡ ಕಂಪ್ಲೀಟ್​ ಮಾಡಿದ್ದಾರೆ.

ಸ್ಯಾಂಡಲ್​ವುಡ್​ನ ಬ್ಯುಸಿಯೆಸ್ಟ್ ನಟ ಡಾಲಿ ಧನಂಜಯ. ಸ್ಯಾಂಡಲ್​ವುಡ್​ ಮಾತ್ರವಲ್ದೆ ಪರಭಾಷೆಗಳಲ್ಲೂ ಈಗಷ್ಟೇ ಕಮಾಲ್​ ಮಾಡೋಕ್ಕೆ ಶುರು ಮಾಡಿದ್ದಾರೆ. ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರೋ ಡಾಲಿ ಸದ್ಯ ಮಾಲಿವುಡ್​ಗೂ ಎಂಟ್ರಿ ಕೊಡ್ತಿದ್ದಾರೆ. ಚಿತ್ರಕ್ಕೆ 21 ಹವರ್ಸ್​ ಅಂತ ಟೈಟಲ್​ ಫಿಕ್ಸ್​ ಆಗಿದ್ದು, ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಕಾಣೋಕ್ಕೆ ಸಜ್ಜಾಗಿದೆ..

ಈಗಾಗಲೇ 21 ಹವರ್ಸ್​ ಚಿತ್ರದ ಶೂಟಿಂಗ್​ ಕಂಪ್ಲೀಟ್ ಆಗಿದ್ದು, ಇದೊಂದು ಸಸ್ಪೆನ್ಸ್​ ಥ್ರಿಲ್ಲರ್​ ಸಬ್ಜೆಕ್ಟ್. ಬೆಂಗಳೂರಿನಲ್ಲಿ ವಾಸವಾಗಿರುವ ಕೇರಳದ ಕುಟುಂಬವೊಂದರ ಹುಡುಗಿ ಕಾಣೆಯಾಗುತ್ತಾಳೆ. ಆಕೆಯನ್ನು ಹುಡುಕುವ ಪ್ರಕ್ರಿಯೆ ಮತ್ತು ಪೊಲೀಸ್‌ ವಿಚಾರಣೆ ಹಾಗೂ ಮುಂದಿನ 21 ಗಂಟೆಗಳಲ್ಲಿ ಏನಾಗುತ್ತೆ ಅನ್ನೋದೇ ಈ ಸಿನಿಮಾದ ಒನ್​ಲೈನ್​ ಸ್ಟೋರಿ. ಅಂದ್ಹಾಗೇ ಈ ಚಿತ್ರದಲ್ಲಿ ಡಾಲಿ ಧನಂಜಯ ಪೊಲೀಸ್​ ಆಫೀಸರ್ ಪಾತ್ರದಲ್ಲಿ ಮಿಂಚಲಿದ್ದಾರೆ. ಸದ್ಯ ಈ ಚಿತ್ರದ ಮೇಕಿಂಗ್​ ವಿಡಿಯೋ ರಿಲೀಸ್​ ಆಗಿದ್ದು, ಸಿನಿಮಾ ಮೇಲೆ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ.

ಅಂದ್ಹಾಗೇ ಕಳೆದ 20 ವರ್ಷಗಳಿಂದ ಜಾಹೀರಾತು ಕ್ಷೇತ್ರದಲ್ಲಿ ಹೆಸರು ಮಾಡಿರುವ ಜೈಶಂಕರ್‌ 21 ಹವರ್ಸ್​ ಚಿತ್ರಕ್ಕೆ ಆ್ಯಕ್ಟನ್ ಕಟ್ ಹೇಳಿದ್ದಾರೆ. ಇನ್ನು ತಮಿಳಿನ ಸೂಪರ್​ಹಿಟ್ ಪೇಟಾ, ತೆಲುಗಿನ ಜನತಾ ಗ್ಯಾರೆಜ್, ಹಾಗೂ ಕ್ರಿಶ್​ 3 ಸಿನಿಮಾಗಳಂತಹ ದೊಡ್ಡ ಸಿನಿಮಾಗಳಿಗೆ ಕ್ಯಾಮರಾವರ್ಕ್​ ಮಾಡಿರುವ ತಿರು ಈ ಚಿತ್ರದ ಸಿನಿಮಾಟೊಗ್ರಫರ್​ ಅನ್ನೋದು ವಿಶೇಷ. ಇನ್ನು ಉಳಿದಂತೆ ಡಾಲಿಗೆ ಮಲಯಾಳಂ ನಟಿ ದುರ್ಗಾ ಕೃಷ್ಣ ನಾಯಕಿಯಾಗಿದ್ದಾರೆ. ಕನ್ನಡ ಮತ್ತು ಮಲೆಯಾಳಂನಗೆ ಸಾಕಷ್ಟು ಕಲಾವಿದರು ಚಿತ್ರದಲ್ಲಿದ್ದಾರೆ.

Next Story

RELATED STORIES