Top

ನನ್ನ ಸಾವಿಗೆ ಮುನ್ನುಡಿ ಬರೆದ ಸರ್ಕಾರಕ್ಕೆ ಧನ್ಯವಾದ-ನಿರ್ದೇಶಕ ಗುರುಪ್ರಸಾದ್​ ಕಿಡಿ

ನನ್ನ ಸಾವಿಗೆ ನೀವೇ ಕಾರಣ-ಸರ್ಕಾರ ವಿರುದ್ಧ ಗುರುಪ್ರಸಾದ್ ಆಕ್ರೋಶ

ನನ್ನ ಸಾವಿಗೆ ಮುನ್ನುಡಿ ಬರೆದ ಸರ್ಕಾರಕ್ಕೆ ಧನ್ಯವಾದ-ನಿರ್ದೇಶಕ ಗುರುಪ್ರಸಾದ್​ ಕಿಡಿ
X

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ದಿನೇ ದಿನೇ ಉಬ್ಬಣಿಸುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅನೇಕ ರಾಜಕಾರಣಿಗಳು ಹಾಗೂ ಸೆಲೆಬ್ರೆಟಿಗಳಿಗೆ ಸೋಂಕು ತಗಲಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಮಠ ಚಿತ್ರದ ನಿದೇರ್ಶಕ ಗುರು ಪ್ರಸಾದ್​ ಅವರಿಗೆ ಸೋಂಕು ದೃಢಪಟ್ಟಿದ್ದು, ಕೊರೊನಾ ನಿಯಂತ್ರಣದಲ್ಲಿ ವಿಫಲವಾದ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಫೇಸ್​ಬುಕ್​ ಲೈವ್​ನಲ್ಲಿ ಅಸಮಧಾನ ಹೊರಹಾಕಿರುವ ಗುರು ಪ್ರಸಾದ್, ನನ್ನ ಸಾವಿಗೆ ಮುನ್ನುಡಿ ಬರೆದ ಸರ್ಕಾರಕ್ಕೆ ಧನ್ಯವಾದ, ಕೊರೊನಾ ಸೋಂಕಿತರ ಶಾಪಗಳು ಕೊರೊನಾ ಹೆಸರಿನಲ್ಲಿ ಕಳ್ಳತನದ ದುಡ್ಡು ಮಾಡಿರೋರ ಕೊನೆ ತನಕ ಕಾಡಬೇಕು. ಒಂದುವರೆ ವರ್ಷ ಸಮಯ ತೆಗೆದುಕೊಂಡು 3 ತಿಂಗಳು ಲಾಕ್​ಡೌನ್​ ಮಾಡಿದ್ರಿ. ಒಬ್ಬ ಮನುಷ್ಯನ ಕೆಲಸಗಳನ್ನು ನಿಲ್ಲಿಸಿದ್ರಿ, ಆದರೆ ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮೋದಿ ಪ್ರಮಾಣಿಕ ಆದರೆ ಬಿಜೆಪಿಯವರೆಲ್ಲಾ ಪ್ರಾಮಾಣಿಕರಲ್ಲಾ. ಜೆಡಿಎಸ್​ನವರು, ಕಾಂಗ್ರೆಸ್​ನವರು ಯಾರೂ ಪ್ರಾಮಾಣಿಕರಲ್ಲಾ ಎಂದು ಆಕ್ರೋಶ ಹೊರಹಾಕಿದ್ದಾರೆ.

ಒಂದೊಂದು ಮನೆಗೂ ವೈರಸ್​ ಕಳಿಸಿದ ಸರ್ಕಾರಕ್ಕೆ ಧನ್ಯವಾದ. ಈ ಸರ್ಕಾರಕ್ಕೆ ಧಿಕ್ಕಾರವಿರಲಿ. ನಿಯತ್ತಾಗಿ ಕೆಲಸ ಮಾಡಿ, ಕೊರೊನಾ ಬಂದ್ರೂ ನೀವೂ ಬುದ್ಧಿ ಕಲಿಲ್ಲ, ನಿಮ್ಮನ್ನ ಕಳಿಸಿರುವುದು ರಾಜಕೀಯ ಮಾಡೋಕಲ್ಲಾ, ಆಡಳಿತ ಮಾಡಲಿಕ್ಕೆ. ಒಬ್ಬನಿಗಿಂತ ಇನ್ನೊಬ್ಬ ಹೆಚ್ಚಾಗಿ ಜನ ಸೇವೆ ಮಾಡ್ತೀನಿ ಅನ್ನಬೇಕು ಅದನ್ನು ಬಿಟ್ಟು ಭ್ರಷ್ಟಾಚಾರ ಮಾಡ್ತಾರೆ. ನನ್ನ ಸಾವಿಗೆ ನೀವೇ ಕಾರಣ ಎಂದು ಸಚಿವ ಡಾ.ಸುಧಾಕರ್​, ಬಿವೈ ವಿಜಯೇಂದ್ರ ಹಾಗೂ ಸರ್ಕಾರ ಕಾರಣ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಯಾವ ಬ್ಯುಸಿನೆಸ್​ ನಿಲ್ಲಿಸಬೇಡಿ. ಸೋಂಕು ಹರಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

Next Story

RELATED STORIES