Top

ಅಂಬಿ ಪುತ್ರನ ಜೊತೆ ರೊಮಾನ್ಸ್ ಮಾಡಲಿದ್ದಾರೆ ಡಿಂಪಲ್ ಕ್ವೀನ್

ಜೂ.ರೆಬೆಲ್ಸ್ಟಾರ್ ಬ್ಯಾಡ್ ಮ್ಯಾನರ್ಸ್ಗೆ ನಾಯಕಿ ಎಂಟ್ರಿ..

ಅಂಬಿ ಪುತ್ರನ ಜೊತೆ ರೊಮಾನ್ಸ್ ಮಾಡಲಿದ್ದಾರೆ ಡಿಂಪಲ್ ಕ್ವೀನ್
X

ಜೂನಿಯರ್​ ರೆಬೆಲ್​ ಸ್ಟಾರ್ 2ನೇ ವೆಂಚರ್ ಬ್ಯಾಡ್​ ಮ್ಯಾನರ್ಸ್​ ಟೈಟಲ್​ ಮತ್ತು ಫಸ್ಟ್​ ಲುಕ್​ನಿಂದಲೇ ಸಖತ್​ ಕ್ಯೂರಿಯಾಸಿಟಿ ಬಿಲ್ಡ್​ ಮಾಡಿದ್ದು, ಮೈಸೂರಿನಲ್ಲಿ ಅದ್ದೂರಿಯಾಗಿ ಮುಹೂರ್ತ ಸಮಾರಂಭ ನಡೆದಿದ್ದು, ಇದೆಲ್ಲ ಗೊತ್ತೇ ಇದೆ. ಆದ್ರೆ ಈಗ ಹೊಸ ಸುದ್ದಿ ಏನಪ್ಪಾ ಅಂದ್ರೆ ಈ ಚಿತ್ರತಂಡಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಆ್ಯಡ್ ಆನ್ ಆಗಿದ್ದಾರೆ.

ಅಭಿಷೇಕ್​ ಅಂಬರೀಶ್​ ಅಭೀನಯದ 2ನೇ ಸಿನಿಮಾ ಬ್ಯಾಡ್​ ಮ್ಯಾನರ್ಸ್ ಸೆಟ್ಟೇರಿದಾಗಿನಿಂದ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಚಿತ್ರದ ಟೈಟಲ್​ ಜೊತೆಗೆ ಸುಕ್ಕಾ ಸೂರಿ, ಅಭಿಗೆ ಆ್ಯಕ್ಷನ್​ ಕಟ್ ಹೇಳ್ತಾರೆ ಅಂದಾಗಲೇ ಚಿತ್ರದ ಬಗ್ಗೆ ಸಖತ್ ಕ್ಯೂರಿಯಾಸಿಟಿ ಬಿಲ್ಡ್ ಆಗಿತ್ತು. ಆ ನಂತರ ಚಿತ್ರದ ಫಸ್ಟ್ ಲುಕ್​ ಪೋಸ್ಟರ್ ಆ ಕ್ಯೂರಿಯಾಸಿಟಿಯನ್ನ ಡಬಲ್​ ಮಾಡಿತ್ತು.

ಇನ್ನು ಈ ಬ್ಯಾಡ್ ಮ್ಯಾನರ್ಸ್ ಸಿನಿಮಾ ನಿರೀಕ್ಷೆಗಳ ಜೊತೆಗೆ ಸಾಕಷ್ಟು ಕುತೂಹಲಕ್ಕೂ ಕಾರಣವಾಗಿತ್ತು. ಸಿನಿಮಾ ಸೆಟ್ಟೇರಿ ಇಷ್ಟು ದಿನ ಕಳೆದರು ಚಿತ್ರದ ತಾರಾಗಣದ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಅದರಲ್ಲು ಅಭಿಷೇಕ್ ಜೊತೆ ನಾಯಕಿಯಾಗಿ ಯಾರು ಸ್ಕ್ರೀನ್ ಶೇರ್ ಮಾಡ್ತಾರೆ ಅನ್ನೋ ಕುತೂಹಲ ಮನೆ ಮಾಡಿತ್ತು. ಈಗ ಈ ಕುತೂಹಲಕ್ಕೆ ಚಿತ್ರತಂಡ ತೆರೆ ಎಳೆದಿದೆ.

ಜೂ.ರೆಬಲ್ ಸ್ಟಾರ್ ಎರಡನೇ ಚಿತ್ರದಲ್ಲಿ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಣಿಸಿಕೊಳ್ತಿದ್ದಾರೆ. ಈಗಾಗಲೇ ರೆಬಲ್ ಸ್ಟಾರ್ ಅಂಬರೀಶ್​ ಜೊತೆ ಎರಡು ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದ ರಚಿತಾ ಈಗ ಅಭಿ ಜೊತೆ ನಾಯಕಿಯಾಗಿ ಮಿಂಚಲಿದ್ದಾರೆ.

ಇನ್ನು ಈ ಚಿತ್ರದಲ್ಲಿ ಅಭಿಷೇಕ್ ಇಬ್ಬರು ನಾಯಕಿಯರೊಂದಿಗೆ ಹೆಜ್ಜೆ ಹಾಕ್ತಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಜೊತೆ ತಮಿಳು ಕಿರುತೆರೆ ನಟಿ ಪ್ರಿಯಾಂಕಾ ಬ್ಯಾಡ್ ಮ್ಯಾನರ್ಸ್ ನಲ್ಲಿ ಅಭಿಷೇಕ್ ಗೆ ಜೊತೆಯಾಗುತ್ತಿದ್ದಾರೆ.

ಈಗಾಗ್ಲೇ ಬ್ಯಾಡ್ ಮಾನರ್ಸ್​ ಚಿತ್ರೀಕರಣ ಪ್ರಾರಂಭವಾಗಿದ್ದು ರಚಿತಾ ಆದಷ್ಟು ಬೇಗ ಚಿತ್ರತಂಡ ಸೇರಲಿದ್ದಾರೆ. ರಚಿತಾ ಪಾತ್ರದ ಬಗ್ಗೆ ಇನ್ನು ಯಾವ ಸುಳಿವನ್ನೂ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಇನ್ನು ಸುಕ್ಕ ಸೂರಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬ್ಯಾಡ್ ಮ್ಯಾನರ್ಸ್​ ನಲ್ಲಿ ನಟಿ ತಾರಾ, ಶರತ್ ಲೋಹಿತಾಶ್ವ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

ಮೊದಲ ಸಿನಿಮಾ ಅಮರ್ ನಲ್ಲಿ ಲವರ್ ಬಾಯ್ ಆಗಿ, ರೊಮ್ಯಾಂಟಿಕ್ ಹೀರೋ ಆಗಿ ಸೈ ಅನ್ನಿಸಿಕೊಂಡಿದ್ದ ಅಭಿಷೇಕ್ ಎರಡನೇ ಸಿನಿಮಾದಲ್ಲಿ ವಿಭಿನ್ನ ಶೇಡ್ನಲ್ಲಿ ಕಾಣಿಸಿಕೊಳ್ತಿದ್ದಾರೆ. ಬ್ಯಾಡ್ ಮಾನರ್ಸ್​ ಪಕ್ಕಾ ಮಾಸ್ ಅಂಡ್ ರಾ ಸಿನಿಮಾ ಆಗಿದ್ದು ಅಭಿಷೇಕ್ ಮತ್ತು ಸೂರಿ ಕಾಂಬಿನೇಷನ್​​ ಚಿತ್ರವನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕೂಡ ಕಾತುರರಾಗಿ ಕಾಯ್ತಿದ್ದಾರೆ.

Next Story

RELATED STORIES