Top

ಹೊಸ ಕ್ಲೈಮಾಕ್ಸ್​ನೊಂದಿಗೆ ದಿಯಾ ರೀ ರಿಲೀಸ್

ಇದೇ ತಿಂಗಳ 23ರಂದು ದಿಯಾ ಬಿಗ್​ ಸ್ಕ್ರೀನ್​ನಲ್ಲಿ ರೀ ರಿಲೀಸ್ ಆಗುತ್ತಿದೆ

ಹೊಸ ಕ್ಲೈಮಾಕ್ಸ್​ನೊಂದಿಗೆ ದಿಯಾ ರೀ ರಿಲೀಸ್
X

ಇಷ್ಟು ದಿನ ಲಾಕ್​ಡೌನ್​ ಆಗಿದ್ದ ಥಿಯೇಟರ್​ಗಳು ಅನ್​ಲಾಕ್​ ಆಗಿವೆ. ಥಿಯೇಟರ್ ರೀ ಓಪನ್​ ಆಗಿದ್ದೇ ತಡ ಸಾಲು ಸಾಲು ಸಿನಿಮಾಗಳು ರೀ ರಿಲೀಸ್​ ಆಗ್ತಾ ಇದೆ. ಅದರಲ್ಲಿ ಸ್ಯಾಂಡಲ್​ವುಡ್​ ಸೂಪರ್​ ಹಿಟ್ ಲವ್​ಸ್ಟೋರಿ ದಿಯಾ ಕೂಡ ಒಂದು.

ಸ್ಯಾಂಡಲ್​ವುಡ್​ನ​ ಈ ವರ್ಷದ ಹಿಟ್ ಸಿನಿಮಾಗಳಲ್ಲಿ ದಿಯಾ ಕೂಡ ಒಂದು. ಥಿಯೇಟರ್ ಅಂಗಳದಲ್ಲಿ ಅಷ್ಟೇನೂ ಸದ್ದು ಮಾಡದ ದಿಯಾ, ಓಟಿಟಿ ಪ್ಲಾಟ್​ಫಾರ್ಮ್​ಗೆ ಎಂಟ್ರಿ ಕೊಡುತ್ತಿದ್ದ ಹಾಗೇ ಜನ ಮಗಿಬಿದ್ದು ಸಿನಿಮಾ ನೋಡಿದರು. ಬಿಗ್​ ಸ್ಕ್ರೀನ್​ನಲ್ಲಿ ಇಂತದ್ದೊಂದು ಸಿನಿಮಾ ಮಿಸ್​ ಮಾಡಿಕೊಂಡ್ವಿ ಅಂತ ಬೇಸರ ವ್ಯಕ್ತಪಡಿಸಿದರು ಆದರೆ ಇದೀಗ ಮತ್ತೊಮ್ಮೆ ದಿಯಾ ಚಿತ್ರವನ್ನ ದೊಡ್ಡ ಪರದೆ ಮೇಲೆ ನೋಡೋ ಅವಕಾಶ ಸಿಗುತ್ತಿದೆ. ಇದೇ ತಿಂಗಳ 23ರಂದು ದಿಯಾ ಬಿಗ್​ ಸ್ಕ್ರೀನ್​ನಲ್ಲಿ ರೀ ರಿಲೀಸ್ ಆಗುತ್ತಿದೆ.

ಅಂದ್ಹಾಗೇ ದಿಯಾ ಚಿತ್ರವನ್ನ ಓಟಿಟಿ ಪ್ಲಾಟ್​ಫಾರ್ಮ್​ ನಲ್ಲಿ ನೋಡಿದವ್ರೆಲ್ಲಾ ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್​ ಕೊಟ್ರು ಕೂಡ ಕ್ಲೈಮಾಕ್ಸ್​ ಬಗ್ಗೆ ಕೊಂಚ ಬೇಸರ ವ್ಯಕ್ತಪಡಿಸಿದರು. ಲವ್​ ಸ್ಟೋರಿಯಲ್ಲಿ ಹ್ಯಾಪಿ ಎಂಡಿಂಗ್​ ಇರ್ಬೇಕಿತ್ತು ಅನ್ನೋದು ಹಲವರ ಅಭಿಪ್ರಾಯವಾಗಿತ್ತು. ಆದಿ ಸಾಯಬಾರದಿತ್ತು. ದಿಯಾ ಆದಿ ಒಂದಾಗಿದ್ದಿದ್ರೆ ಚೆನ್ನಾಗಿರ್ತಿತ್ತು ಅನ್ನೋ ಮಾತುಗಳು ಕೇಳಿ ಬಂದಿದ್ವು. ಹಾಗಾಗಿ ಇದೀಗ ದಿಯಾ ಕ್ಲೈಮಾಕ್ಸ್​ನ್ನ ರೀ ಶೂಟ್ ಮಾಡಲಾಗ್ತಿದ್ಯಂತೆ. ಕ್ಲೈಮಾಕ್ಸ್​ ಬದಲಾವಣೆಯೊಂದಿಗೆ, ಹೊಸ ಟ್ವಿಸ್ಟ್​ ಆ್ಯಡ್​ ಮಾಡಲಾಗಿದ್ಯಂತೆ. ಅದೇನೂ ಅನ್ನೋದನ್ನ 23ನೇ ತಾರೀಖು ಥಿಯೇಟರ್​ನಲ್ಲೇ ನೋಡಬಹುದು.

ಇನ್ನು ದಿಯಾ ಚಿತ್ರಕ್ಕೆ ಅಶೋಕ್​ ಆ್ಯಕ್ಷನ್​ ಕಟ್ ಹೇಳಿದರು. ಖುಷಿ ರವಿ ದಿಯಾ ಪಾತ್ರದಲ್ಲಿ ಮಿಂಚಿದ್ರೆ, ಆದಿಯಾಗಿ ಪೃಥ್ವಿ ಅಂಬರ್, ರೋಹಿತ್ ಆಗಿ ದೀಕ್ಷಿತ್ ಶೆಟ್ಟಿ ಅಭಿನಯಿಸಿದರು. ಈ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಸಖತ್​ ಟಾಕ್​ ಕ್ರಿಯೇಟ್ ಮಾಡಿದ್ದು, ಇಡೀ ಚಿತ್ರತಂಡಕ್ಕೆ ಹೆಸರು ತಂದುಕೊಟ್ಟಿತ್ತು. ಇದೀಗ ಹೊಸ ಕ್ಲೈಮಾಕ್ಸ್​ನೊಂದಿಗೆ ದಿಯಾ ಸಿನಿಮಾ ಹೇಗಿರುತ್ತೆ ಅಂತ ನೋಡೊ ಕುತೂಹಲ ಶುರುವಾಗಿದೆ.

Next Story

RELATED STORIES