Top

ಅಣ್ಣನ ಅಗಲಿಕೆಯಿಂದ ಕೊಂಚ ಚೇತರಿಸಿಕೊಂಡ ಧ್ರುವಾ ಶೂಟಿಂಗ್​ನಲ್ಲಿ ಭಾಗಿ

ಸಹೋದರ ಚಿರು ಸರ್ಜಾ ಅಗಲಿಕೆಯಿಂದ ಬೇಸರದಲ್ಲಿದ್ದ ಧ್ರುವಾ , ಈಗಷ್ಟೇ ಕೊಂಚ ಚೇತರಿಸಿಕೊಂಡಿದ್ದಾರೆ. ಹಾಗಾಗಿ ಪೊಗರು ಶೂಟಿಂಗ್​ಗೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ.

ಅಣ್ಣನ ಅಗಲಿಕೆಯಿಂದ ಕೊಂಚ ಚೇತರಿಸಿಕೊಂಡ ಧ್ರುವಾ ಶೂಟಿಂಗ್​ನಲ್ಲಿ ಭಾಗಿ
X

ಲಾಕ್​ಡೌನ್​ ಸಡಿಲಿಕೆ ಆಗ್ತಿದ್ದ ಹಾಗೇ ಸ್ಯಾಂಡಲ್​ವುಡ್​ನ ಸ್ಟಾರ್​ಗಳೆಲ್ಲಾ ಒಬ್ಬರಾಗಿಯೇ ಶೂಟಿಂಗ್​ ಅಖಾಡಕ್ಕೆ ಇಳಿದ್ರು.ಆದ್ರೆ ಅಣ್ಣನ ಅಗಲಿಕೆಯಿಂದ ನೊಂದಿದ್ದ ಧ್ರುವಾ ಸರ್ಜಾ ಮಾತ್ರ ಬಹಳ ದಿನಗಳ ಕಾಲ ಎಲ್ಲದ್ರಿಂದ ಕೊಂಚ ದೂರವೇ ಇದ್ದರು ಆದರೆ ಈಗ ಪ್ರಿನ್ಸ್​, ಕಂಪ್ಲೀಟ್ ಆ್ಯಕ್ಟಿವ್ ಆಗಿ, ಪೊಗರು ಶೂಟಿಂಗ್​​ನ ಕೊನೆಯ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ.

ಲಾಕ್​ಡೌನ್​ ಸಡಿಲಿಕೆ ಆಗ್ತಿದ್ದ ಸ್ಯಾಂಡಲ್​ವುಡ್​​ ಆಲ್​ಮೋಸ್ಟ್ ಆ್ಯಕ್ಟಿವ್​ ಮೋಡ್​ನಲ್ಲಿದೆ. ಎಲ್ಲಾ ಸ್ಟಾರ್​ಗಳು ಅರ್ಧಕ್ಕೆ ನಿಂತಿದ್ದ ತಮ್ಮ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾದರು ಆದರೆ ಆ್ಯಕ್ಷನ್​ ಪ್ರಿನ್ಸ್ ಧ್ರುವಾ ಸಜಾ ಮಾತ್ರ, ವರ್ಕ್​ ಮಾಡೋ ಡ್​ನಲ್ಲಿ ಇರಲಿಲ್ಲ. ಸಹೋದರ ಚಿರು ಸರ್ಜಾ ಅಗಲಿಕೆಯಿಂದ ಬೇಸರದಲ್ಲಿದ್ದ ಧ್ರುವಾ , ಈಗಷ್ಟೇ ಕೊಂಚ ಚೇತರಿಸಿಕೊಂಡಿದ್ದಾರೆ. ಹಾಗಾಗಿ ಪೊಗರು ಶೂಟಿಂಗ್​ಗೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ.

ಪೊಗರು. ಸಿನಿಮಾ ಶುರುವಾಗಿ ಸುಮಾರು 3 ವರ್ಷಗಳೇ ಆಗ್ತಾ ಇದೆ. ಆ ಮಧ್ಯೆ ಲಾಕ್​ಡೌನ್​ನಿಂದ ಒಂದಷ್ಟು ಸಮಯ ಗ್ಯಾಪ್​ ಕೂಡ ಆಯ್ತು. ಇನ್ನು ಪೊಗರು ಸ್ಯಾಂಪಲ್​ಗಳಿಂದ ಸಿನಿಮಾ ಮೇಲೆ ಕ್ಯೂರಿಯಾಸಿಟಿ ಹೆಚ್ಚಾಗಿದ್ದು, ಸಿನಿಮಾ ಶೂಟಿಂಗ್ ಯಾವಾಗ ಕಂಪ್ಲೀಟ್ ಆಗುತ್ತೆ.

ಯಾವಾಗ ರಿಲೀಸ್​ ಆಗುತ್ತೆ ಅಂತ ಕಾಯ್ತಾ ಇದ್ದರು. ಫೈನಲಿ ಪೊಗರು ಚಿತ್ರದ ಕೊನೆಯ ಹಂತದ​ ಶೂಟಿಂಗ್​ಗೆ ಚಿತ್ರತಂಡ ಸಜ್ಜಾಗಿದೆ. ಇದೇ ಸೆಪ್ಟೆಂಬರ್​ 25 ರಿಂದ ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡೋಕ್ಕೆ ಸಜ್ಜಾಗಿದ್ದಾರೆ ನಿರ್ದೇಶಕ ನಂದಕಿಶೋರ್​. ಬೆಂಗಳೂರಿನ ಹೆಚ್​ಎಮ್​ಟಿ ಯಲ್ಲಿ ಅದ್ದೂರಿ, ರಗಡ್​ ಸೆಟ್ ಹಾಕಲಾಗಿದೆ. ಈ ಸೆಟ್​ನಲ್ಲಿ 5 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಕೊಂಚ ಪ್ಯಾಚ್​ ವರ್ಕ್​ ಜೊತೆಗೆ ಧ್ರುವಾ ಇಂಟ್ರೋಡಕ್ಷನ್​ ಸಾಂಗ್​ ಶೂಟಿಂಗ್​ ಆಗಲಿದೆ.ಈಗಾಗ್ಲೇ ರಿಲೀಸ್​ ಆಗಿರೋ ಪೊಗರು ಅಣ್ಣನಿಗೆ ಪೊಗರು ಹಾಡಿನ ಚಿತ್ರೀಕರಣ ಕಂಪ್ಲೀಟ್ ಆಗಲಿದೆ. ಅಂದ್ಹಾಗೇ ಈ 5 ದಿನಗಳ ಚಿತ್ರೀಕರಣ ಮುಗಿದ್ರೆ ಅಲ್ಲಿಗೆ ಪೊಗರು ಶೂಟಿಂಗ್​​ಗೆ ಕುಂಬಳಕಾಯಿ ಹೊಡೆಯಲಿದೆ ಚಿತ್ರತಂಡ.

ಪೊಗರು ಚಿತ್ರೀಕರಣ ಮುಗಿತಿದ್ದ ಹಾಗೇ ಫೋಸ್ಟ್ ಪ್ರೊಡಕ್ಷನ್​ ವರ್ಕ್​ ಭರದಿಂದ ಸಾಗಲಿದೆ. ಆದಷ್ಟು ಬೇಗ ಸಿನಿಮಾ ರೆಡಿಮಾಡಿ ಪ್ರೇಕ್ಷಕರ ಮುಂದೆ ತರೋ ಪ್ಲಾನ್​ನಲ್ಲಿದ್ದಾರೆ ನಂದಕಿಶೋರ್​. ಎಲ್ಲಾ ಅಂದುಕೊಂಡಂತೆ ಆದರೆ ಜನವರಿಗೆ ಸಿನಿಮಾ ತೆರೆಗೆ ಬರೋ ಸಾಧ್ಯತೆಯಿದೆ.

Next Story

RELATED STORIES