Top

ಚಿರು ಹುಟ್ಟುಹಬ್ಬಕ್ಕೆ ಧ್ರುವಾ ಹೊಸ ಸಿನಿಮಾ ಅನೌನ್ಸ್

ಚಿತ್ರಕ್ಕೆ ಇನ್ನು ಟೈಟಲ್​ ಫಿಕ್ಸ್ ಆಗಿಲ್ಲದ ಕಾರಣ ಸದ್ಯ 'DS5' ಹೆಸರಿನಲ್ಲಿ ಪೂಜೆ ನೆರವೇರಿದೆ.

ಚಿರು ಹುಟ್ಟುಹಬ್ಬಕ್ಕೆ ಧ್ರುವಾ ಹೊಸ ಸಿನಿಮಾ ಅನೌನ್ಸ್
X

ಅಣ್ಣನ ಹುಟ್ಟುಹಬ್ಬದ ದಿನ ಧ್ರುವಾ ಸರ್ಜಾ ಹೊಸ ಸಿನಿಮಾ ಸೆಟ್ಟೇರೋ ವಿಚಾರವನ್ನ ಈ ಮೊದಲು ನಾವೇ ನಿಮಗೆ ಹೇಳಿದ್ವಿ. ಅದರಂತೆ ಇವತ್ತು ಬಹಳ ಸಿಂಪಲ್ಲಾಗಿ ಹೊಸ ಚಿತ್ರದ ಸ್ಕ್ರಿಪ್ಟ್​ ಪೂಜೆ ನೆರವೇರಿಸಿದೆ ಡಿಎಸ್​5 ಚಿತ್ರ.


ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ದಿನ ಧ್ರುವಾ ಹೊಸ ಸಿನಿಮಾ ಅನೌನ್ಸ್​ ಮಾಡ್ತಾರೆ. ಇಷ್ಟು ದಿನ ಬಿಟ್ಟಿದ್ದ ಗಡ್ಡಕ್ಕೆ ಕತ್ತರಿ ಹಾಕ್ತಾರೆ ಅಂತೆಲ್ಲಾ ಸುದ್ದಿಯಾಗಿತ್ತು. ಆದರೆ, ಇದೀಗ ಅದೆ ಬಿಯರ್ಡ್​ ಲುಕ್​ನಲ್ಲಿ ಕಾಣಿಸಿಕೊಂಡಿರೋ ದ್ರುವಾ ಹೊಸ ಸಿನಿಮಾದ ಪೂಜೆಯನ್ನ ಮಾತ್ರ ನೆರವೇರಿಸಿದ್ದಾರೆ.


ಪೊಗರು ಚಿತ್ರದ ನಂತರ ಧ್ರುವಾ ಸರ್ಜಾ ಮತ್ತೊಮ್ಮೆ ನಂದಕಿಶೋರ್​ ನಿರ್ದೇಶನದಲ್ಲೇ ಮತ್ತೊಂದು ಸಿನಿಮಾ ಮಾಡ್ತಾರೆ ಅನ್ನೋದು ಹಳೇ ವಿಚಾರ. ಅದರಂತೆ ಮೊನ್ನೆ ಮೊನ್ನೆಯಷ್ಟೇ ಧ್ರುವಾ ಹುಟ್ಟುಹಬ್ಬಕ್ಕೆ 'DS5' ಚಿತ್ರದ ಪೋಸ್ಟರ್ ಕೂಡ ರಿಲೀಸ್​ ಆಗಿತ್ತು. ಇದೀಗ ಚಿತ್ರದ ಸ್ಕ್ರಿಪ್ಟ್​ ಪೂಜೆ ಮಾಡೋ ಮೂಲಕ ಅಫಿಶೀಯಲ್​ ಆಗಿ ಸಿನಿಮಾಗೇ ಚಾಲನೆ ಕೊಡಲಾಗಿದೆ.

ಬಸವೇಶ್ವರ ನಗರದ ಗಣಪತಿ ದೇವಸ್ಥಾನದಲ್ಲಿ ಬಹಳ ಸಿಂಪಲ್ಲಾಗಿ ಸ್ಕ್ರಿಪ್ಟ್ ಪೂಜೆ ಮಾಡಿದ್ದು, ಧ್ರುವಾ ಸೇರಿದಂತೆ ನಿರ್ದೇಶಕ ನಂದಕಿಶೋರ್, ನಿರ್ಮಾಪಕ ಉದಯ್ ಮೆಹ್ತಾ ಹಾಜರಿದ್ದರು. ಚಿತ್ರಕ್ಕೆ ಇನ್ನು ಟೈಟಲ್​ ಫಿಕ್ಸ್ ಆಗಿಲ್ಲದ ಕಾರಣ ಸದ್ಯ 'DS5' ಹೆಸರಿನಲ್ಲಿ ಪೂಜೆ ನೆರವೇರಿದೆ.


ಸದ್ಯ ಧ್ರುವಾ ಸರ್ಜಾ ಈಗಷ್ಟೇ ಪೊಗರು ಚಿತ್ರದ ಕೊನೆಯ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದರು. ಪೊಗರು ರಿಲೀಸ್ಗೂ ಮುನ್ನವೇ 5ನೇ ಚಿತ್ರದ ಪೂಜೆ ನೆರವೇರಿಸಿದ್ದಾರೆ. ಇದೇ ನವೆಂಬರ್​ನಿಂದ ಹೊಸ ಚಿತ್ರದ ಶೂಟಿಂಗ್​ ಶುರು ಮಾಡೋ ಪ್ಲಾನ್​ನಲ್ಲಿದೆ ಚಿತ್ರತಂಡ.

Next Story

RELATED STORIES