Top

ಸೆಕೆಂಡ್​ ಶೆಡ್ಯೂಲ್ ಶೂಟಿಂಗ್​ಗೆ ರೆಡಿಯಾದ 'ಧೀರ ಸಾಮ್ರಾಟ್​' ಚಿತ್ರತಂಡ

‘ಧೀರ ಸಾಮ್ರಾಟ್​’ ಇದೇ ಜೂನ್ ಅಥವಾ ಜುಲೈನಲ್ಲಿ ತೆರೆಗೆ ಬರಬೇಕಿತ್ತು

ಸೆಕೆಂಡ್​ ಶೆಡ್ಯೂಲ್ ಶೂಟಿಂಗ್​ಗೆ ರೆಡಿಯಾದ ಧೀರ ಸಾಮ್ರಾಟ್​ ಚಿತ್ರತಂಡ
X

ಲಾಕ್​ಡೌನ್​ ನಂತರ ಅರ್ಧಕ್ಕೆ ನಿಂತಿದ್ದ ಸಾಕಷ್ಟು ಸಿನಿಮಾಗಳು ಮತ್ತೆ ಶೂಟಿಂಗ್​ ಮಾಡೋಕ್ಕೆ ಸಜ್ಜಾಗುತ್ತಿವೆ. ಅದರಲ್ಲಿ ಹೊಸತಂಡದ ಧೀರ ಸಾಮ್ರಟ್​ ಸಿನಿಮಾ ಕೂಡ ಒಂದು. ಧೀರ ಸಾಮ್ರಾಟ್​ ಚಿತ್ರತಂಡ ಹೊಸ ಹುರುಪಿನೊಂದಿಗೆ ಸೆಕೆಂಡ್ ಶಡ್ಯೂಲ್​ ಶೂಟಿಂಗ್​ಗೆ ರೆಡಿಯಾಗಿದೆ.

ಧೀರ ಸಾಮ್ರಾಟ್​. ಸ್ಯಾಂಡಲ್​ವುಡ್​ನಲ್ಲಿ ಸೆಟ್ಟೇರಿದಾಗಿನಿಂದ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗುತ್ತಿರೋವ ಸಿನಿಮಾ. ಸದ್ಯ ಚಿತ್ರ ತಂಡ ಫಸ್ಟ್ ಶೆಡ್ಯೂಲ್​ ಶೂಟಿಂಗ್​ ಕಂಪ್ಲೀಟ್ ಮಾಡಿದ್ದು ಮೊದಲ ಹಂತದ ಚಿತ್ರೀಕರಣದಲ್ಲಿ ಟಾಕಿ ಪೋರ್ಶನ್ ಕಂಪ್ಲೀಟ್ ಮಾಡಲಾಗಿದೆ.

ಈಗಾಗಲೇ ಧೀರ ಸಾಮ್ರಾಟ್​​ ಚಿತ್ರದ ಶೇಕಡಾ 90ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಇದೀಗ ಸೆಕೆಂಡ್ ಶೆಡ್ಯೂಲ್ ಚಿತ್ರೀಕರಣ ಶುರುವಾಗುತ್ತಿದೆ. 2 ಫೈಟ್ಸ್​ ಮತ್ತು ಹಾಡುಗಳ ಚಿತ್ರೀಕರಣ ಬಾಕಿ ಇದೆ. ನವೆಂಬರ್ 25 ರಿಂದ ಶೂಟಿಂಗ್​ ಶುರುವಾಗಲಿದ್ದು, ಮುರಳಿ ಮಾಸ್ಟರ್ ಕೊರಿಯೊಗ್ರಫೀ ಮತ್ತು ಕೌರವ್​ ವೆಂಕಟೇಶ್​ ಸಾರಥ್ಯದಲ್ಲಿ ಸಾಂಗ್ಸ್​ ಮತ್ತು ಫೈಟ್​ ಶೂಟಿಂಗ್​ ನಡೆಯಲಿದೆ.

ಇನ್ನು ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು ಭರಾಟೆ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಮೂರು ಹಾಡು, ಕವಿರತ್ನ ಡಾ.ವಿ. ನಾಗೇಂದ್ರ ಪ್ರಸಾದ್ ಒಂದು ಹಾಗೂ ಖುದ್ದು ನಿರ್ದೇಶಕ ಪವನ್ ಕುಮಾರ್ ಅಲಿಯಾಸ್​ ಪಚ್ಚಿ ಟೈಟಲ್ ಸಾಂಗ್​ಗೆ ಸಾಹಿತ್ಯ ಬರೆದಿದ್ದಾರೆ. ರಾಘವ್ ಸಂತೋಷ್ ಧೀರ ಸಾಮ್ರಾಟನಿಗೆ ಮ್ಯೂಸಿಕ್​ ಮಾಡಿದ್ದಾರೆ.

ಕಿರುತೆರೆಯಲ್ಲಿ ವಿಡಿಯೋ ಜಾಕಿಯಾಗಿ ಸಾಕಷ್ಟು ಹೆಸರು ಮಾಡಿರುವ ಪವನ್ ಕುಮಾರ್​ ಅಲಿಯಾಸ್​ ಪಚ್ಚಿ​​​ ನಿರೂಪಕ ವೃತ್ತಿಗೆ ಗುಡ್​ ಬೈ ಹೇಳಿ ಧೀರ ಸಾಮ್ರಾಟ್​ ಮೂಲಕ ಡೈರೆಕ್ಟರ್ ಕ್ಯಾಪ್​ ತೊಟ್ಟಿದ್ದಾರೆ. ಅಷ್ಟೇಅಲ್ಲ ಪವನ್​ ಈ ಚಿತ್ರದಲ್ಲಿ ಖುದ್ದು ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಂದ್ಹಾಗೇ ಚಿತ್ರದ ಲೀಡ್​ ರೋಲ್​ನಲ್ಲಿ ರಾಕೇಶ್ ಮತ್ತು ಅದ್ವಿತಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆಗಿದ್ರೆ 'ಧೀರ ಸಾಮ್ರಾಟ್​' ಇದೇ ಜೂನ್ ಅಥವಾ ಜುಲೈನಲ್ಲಿ ತೆರೆಗೆ ಬರಬೇಕಿತ್ತು. ಆದರೆ, ಕೊರೋನಾ ಅಟ್ಟಹಾಸದಿಂದ ಶೂಟಿಂಗ್​​ಗೆ ಬ್ರೇಕ್​​ ಹಾಕಿದರಿಂದ ಸಿನಿಮಾ ರಿಲೀಸ್​ ಮುಂದಿನವರ್ಷಕ್ಕೆ ಪೋಸ್ಟ್​ಪೋನ್​ ಆಗಿದೆ.

Next Story

RELATED STORIES