ರಾಜವೀರಮದಕರಿಗಾಗಿ ಲುಕ್ ಬದಲಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ ಈವರೆಗೂ ರಿಲ್ಯಾಕ್ಸ್ ಮೂಡ್ನಲ್ಲಿಯೇ ಇದ್ದರು. ಆದರೆ, ಈಗ ದಚ್ಚು ಕೂಡ ಚಿತ್ರೀಕರಣದಲ್ಲಿ ಭಾಗಿಯಾಗೋಕ್ಕೆ ಸಜ್ಜಾಗಿದ್ದಾರೆ.

ಲಾಕ್ಡೌನ್ನಿಂದ ರಿಲೀಫ್ ಆಗಿರೋ ಸ್ಯಾಂಡಲ್ವುಡ್ ಸದ್ಯ ಚಿತ್ರೀಕರಣ ಶುರು ಮಾಡಿದೆ. ಎಲ್ಲಾ ಸ್ಟಾರ್ಗಳು ಶೂಟಿಂಗ್ ಅಖಾಡಕ್ಕೆ ಇಳಿದಿದ್ರೂ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ ಈವರೆಗೂ ರಿಲ್ಯಾಕ್ಸ್ ಮೂಡ್ನಲ್ಲಿಯೇ ಇದ್ದರು. ಆದರೆ, ಈಗ ದಚ್ಚು ಕೂಡ ಚಿತ್ರೀಕರಣದಲ್ಲಿ ಭಾಗಿಯಾಗೋಕ್ಕೆ ಸಜ್ಜಾಗಿದ್ದಾರೆ.
ಲಾಕ್ಡೌನ್ನಿಂದ ಇಡೀ ಸ್ಯಾಂಡಲ್ವುಡ್ ಸ್ತಬ್ದವಾಗಿತ್ತು. ಸಾಕಷ್ಟು ಸಿನಿಮಾಗಳು ಅರ್ಧಕ್ಕೆ ಶೂಟಿಂಗ್ ನಿಲ್ಲಿಸಿತ್ತು. ಲಾಕ್ಡೌನ್ ರಿಲೀಫ್ ಆಗುತ್ತಿದ್ದ ಹಾಗೇ, ಎಲ್ಲಾ ಸ್ಟಾರ್ಗಳು ಸಿನಿಮಾ ಶೂಟಿಂಗ್ಗೆ ಹಾಜರಾದರು. ಆದರೆ, ದಚ್ಚು ಯಾವಾಗ ಶೂಟಿಂಗ್ ಅಖಾಡಕ್ಕೆ ಇಳಿತಾರೆ ಅಂತ ಫ್ಯಾನ್ಸ್ ಕಾಯ್ತಾ ಇದ್ದರು .ಸದ್ಯ ದರ್ಶನ್ ತಮ್ಮ ಹೊಸ ಚಿತ್ರ ರಾಜವೀರ ಮದಕರಿ ನಾಯಕ ಶೂಟಿಂಗ್ನಲ್ಲಿ ಭಾಗಿಯಾಗೋಕ್ಕೆ ರೆಡಿಯಾಗಿದ್ದಾರೆ.
ಕೇರಳದಲ್ಲಿ ಫಸ್ಟ್ ಶೆಡ್ಯೂಲ್ ಶೂಟಿಂಗ್ ಮುಗಿಸಿರುವ ರಾಜವೀರ ಮದಕರಿ ನಾಯಕ ಚಿತ್ರತಂಡ ಇದೀಗ ಸೆಕೆಂಡ್ ಶೆಡ್ಯೂಲ್ ಶೂಟಿಂಗ್ಗೆ ರೆಡಿಯಾಗಿದೆ. ಅಕ್ಟೋಬರ್ ತಿಂಗಳಿನಿಂದ ಮದಕರಿ ನಾಯಕ ಮತ್ತೆ ಶೂಟಿಂಗ್ಗೆ ಅಖಾಡಕ್ಕೆ ಇಳಿಯಲಿದ್ದಾರೆ ಅನ್ನೋದು ಬಲ್ಲ ಮೂಲಗಳ ಮಾಹಿತಿ.
ಸದ್ಯ ರಾಜವೀರ ಮದಕರಿ ನಾಯಕ ಶೂಟಿಂಗ್ಗೆ ದಚ್ಚು ರೆಡಿಯಾಗಿದ್ದು, ಇದಕ್ಕಾಗಿ ಮೀಸೆ ಫುಲ್ ಟ್ರಿಂ ಮಾಡಿದ್ದು, ಹೇರ್ ಸ್ಟೈಲ್ ಕೂಡ ಚೇಂಜ್ ಮಾಡಿದ್ದಾರೆ. ಸದ್ಯ ಆ ಲುಕ್ನಲ್ಲಿರೋ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸದ್ಯ ಈಗ ಸ್ಯಾಂಡಲ್ವುಡ್ನ ಎಲ್ಲಾ ಸ್ಟಾರ್ಗಳು ಸದ್ಯ ತಮ್ಮ ಶೂಟಿಂಗ್ಗೆ ಬ್ಯಾಂಗ್ ಆಗಿ ಕಂಬ್ಯಾಕ್ ಮಾಡಿದ್ದಾರೆ. ಇನ್ನೇನಿದ್ರೂ ಥಿಯೇಟರ್ ಓಪನ್ ಆಗಿ ಸಿನಿಮಾಗಳು ರಿಲೀಸ್ ಆಗೋದೊಂದೇ ಬಾಕಿ.