Top

'ರಾಬರ್ಟ್​' ನೋಡಲು ಮುಂಜಾನೆಯಿಂದ ಮುಗಿಬಿದ್ದ ಡಿ ಬಾಸ್​ ಅಭಿಮಾನಿಗಳು

ಇನ್ನು ಸಿನಿಮಾ ರಿಲೀಸ್​ಗೂ ಮೊದಲೇ ಬೆಳಗಿನ ಬಹುತೇಕ ಶೋಗಳ ಟಿಕೆಟ್ ಸೋಲ್ಡ್ಔಟ್ ಆಗಿತ್ತು.

ರಾಬರ್ಟ್​ ನೋಡಲು ಮುಂಜಾನೆಯಿಂದ ಮುಗಿಬಿದ್ದ ಡಿ ಬಾಸ್​ ಅಭಿಮಾನಿಗಳು
X

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಸ್ಯಾಂಡಲ್​ವುಡ್​ನಲ್ಲಿ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದ್ದ ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ಇಂದು ತೆರೆಗೆ ಅಪ್ಪಳಿಸಿದೆ. ರಾಬರ್ಟ್ ಚಿತ್ರ ನೋಡಿರೋ ಅಭಿಮಾನಿಗಳಂತೂ ಏನ್ ಸಿನ್ಮಾ ಗುರೂ ಫುಲ್ ಚಿಂದಿ ಅಂತಿದ್ದಾರೆ.

ಲಾಕ್​ಡೌನ್​ ಆದ್ಮೇಲೆ ತೆರೆಮೇಲೆ ರಾರಾಜಿಸಿದ ತೂಗುದೀಪ ದರ್ಶನ್ ಎಂಟ್ರಿಗೆ ಚಿತ್ರರಂಗವೇ ಅದಿರಿ ಪೋಯಿಂದಿ. ಶಿವಾರಾತ್ರಿ ಹಬ್ಬದ ದಿನ ಅಭಿಮಾನಿಗಳೆದುರು ರಾಘವನಾಗಿ, ರಾಬರ್ಟ್ ಆಗಿ ದಚ್ಚು ಕಿಚ್ಚು ಹಚ್ಚಿದ್ದಾರೆ. ಫಸ್ಟ್​​ಡೇ ರಾಬರ್ಟ್ ಸಿನಿಮಾ ಮಾಡಿದ ಮೋಡಿ ಅಷ್ಟಿಷ್ಟಲ್ಲ, ಎಲ್ ನೋಡಿದರು ಡಿ ಬಾಸ್ ಹವಾನೇ ಹವಾ. ಸಿನಿಮಾ ನೋಡಿದ ಅಭಿಮಾನಿಗಳು ಬಾಕ್ಸಾಫೀಸ್ ಸುಲ್ತಾನ್​ಗೆ ಜೈಕಾರ ಹಾಕಿದರು. ಕರ್ನಾಟಕವಷ್ಟೇ ಅಲ್ದೆ ಆಂಧ್ರ ಹಾಗೂ ತೆಲಂಗಾಣದಲ್ಲೂ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ.

ಥಿಯೇಟರ್ ಮುಂದೆ ಅಭಿಮಾನಿಗಳು ಪಟಾಕಿ ಹಚ್ಚಿ, ತಮಟೆ ಹೊಡೆದು, ಕಟೌಟ್ಗೆ ಹಾರ ಹಾಕಿ, ಹಾಲಿನಿಂದ ಅಭಿಷೇಕ ಮಾಡಿ ಸಂಭ್ರಮಿಸಿದರು. ದರ್ಶನ್​ರ ಈ ಮೊದ್ಲಿನ ಸಿನಿಮಾಗಳಿಗಿಂತ್ಲೂ ರಾಬರ್ಟ್ ಮೇಲೆ ನಿರೀಕ್ಷೆಗಳು ಹೆಚ್ಚಾಗಿದ್ವು. ಆ ನಿರೀಕ್ಷೆಗಳನ್ನ ಚಿತ್ರತಂಡ ಹುಸಿ ಮಾಡಿಲ್ಲ. ತಾವು ಕೊಟ್ಟ ಕಾಸಿಗೆ ನ್ಯಾಯ ಒದಗಿಸಿಕೊಡುತ್ತೆ ರಾಬರ್ಟ್ ಸಿನಿಮಾ. ಪಕ್ಕಾ ಪೈಸಾ ವಸೂಲ್ ಮೂವೀ ರಾಬರ್ಟ್ ಅಂತ ಅಭಿಮಾನಿಗಳು ಮಾತಾಡ್ತಿದ್ದಾರೆ.

ದರ್ಶನ್ ಅಭಿನಯದ 'ರಾಬರ್ಟ್' ಶಿವರಾತ್ರಿ ಹಬ್ಬದ ಸಂದರ್ಭದಂದು ಗ್ರ್ಯಾಂಡ್ ರಿಲೀಸ್ ಆಗಿದೆ. ರಾಬರ್ಟ್ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. 'ರಾಬರ್ಟ್' ಚಿತ್ರದಲ್ಲಿ ದರ್ಶನ್ ಜೊತೆಗೆ ಆಶಾ ಭಟ್, ಜಗಪತಿ ಬಾಬು, ವಿನೋದ್ ಪ್ರಭಾಕರ್, ಸೋನಲ್ ಮಂಥೆರೋ, ಚಿಕ್ಕಣ್ಣ, ಅವಿನಾಶ್, ಶಿವರಾಜ್ ಕೆ.ಆರ್.ಪೇಟೆ, ಐಶ್ವರ್ಯಾ ಪ್ರಸಾದ್ ಅಭಿನಯಿಸಿದ್ದಾರೆ. ಸಿನಿಮಾಗೆ ಉಮಾಪತಿ ಶ್ರೀನಿವಾಸ್ ಗೌಡ ಬಂಡವಾಳ ಹಾಕಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.

ದರ್ಶನ್ ಅವರ ಸಿನಿಮಾ ನೋಡುಲು ಅಭಿಮಾನಿಗಳು ಕಳೆದ ಒಂದು ವರ್ಷದಿಂದ ತಾಳ್ಮೆಯಿಂದ ಕಾಯುತ್ತಿದ್ದರು. ಇನ್ನು ಸಿನಿಮಾ ರಿಲೀಸ್​ಗೂ ಮೊದಲೇ ಬೆಳಗಿನ ಬಹುತೇಕ ಶೋಗಳ ಟಿಕೆಟ್ ಸೋಲ್ಡ್ಔಟ್ ಆಗಿತ್ತು. ಇನ್ನು ಬೆಂಗಳೂರಿನಲ್ಲಿ ಗುಡ್ ರೆಸ್ಪಾನ್ಸ್ ದೊರೆಯಿತು. ಬೆಳಗ್ಗೆ 6 ಗಂಟೆಯಿಂದಲೇ ಸಿನಿಮಾ ಕನ್ನಡ ಹಾಗೂ ತೆಲುಗಿನಲ್ಲಿ ತೆರೆಕಂಡಿತ್ತು.

ಕೊರೊನಾ ಯಿಂದ ಸೊರಗಿ ಹೋಗಿದ್ದ ಚಿತ್ರರಂಗಕ್ಕೆ ರಾಬರ್ಟ್ ಸಿನಿಮಾ ಒಳ್ಳೆಯ ಟಾನಿಕ್ ಅಂತ ಚಿತ್ರಮಂದಿಯೇ ಮಾತಾಡ್ತಿದ್ದಾರೆ .ಇದು ಕ್ಲಾಸ್ ವಿತ್ ಫುಲ್ ಮಾಸ್. ಪಂಚಿಂಗ್ ಡೈಲಾಗ್ಸ್ ಜೊತೆಗೆ ಫೈಟ್, ಎಲ್ಲಕ್ಕಿನ್ನ ಹೆಚ್ಚಾಗಿ ಇಷ್ಟವಾಗೋದು ದಚ್ಚು ಡ್ಯಾನ್ಸ್. ತುಂಬಾ ವರ್ಷಗಳಾದ್ಮೇಲೆ ದರ್ಶನ್ ಈ ತರ ಸ್ಟೆಪ್ ಹಾಕಿದ್ದಾರೆ. ರಾಬರ್ಟ್ ಸಿನಿಮಾದ ಕ್ರೇಜ್ ಮುಂದಿನ ದಿನಗಳಲ್ಲೂ ಹೀಗೆ ಮುಂದುವರೆಯುತ್ತಾ ಅಂತಾ ಕಾದು ನೋಡಬೇಕು.

Next Story

RELATED STORIES