Top

ಮತ್ತೆ ಡೆಡ್ಲಿ ಲುಕ್​ನಲ್ಲಿ ಆದಿತ್ಯ: ಫಸ್ಟ್​ಲುಕ್​ನಲ್ಲೇ D5 ಸಖತ್​ ಹಿಟ್​​

ಎಸ್​.ನಾರಾಯಣ್​-ಆದಿತ್ಯ ಕಾಂಬಿನೇಷನ್​​ನಲ್ಲಿ ಡಿ5

ಮತ್ತೆ ಡೆಡ್ಲಿ ಲುಕ್​ನಲ್ಲಿ ಆದಿತ್ಯ: ಫಸ್ಟ್​ಲುಕ್​ನಲ್ಲೇ  D5 ಸಖತ್​ ಹಿಟ್​​
X

ಡೆಡ್ಲಿ ಆದಿತ್ಯ ಮತ್ತು ಎಸ್​ ನಾರಾಯಣ್​ ಕಾಂಬಿನೇಷನ್​ನಲ್ಲಿ ರೆಡಿಯಾಗ್ತಿರೋ ಸಿನಿಮಾ ಡಿ5. ಮೊದಲ ಬಾರಿಗೆ ಈ ಕಾಂಬಿನೇಷನ್​ ಒಂದಾಗ್ತಿದ್ದು, ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ರೀಸೆಂಟಾಗಿ ಡಿ5 ಚಿತ್ರದ ಫಸ್ಟ್ ಲುಕ್​ ಪೋಸ್ಟರ್ ಕೂಡ ಬಿಡುಗಡೆಯಾಗಿತ್ತು.

ಡಿ5 ಫಸ್ಟ್ ಲುಕ್​ ಪೋಸ್ಟರ್ ನೋಡ್ತಿದ್ರೆ ಇದೊಂದು ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾ ಅನ್ನೋದು ಪಕ್ಕಾ ಆಗಿದೆ. ಡೆಡ್ಲಿಸ್ಟಾರ್ ಆದಿತ್ಯ ಫಸ್ಟ್ ಲುಕ್​ನಲ್ಲಿ ಸಖತ್​ ಡಿಫ್ರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ಡಿ5 ಫಸ್ಟ್ ಲುಕ್​ ರಿಲೀಸ್​ ಆದ ಕೇವಲ 4 ದಿನಗಳಲ್ಲಿ 1 ಮಿಲಿಯನ್​ ವೀವ್ಸ್​ ಸಾಧಿಸಿದೆ. ಇದರಿಂದ ಇಡೀ ಚಿತ್ರತಂಡ ಖುಷಿ ಮೋಡ್​ನಲ್ಲಿದೆ.

ಡಿ5 ಚಿತ್ರದ ಟೈಟಲ್ಲೇ ಸಖತ್​ ಡಿಫ್ರೆಂಟ್ ಆಗಿದ್ದು, ಆದಿತ್ಯ ಮುಂದುವರೆದ ಅಧ್ಯಾಯ ಚಿತ್ರದ ನಂತರ ಒಪ್ಪಿಕೊಂಡಿರೋ ಸಿನಿಮಾ ಇದು. ಇನ್ನು ಚಿತ್ರಕ್ಕೆ ನಾಯಕಿಯಾಗಿ ಅದಿತಿ ಪ್ರಭುದೇವಾ ಆಯ್ಕೆಯಾಗಿದ್ದು, ಈಗಾಗ್ಲೇ ಫಸ್ಟ್ ಶೆಡ್ಯೂಲ್​ ಶೂಟಿಂಗ್​ ಮುಗಿಸಿ ,ಸೆಕೆಂಡ್​ ಶೆಡ್ಯೂಲ್​ ಶೂಟಿಂಗ್​ನಲ್ಲಿ ಬ್ಯುಸಿಯಾಗಿದೆ ಚಿತ್ರತಂಡ..ಜುಲೈ 5 ರವರೆಗೆ 2 ನೇ ಹಂತದ ಚಿತ್ರೀಕರಣ ನಡೆಯಲಿದೆ.

ಇಷ್ಟು ದಿನ ಲವ್​ ಸ್ಟೋರಿ, ಫ್ಯಾಮಿಲಿ ಎಂಟರ್​​ಟೈನರ್​ಗೆ ಹೆಚ್ಚು ಹೆಸರುವಾಸಿಯಾಗಿದ್ದ ನಿರ್ದೇಶಕ ಎಸ್​ ನಾರಾಯಣ್, ಡಿ5 ಮೂಲಕ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇನ್ನು ಆದಿತ್ಯ ಸಹ ಹಿಂದಿನ ಸಿನಿಮಾಗಳಿಗಿಂತಲೂ ವಿಭಿನ್ನವಾಗಿ ತೆರೆಮೇಲೆ ಮಿಂಚಲಿದ್ದಾರಂತೆ.

ವರದಿ-ಅರ್ಚನಾ ಶರ್ಮಾ

Next Story

RELATED STORIES