Top

ಸೋಶಿಯಲ್ ಮೀಡಿಯಾಗೆ ಕ್ರೇಜಿಸ್ಟಾರ್ ಎಂಟ್ರಿ

ಏಕಕಾಲಕ್ಕೆ ಫೇಸ್​ಬುಕ್, ಇನ್ಸ್​ಟಾ,ಟ್ವಿಟರ್​ನಲ್ಲಿ ಅಕೌಂಟ್ ಓಪನ್ ಮಾಡಲಿದ್ದಾರೆ.

ಸೋಶಿಯಲ್ ಮೀಡಿಯಾಗೆ ಕ್ರೇಜಿಸ್ಟಾರ್ ಎಂಟ್ರಿ
X

ದಿನೇ ದಿನೇ ಸೋಶಿಯಲ್​ ಮೀಡಿಯಾ ಸಖತ್​ ಸ್ಟ್ರಾಂಗ್ ಆಗುತ್ತಿದೆ. ಯಾರ್ ತಾನೇ ಫೇಸ್​ಬುಕ್​, ಇನ್ಸ್​ಟಾಗ್ರಾಂ ಯೂಸ್​ ಮಾಡಲ್ಲ ಹೇಳಿ. ಹಾಗ್​ ಯೂಸ್​ ಮಾಡೋಲ್ಲ ಅನ್ನೋರು ತುಂಬಾ ಕಡಿಮೆ. ಅದರಲ್ಲಿ ಒಬ್ಬರಾಗಿದರು ಕ್ರೇಜಿಸ್ಟಾರ್. ಇದೀಗ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗೋಕ್ಕೆ ಸೋಶಿಯಲ್​ ಮೀಡಿಯಾಗೆ ಎಂಟ್ರಿ ಕೊಡೋಕ್ಕೆ ರೆಡಿಯಾಗಿದ್ದಾರೆ ರವಿಮಾಮ.

ಇತ್ತೀಚೆಗಂತೂ ಸೋಶಿಯಲ್​ ಮೀಡಿಯಾ ಬಳಸದೇ ಇರೋರು ಅಂದ್ರೆ ದುರ್ಬಿನ್​ ಹಾಕಿ ಹುಡುಕಬೇಕು. ಎಲ್ರೂ ಕೂಡ ಸೋಶೀಯಲ್​ ಮೀಡಿಯಾದ ಒಂದಲ್ಲ ಒಂದು ಪ್ಲಾಟ್​ಫಾರ್ಮ್​ನಲ್ಲಿ ಆ್ಯಕ್ಟಿವ್​ ಇದ್ದೇ ಇರ್ತಾರೆ. ಫೇಸ್​ಬುಕ್​, ಇನ್ಸ್​​ಟಾಗ್ರಾಂ, ಟ್ವಿಟರ್ ಅಂತ ಬೇಕಾದಷ್ಟು ಆ್ಯಪ್ಶನ್​ಗಳಿವೆ. ಅದರಲ್ಲೂ ಸೆಲೆಬ್ರೆಟಿಗಳು ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟಿವ್​ ಆಗಿರ್ತಾರೆ.

ಸೋಶಿಯಲ್​ ಮೀಡಿಯಾದಲ್ಲಿ ಅಪರಿಚಿತರು, ಪರಿಚಿತರಾಗೋದು, ಎಲ್ಲೋ ಇದ್ದವರು, ಯಾರಿಗೋ ಕನೆಕ್ಟ್ ಆಗೋದು ಇದ್ದೇ ಇದೆ. ಎಷ್ಟೋ ಮಂದಿ ಸೋಶಿಯಲ್​ ಮೀಡಿಯಾದಿಂದ್ಲೇ ಸ್ಟಾರ್ ಆಗಿರೋದು ಇದೆ. ಅದರಲ್ಲೂ ಸೆಲೆಬ್ರೆಟಿಗಳಿಗೂ ಸೋಶಿಯಲ್​ ಮೀಡಿಯಾ, ತಮ್ಮ ಸಿನಿಮಾಗಳ ವಿಚಾರ, ಪ್ರಚಾರ ಹಾಗೂ ಅಭಿಮಾನಿಗಳ ಜೊತೆ ಮಾತುಕತೆಗೆ ವೇದಿಕೆ ಮಾಡಿಕೊಟ್ಟಿದೆ. ಸ್ಯಾಂಡಲ್​ವುಡ್​ನ ಆಲ್​ಮೋಸ್ಟ್ ಎಲ್ಲಾ ಸೆಲೆಬ್ರೆಟಿಗಳು ಸೋಶಿಯಲ್​ ಮಿಡಿಯಾ ಆ್ಯಕ್ಟಿವ್ ಇದ್ದಾರೆ.

ಆದರೆ, ಈವರೆಗೂ ಸೋಶಿಯಲ್​ ಮಿಡಿಯಾ ಕಡೆ ತಲೆನೂ ಹಾಕಿರದ ಕ್ರೇಜಿಸ್ಟಾರ್, ಇದೀಗ ಎಂಟ್ರಿ ಕೊಡೋಕ್ಕೆ ರೆಡಿಯಾಗಿದ್ದಾರೆ. ಏಕಕಾಲಕ್ಕೆ ಫೇಸ್​ಬುಕ್, ಇನ್ಸ್​ಟಾ,ಟ್ವಿಟರ್​ನಲ್ಲಿ ಅಕೌಂಟ್ ಓಪನ್ ಮಾಡಲಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ..ಇನ್ನು ಕ್ರೇಜಿಸ್ಟಾರ್ ಅಂದ್ರೆ ವಿಶೇಷತೆ ಇಲ್ಲ ಅಂದ್ರೆ ಹೇಗೆ(?) ಅವರ ಎಂಟ್ರಿಯಲ್ಲಿ ಸ್ಪೆಷಾಲಿಟಿ ಇರ್ಲೇಬೇಕಲ್ವಾ(?) ಯೆಸ್ ಕ್ರೇಜಿ ಎಂಟ್ರಿ ಬಗ್ಗೆ ಈಗಾಗಲೇ ಸ್ಮಾಲ್​ ವಿಡಿಯೋ ಝಲಕ್​ ಹರಿದಾಡ್ತಿದೆ. ಇಂದಿನಿಂದ 7 ದಿನಗಳ ಕೌಂಟ್​ಡೌನ್​ ಶುರುವಾಗಿದೆ..ಇದೊಂಥರ ಫಿಲ್ಮಿ ಸ್ಟೈಲ್​ನಲ್ಲಿದೆ..ಕ್ರೇಜಿ ಫ್ಯಾನ್ಸ್​ ಅಂತೂ ರವಿಮಾಮನ ಎಂಟ್ರಿಗೆ ಕಾತುರದಿಂದ ಕಾಯ್ತಿದ್ದಾರೆ.

Next Story

RELATED STORIES