Top

1858ರ 'ಕನ್ನಡಿಗ'ನಾಗಿ ಬಣ್ಣಹಚ್ಚಲಿದ್ದಾರೆ 'ಕನಸುಗಾರ'

ಸ್ಯಾಂಡಲ್​ವುಡ್​ನ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್​​ ಅಭಿನಯದ ಕನ್ನಡಿಗ ಚಿತ್ರದ ಮುಹೂರ್ತ ನೆರವೇರಿದೆ

1858ರ ಕನ್ನಡಿಗನಾಗಿ ಬಣ್ಣಹಚ್ಚಲಿದ್ದಾರೆ ಕನಸುಗಾರ
X

ಲಾಕ್​ಡೌನ್​ ನಂತರ ಸ್ಯಾಂಡಲ್​ವುಡ್​ನಲ್ಲಿ ಮೊದಲ ಬಾರಿಗೆ ಸ್ಟಾರ್ ನಟನ ಸಿನಿಮಾವೊಂದು ಸೆಟ್ಟೇರಿದೆ. ಸದ್ದಿಲ್ಲದೇ ಮುಹೂರ್ತ ಮುಗಿಸಿ, ಶೂಟಿಂಗ್​ ಅಖಾಡಕ್ಕೆ ಇಳಿತಿದ್ದಾರೆ.

ಕೊರೊನಾ ಕಾರ್ಮೋಡ ಚಿತ್ರರಂಗದ ಮೇಲೆ ಗಾಢ ಕಗ್ಗತ್ತಲು ಆವರಿಸುವಂತೆ ಮಾಡಿತ್ತು. ಕೊರೊನಾ ಕೇಕೆಗೆ ಸಿನಿಮಾ ರಂಗದ ಬಾಗಿಲು ಮುಚ್ಚಿತ್ತು. ಇಂಥ ಸಮಯದಲ್ಲಿ ಮುಂದಿನ ಗತಿಯೇನು ದೊಡ್ಡ ನಟರ ಸಿನಿಮಾಗಳು ಸೆಟ್ಟೇರುತ್ತವಾ(?) ನಿರ್ಮಾಪಕರು ಮತ್ತೆ ಚಿತ್ರನಿರ್ಮಾಣಕ್ಕೆ ಮುಂದಾಗುತ್ತಾರಾ(?) ಎನ್ನುವ ಪ್ರಶ್ನೆಗಳೆಲ್ಲ ಉದ್ಭವಿಸಿದ್ದವು. ಇಂತಹ ಪ್ರಶ್ನೆಗಳ ನಡುವೆ ಸ್ಟಾರ್ ನಟರೊಬ್ಬರ ಚಿತ್ರ ಸದ್ದಿಲ್ಲದೆ ಸೆಟ್ಟೆರಿದೆ. ಸ್ಯಾಂಡಲ್​ವುಡ್​ನ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್​​ ಅಭಿನಯದ ಕನ್ನಡಿಗ ಚಿತ್ರದ ಮುಹೂರ್ತ ನೆರವೇರಿದೆ.

ಓಂಕಾರ್ ಮೂವೀಸ್ ಲಾಂಛನದಲ್ಲಿ ಎನ್.ಎಸ್.ರಾಜ್ ಕುಮಾರ್ ನಿರ್ಮಾಣದ, ಜಟ್ಟ, ಮೈತ್ರಿ, ಅಮರಾವತಿಯಂತಹ ಸದಭಿರುಚಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ ಬಿ.ಎಂ.ಗಿರಿರಾಜ್ ನಿರ್ದೇಶನದಲ್ಲಿ, ವಿ.ರವಿಚಂದ್ರನ್ ಅಭಿನಯದ, ಐತಿಹಾಸಿಕ ಕಥಾಹಂದರ ಹೊಂದಿರುವ, ʻಕನ್ನಡಿಗʼ ಚಿತ್ರ ಆರಂಭಗೊಂಡಿದೆ. ಡಾ.ಶಿವರಾಜ್ ಕುಮಾರ್ ಆರಂಭ ಫಲಕ ತೋರಿ, ರಾಘವೇಂದ್ರ ರಾಜ್ ಕುಮಾರ್ ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ ʻಕನ್ನಡಿಗʼನಿಗೆ ಚಾಲನೆ ದೊರೆತಿದೆ.

ಸಾಮಾನ್ಯವಾಗಿ ಆಳ್ವಿಕೆ ನಡೆಸಿದ ರಾಜ-ರಾಣಿಯರ ಕಥೆಗಳು ಎಲ್ಲೆಡೆ ದಾಖಲಾಗಿರುತ್ತವೆ. ಆದರೆ, ಸಾಮಾನ್ಯ ಪ್ರಜೆಗಳ ಕೊಡುಗೆಗಳು ನೆನಪಿಗೇ ಬರುವುದಿಲ್ಲ. ಈ ನಾಡಿನ ಇತಿಹಾಸವನ್ನು ದಾಖಲಿಸುವಲ್ಲಿ ಲಿಪಿಕಾರರ ವಂಶದ ಕೊಡುಗೆ ಅಪಾರ. ಇದೇ ಕಥೆಯನ್ನ ಇದೀಗ ಕನ್ನಡಿಗ ಚಿತ್ರದ ಮೂಲಕ ತೆರೆ ಮೇಲೆ ತರಲಾಗ್ತಿದೆ. 1858ರ ನಂತರದ ಕಾಲಘಟ್ಟವನ್ನು ʻಕನ್ನಡಿಗʼನೊಂದಿಗೆ ಮರುಸೃಷ್ಟಿಸಲಾಗುತ್ತಿದೆ. ಇಲ್ಲಿ ರವಿಚಂದ್ರನ್ ಲಿಪಿಕಾರ ಗುಣಭದ್ರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ಪಾವನಾ ನಟಿಸುತ್ತಿದ್ದಾರೆ. ಇನ್ನುಳಿದಂತೆ ಸ್ವಾತಿ ಚಂದ್ರಶೇಖರ್ ಚಿ.ಗುರುದತ್, ದತ್ತಣ್ಣ ಮತ್ತು ಅಚ್ಯುತ್ ಕುಮಾರ್ ಇದ್ದಾರೆ. ರಾಣಿ ಚಿನ್ನಬೈರಾದೇವಿ ಪ್ರಮುಖ ಪಾತ್ರದಲ್ಲಿ ನಟಿ ಸುಮಲತಾ ಅಂಬರೀಶ್ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಚಿತ್ರಕ್ಕೆ ಜಿ.ಎಸ್.ವಿ ಸೀತಾರಾಮ್ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ ಇದೆ. ಇಂದಿನಿಂದಲೇ ಚಿತ್ರದ ಶೂಟಿಂಗ್​ ಶುರುವಾಗಿದೆ.

Next Story

RELATED STORIES