Top

ಖ್ಯಾತ ನಟ ಚಿರಂಜೀವಿಗೆ ಕೋವಿಡ್​ 19 ಪಾಸಿಟಿವ್​ ದೃಢ

'ಆಚಾರ್ಯ' ಚಿತ್ರದ ಶೂಟಿಂಗ್​ಗೂ ಮುಂಚೆ ಚಿರಂಜೀವಿ ಅವರು ಕೋವಿಡ್​ 19 ಪರೀಕ್ಷೆಗೆ ಒಳಗಾಗಿದ್ದರು

ಖ್ಯಾತ ನಟ ಚಿರಂಜೀವಿಗೆ ಕೋವಿಡ್​ 19 ಪಾಸಿಟಿವ್​ ದೃಢ
X

ಹೈದರಾಬಾದ್​: ತೆಲುಗು ಚಿತ್ರರಂಗದ ಖ್ಯಾತ ನಟ ಮೆಗಸ್ಟಾರ್​ ಚಿರಂಜೀವಿ ಅವರಿಗೆ ಕೋವಿಡ್​ 19 ಸೋಂಕು ತಗುಲಿರುವುದು ದೃಢಪಟ್ಟಿರುವುದನ್ನು ಸ್ವತಃ ಅವರೇ ತಮ್ಮ ಅಧಿಕೃತ ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

ಆಚಾರ್ಯ ಚಿತ್ರದ ಶೂಟಿಂಗ್​ಗೂ ಮುಂಚೆ ಚಿರಂಜೀವಿ ಅವರು ಕೋವಿಡ್​ 19 ಪರೀಕ್ಷೆಗೆ ಒಳಗಾಗಿದ್ದರು ಈ ವರದಿ ಬಂದ ನಂತರ ಅವರಿಗೆ ಕೋವಿಡ್​ ಪಾಸಿಟಿವ್​ ಇರುವುದು ಪತ್ತೆಯಾಗಿದೆ.

ಸದ್ಯ ನಟ ಚಿರಂಜೀವಿ ಅವರು ಹೋಮ್​ ಕ್ವಾರೆಂಟೈನ್​ನಲ್ಲಿದ್ದಾರೆ. ಐದು ದಿನಗಳಿಂದ ಯಾರೆಲ್ಲ ನನ್ನ ಸಂಪರ್ಕಕ್ಕೆ ಬಂದಿದ್ದಿರೋ ದಯವಿಟ್ಟು ಅವರೆಲ್ಲರೂ ಕೋವಿಡ್​ ಟೆಸ್ಟ್​ ಮಾಡಿಸಿಕೊಳ್ಳಿ. ಆರೋಗ್ಯದತ್ತ ಗಮನ ವಹಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.


Next Story

RELATED STORIES