Top

ಚಂದನವನದ ಹ್ಯಾಸ ನಟ ರಾಕ್​ಲೈನ್​ ಸುಧಾಕರ್​ ವಿಧಿವಶ

ಅವರು ಬೆಳಿಗ್ಗೆಯಸಷ್ಟೇ ಶುಗರ್​ಲೆಸ್​ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ಈ ವೇಳೆ ದಿಢೀರ್​ ಅಂತ ಹೃದಯಾಘಾತ ಆಗಿದೆ.

ಚಂದನವನದ ಹ್ಯಾಸ ನಟ ರಾಕ್​ಲೈನ್​ ಸುಧಾಕರ್​ ವಿಧಿವಶ
X

ಬೆಂಗಳೂರು: ಸ್ಯಾಂಡಲ್​ವುಡ್​ ನಟ ರಾಕ್​ಲೈನ್​ ಸುಧಾಕರ್(64) ಅವರು ಇಂದು ನಿಧನರಾಗಿದ್ದಾರೆ.

ಎರಡು ತಿಂಗಳ ಹಿಂದೆ ಕೋವಿಡ್​ 19 ಸೋಂಕು ತಗುಲಿ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಅವರು ಬೆಳಿಗ್ಗೆಯಸಷ್ಟೇ ಶುಗರ್​ಲೆಸ್​ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ಈ ವೇಳೆ ದಿಢೀರ್​ ಅಂತ ಹೃದಯಾಘಾತ ಆಗಿದೆ. ನಂತರ ಬನ್ನೇರುಘಟ್ಟ ಪೋರ್ಟೀಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಸುಧಾಕರ್ ಅವರು ನಿರ್ದೇಶಕ ಯೋಗರಾಜ್ ಭಟ್, ದುನಿಯಾ ಸೂರಿ ಅವರ ಸಿನಿಮಾಗಳಲ್ಲಿ ಅದ್ಭುತ ನಟನೆ ಮಾಡುತ್ತಿದ್ದರು ಇವರು ತಮ್ಮದೇ ವಿಭಿನ್ನ ಶೈಲಿ ನಟನೆಯಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಇವರು ಬಹುಶಃ ರಾಕ್​ಲೈನ್ ವೆಂಕಟೇಶ್ ಪ್ರೋಡಕ್ಷನ್​ನಲ್ಲಿ ಕೆಲಸ ಮಾಡುತ್ತಿದ್ದ ಹಿನ್ನೆಲೆ ಇವರಿಗೆ ರಾಕ್​ಲೈನ್​ ಸುಧಾಕರ್ ಎಂದು ಕರೆಯಲಾಗುತ್ತಿತ್ತು.

ರಾಕ್​ಲೈನ್​ ಸುಧಾಕರ್ ಅವರು ಪಂಚರಂಗಿ, ಅಧ್ಯಕ್ಷ, ಅಜಿತ್​, ಜಾನು ಮತ್ತಿತರ ಸಿನಿಮಾಗಳಲ್ಲಿ ನಟಿಸಿದ್ದಾರೆ.


Next Story

RELATED STORIES