Top

ಕ್ರೇಜಿ ಪುತ್ರನ ಹೊಸ ಚಿತ್ರಕ್ಕೆ ಚಾಲೆಂಜಿಂಗ್​ ಸ್ಟಾರ್ ದನಿ

ಸೋಶಿಯಲ್​ ಮೀಡಿಯಾದಲ್ಲಿ ‘ಪ್ರಾರಂಭ’ ಟ್ರೇಲರ್​​ ಸೌಂಡ್​.

ಕ್ರೇಜಿ ಪುತ್ರನ ಹೊಸ ಚಿತ್ರಕ್ಕೆ ಚಾಲೆಂಜಿಂಗ್​ ಸ್ಟಾರ್ ದನಿ
X

ಕ್ರೇಜಿಸ್ಟಾರ್​ ಪುತ್ರ ಮನೋರಂಜನ್​ ಅಭಿನಯದ ಹೊಸ ಸಿನಿಮಾ ಪ್ರಾರಂಭ..ಫಸ್ಟ್ ಲುಕ್​ ಪೋಸ್ಟರ್​ನಿಂದ ಲಿರಿಕಲ್​ ಸಾಂಗ್​​ವರೆಗೂ ಗಮನ ಸೆಳಿತಾ ಬಂದಿರೋ ಪ್ರಾರಂಭ ಸದ್ಯ ಚಿತ್ರದ ಟ್ರೆಲರ್​ ರಿಲೀಸ್​ ಮಾಡಿದೆ. ಟ್ರೇಲರ್​​ ಚಾಲೆಂಜಿಂಗ್​ ಸ್ಟಾರ್​ ವಾಯ್ಸ್​ ಕೊಟ್ಟಿರೋದು ವಿಶೇಷ.

ಕ್ರೇಜಿಸ್ಟಾರ್ ಪುತ್ರ ಮನೋರಂಜನ್​ ರವಿಚಂದ್ರನ್​ಅಭಿನಯದ ಪ್ರಾರಂಭ ಸಿನಿಮಾ, ಸ್ಯಾಂಡಲ್​ವುಡ್​ನಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ. ಈ ಹಿಂದೆ ತೆರೆಕಂಡಿದ್ದ ಚಿತ್ರದ ಟೀಸರ್​ ಮತ್ತು ಲಿರಿಕಲ್​ ಸಾಂಗ್ಸ್​ ಎಲ್ಲರ ಗಮನ ಸೆಳೆದಿದ್ದು, ಇದೀಗ ಪ್ರಾರಂಭದ ಟ್ರೇಲರ್​ ಬಿಡುಗಡೆಯಾಗಿದೆ.

ವಿಶೇಷ ಅಂದ್ರೆ ಪ್ರಾರಂಭ ಟ್ರೈಲರ್​ಗೆ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಬ್ಯಾಗ್ರೌಂಡ್​ ವಾಯ್ಸ್​ ಕೊಟ್ಟಿದ್ದಾರೆ. ಟ್ರೈಲರ್ ಕೊನೆಯಲ್ಲಿ ಒಂದೊಳ್ಳೆ ಮೆಸೇಜ್​ ಕೊಡ್ತಾ, ಪ್ರಾರಂಭ ಜೀವನದ ಆರಂಭ ಎಲ್ಲರಿಗೂ ಒಳ್ಳೇದಾಗಲಿ ಅಂತ ವಿಶ್ ಮಾಡಿದ್ದಾರೆ. ಅಂದ್ಹಾಗೇ ಟ್ರೇಲರ್​ನಲ್ಲಿ ಆ್ಯಕ್ಷನ್​, ರೊಮ್ಯಾನ್ಸ್​​ ಜೊತೆಗೆ ಸಖತ್​ ಲವ್​ ಸ್ಟೋರಿ ಇದ್ದು, ಸಿನಿಮಾ ಯೂತ್ಸ್​ಗೆ ಇಷ್ಟವಾಗಲಿದೆ​ ಅನ್ನೋದು ಟ್ರೇಲರ್​ನಲ್ಲಿ ಗೊತ್ತಾಗ್ತಿದೆ.

ಅಂದ್ಹಾಗೇ ಈ ಹಿಂದೆ ಪ್ರಾರಂಭ ಟೀಸರ್​ಗೂ ಸಹ ದಚ್ಚು ವಾಯ್ಸ್​ ಕೊಟ್ಟಿದ್ರು ಹಾಗೂ ಟೀಸರ್​ನ್ನ ಸ್ವತಃ ರಿಲೀಸ್ ಮಾಡಿದರು. ಇನ್ನು ಈ ಹಿಂದಿನ ಸಿನಿಮಾಗಳಿಗಿಂತಲೂ ಮನೋರಂಜನ್​ ಡಿಫ್ರೆಂಟ್​ ಅಂಡ್ ಮಾಸ್​ ಲುಕ್​ನಲ್ಲಿ ಮಿಂಚಿದ್ದಾರೆ. ಸ್ಟೋರಿಲೈನ್​ ಕೂಡ ಡಿಫ್ರೆಂಟ್ ಆಗಿದ್ದು, 2018ರಲ್ಲಿ ನಡೆಯುವ ಮಂಥನ್​ ಹಾಗೂ ಪ್ರಾರ್ಥನಾರ ಲವ್ ಸ್ಟೋರಿಯೇ ಈ ಪ್ರಾರಂಭ ಸಿನಿಮಾ. ಸಖತ್​ ಖಡಕ್​ ಲುಕ್​ ಹಾಗೂ ಪಾಗಲ್​ ಪ್ರೇಮಿಯಾಗಿ ಕಾಣಿಸಿಕೊಂಡಿರೋ ಮನೋರಂಜನ್​ 3 ವಿಭಿನ್ನ ಲುಕ್​ನಲ್ಲಿ ಮಿಂಚಲಿದ್ದಾರಂತೆ.

ಇನ್ನು ಚಿತ್ರಕ್ಕೆ ಪ್ರಜ್ವಲ್ ಪೈ ಮ್ಯೂಸಿಕ್​ ಮಾಡಿದ್ದು, ಥ್ರಿಲ್ಲರ್ ಮಂಜು ಹಾಗೂ ವಿಕ್ರಂ ಮೋರ್ ಸಾಹಸ ನಿರ್ದೇಶನ ಮಾಡಿದ್ದಾರೆ. ಜಗದೀಶ್​ ಕಲ್ಯಾಡಿ ನಿರ್ಮಾಣದ ಈ ಚಿತ್ರಕ್ಕೆ ಮನು ಕಲ್ಯಾಡಿ ಆ್ಯಕ್ಷನ್​ ಕಟ್ ಹೇಳಿದ್ದಾರೆ. ಇನ್ನು ನಾಯಕಿಯಾಗಿ ಕೀರ್ತಿ ಮಿಂಚಿದ್ದಾರೆ..ಈಗಾಗ್ಲೇ ಬೆಂಗಳೂರು, ಚಿಕ್ಕಮಗಳೂರು, ಗೋವಾದಲ್ಲಿ ಚಿತ್ರೀಕರಣ ಮುಗಿಸಿದ್ದು, ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. 2021ಕ್ಕೆ ಪ್ರಾರಂಭ ಥಿಯೇಟರ್​ ಅಂಗಳಕ್ಕೆ ಲಗ್ಗೆ ಇಡಲಿದೆ

Next Story

RELATED STORIES