Top

ಸೆಲೆಬ್ರಿಟಿಗಳ ಸೋಷಿಯಲ್​ ಮೀಡಿಯಾ ಅಕೌಂಟ್ಸ್​ ಹ್ಯಾಕ್

ಮಾಜಿ ಸಂಸದೆ ರಮ್ಯಾ ಇನ್​ಸ್ಟಾ ಅಕೌಂಟ್​ ಮಾತ್ರವಲ್ಲ ಱಪರ್​ ಚಂದನ್​ ಶೆಟ್ಟಿ, ಫೇಸ್ಬುಕ್​ ಅಕೌಂಟ್​ನ ಕೂಡ ಕಿಡಿಗೇಡಿಗಳು ಹ್ಯಾಕ್​ ಮಾಡಿದ್ದಾರೆ.

ಸೆಲೆಬ್ರಿಟಿಗಳ ಸೋಷಿಯಲ್​ ಮೀಡಿಯಾ ಅಕೌಂಟ್ಸ್​ ಹ್ಯಾಕ್
X

ಬೆಂಗಳೂರು: ಸೆಲೆಬ್ರೆಟಿಗಳಿಗೆ ಕಿಡಿಗೇಡಿಗಳ ಕಾಟ ಶುರುವಾಗಿದೆ. ಕೆಲ ದಿನಗಳ ಹಿಂದೆ ರಾಗಿಣಿ, ಮಾನ್ವಿತಾ, ಆಶಿಕಾ ರಂಗನಾಥ್​ಗೆ ಕ್ವಾಟ್ಲೆ ಕೊಟ್ಟಿದ್ದ ಕಿಡಿಗೇಡಿಗಳು ಈಗ ಮಾಜಿ ಸಂಸದೆ, ನಟಿ ರಮ್ಯಾ ಮತ್ತು ಱಪರ್​ ಚಂದನ್​ ಶೆಟ್ಟಿ ಕಿರಿಕಿರಿ ಮಾಡುತ್ತಿದ್ದಾರೆ.

ಸೆಲೆಬ್ರೆಟಿಗಳಿಗೆ ಹ್ಯಾಕರ್ಸ್​ ಕಾಟ ಹೊಸದೇನಲ್ಲ. ಲಾಕ್​ಡೌನ್​ ಸಮಯದಲ್ಲೂ ಕೆಲ ಹಿರಿತೆರೆ-ಕಿರುತೆರೆ ಕಲಾವಿದರ ಸೋಷಿಯಲ್​ ಮೀಡಿಯಾ ಅಕೌಂಟ್ಸ್​ ಹ್ಯಾಕ್​ ಆಗಿತ್ತು. ನಂತರ ಅದನ್ನ ಸರಿಪಡಿಸಿಕೊಳ್ಳಲಾಗಿತ್ತು. ಇದೀಗ ಮಾಜಿ ಸಂಸದೆ, ನಟಿ ರಮ್ಯಾ ಅವರಿಗೂ ಇದೇ ಸಮಸ್ಯೆ ಎದುರಾಗಿದೆ. ಒಂದು ವರ್ಷದಿಂದ ಸೋಷಿಯಲ್​ ಮೀಡಿಯಾದಲ್ಲಿ ಸೈಲೆಂಟ್​ ಆಗಿದ್ದ ರಮ್ಯಾ, ಕಳೆದೆರಡು ತಿಂಗಳಿನಿಂದ ಫುಲ್​ ಆ್ಯಕ್ಟೀವ್​ ಆಗಿದ್ದಾರೆ. ಅದರಲ್ಲೂ ಇನ್​ಸ್ಟಾಗ್ರಾಂನಲ್ಲಿ ದಿನಕ್ಕೊಂದು ಪೋಸ್ಟ್​ ಮಾಡುತ್ತಿದ್ದಾರೆ.

ಫೋಟೋಗಳನ್ನ ಹಂಚಿಕೊಳ್ಳುತ್ತಿದ್ದ ರಮ್ಯಾ, ಕೆಲವೆ ಜೊತೆ ಚಾಟ್​ ಕೂಡ ಮಾಡುತ್ತಿದ್ದರು. ಆದರೆ, ಏಕಾಏಕಿ ರಮ್ಯಾ ಇನ್​ಸ್ಟಾ ಅಕೌಂಟ್​ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಪೋಸ್ಟ್​ ಮಾಡೋದಕ್ಕೆ ಪ್ರಯತ್ನಿಸಿದರು ಸಾಧ್ಯವಾಗುತ್ತಿಲ್ಲ ಅಂತ ಬರೆದುಕೊಂಡಿದ್ದಾರೆ. ಈ ಬಗ್ಗೆ ಸ್ಕ್ರೀನ್​ ಶಾಟ್ ಹಾಕಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಹಾಕಿರೋ ಫೋಟೋಗಳು ಕಾಣ್ತಿದ್ಯಾ(?) ಅಂತ ಅಭಿಮಾನಿಗಳನ್ನ ಕೇಳಿದ್ದಾರೆ. ಆದರೆ ಅವರ ಪೋಸ್ಟ್​ಗಳು ಕಾಣಿಸುತ್ತಿಲ್ಲ.

ಮಾಜಿ ಸಂಸದೆ ರಮ್ಯಾ ಇನ್​ಸ್ಟಾ ಅಕೌಂಟ್​ ಮಾತ್ರವಲ್ಲ ಱಪರ್​ ಚಂದನ್​ ಶೆಟ್ಟಿ, ಫೇಸ್ಬುಕ್​ ಅಕೌಂಟ್​ನ ಕೂಡ ಕಿಡಿಗೇಡಿಗಳು ಹ್ಯಾಕ್​ ಮಾಡಿದ್ದಾರೆ. ಇತ್ತೀಚೆಗೆ ಕೋಲುಮಂಡೆ ಱಪ್​ ಸಾಂಗ್​ ಮಾಡಿ ಮಾದಪ್ಪನ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದ ಚಂದನ್​​ ಶೆಟ್ಟಿಗೆ ಹೊಸ ತಲೆ ನೋವು ಶುರುವಾಗಿದೆ.

ಯಾರೋ ಚಂದನ್​ ಶೆಟ್ಟಿ ಫೇಸ್ಬುಕ್​ ಅಕೌಂಟ್​ ಹ್ಯಾಕ್​ ಮಾಡಿ ಏನೇನೋ ಪೋಸ್ಟ್​ ಮಾಡಿದ್ದಾನೆ. ಫೇಸ್ಬುಕ್ ಲೈವ್​ ಬಂದಿದ್ದಾನೆ. ಇನ್ನು ಚಂದನ್​ ಶೆಟ್ಟಿ ಪರ್ಸನಲ್​ ಫೇಸ್ಬುಕ್​ ಅಕೌಂಟ್​ ಡಿಲೀಟ್​ ಆಗಿದ್ರೆ, ಫೇಸ್ಬುಕ್​ ಪೇಜ್​ನಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತುಕೊಂಡ ಚಂದನ್ ಶೆಟ್ಟಿ ಈ ಬಗ್ಗೆ ಫೇಸ್ಬುಕ್ ಸಂಸ್ಥೆ​ಗೆ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಯುವ ನಿರೀಕ್ಷೆಯಲ್ಲಿದ್ದಾರೆ.

ಒಟ್ಟಾರೆಯಾಗಿ ಕಿಡಿಗೇಡಿಗಳ ಕಿರಿಕಿರಿ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಸಾಮಾನ್ಯವಾಗಿ ನಟ,ನಟಿಯರು ತಮ್ಮ ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟೀವ್ ಆಗಿರುತ್ತಾರೆ. ಆದರೆ, ಇಂತಹ ಖಾತೆಗಳ ಮೇಲೆ ಕಿಡಿಗೇಡಿಗಳು ಕಣ್ಣು ಬಿದ್ದು ಇಷ್ಟೆಲ್ಲಾ ರಾದ್ಧಾಂತ ನಡೀತಿದೆ. ಇದಕ್ಕೆಲ್ಲಾ ಯಾವಾಗ ಬ್ರೇಕ್​ ಬೀಳುತ್ತೋ ಕಾದು ನೋಡಬೇಕು.

Next Story

RELATED STORIES