Top

ಹಾಸ್ಯ ಭೋಜನ ಬಡಿಸಲು ಬರುತ್ತಿದ್ದಾನೆ 'ಭೀಮಸೇನ ನಳಮಹಾರಾಜ'

ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಅಕ್ಟೋಬರ್​ 29 ಕ್ಕೆ ತೆರೆಗೆ ಬರ್ಲಿದೆ ಸಿನಿಮಾ.

ಹಾಸ್ಯ ಭೋಜನ ಬಡಿಸಲು ಬರುತ್ತಿದ್ದಾನೆ ಭೀಮಸೇನ ನಳಮಹಾರಾಜ
X

ಸ್ಯಾಂಡಲ್​ವುಡ್​ನಲ್ಲಿ ಟೈಟಲ್​ ಮತ್ತು ಮೋಶನ್ ಪೋಸ್ಟರ್​ ಮೂಲಕ ಗಮನ ಸೆಳೆದಿರುವ ಭೀಮಸೇನಾ ನಳಮಹಾರಾಜ ಸದ್ಯ ರಿಲೀಸ್​ಗೆ ರೆಡಿಯಾಗಿದೆ. ರಿಲೀಸ್​ಗೂ ಮುನ್ನ ಚಿತ್ರದ 2 ಡಿಫ್ರೆಂಟ್ ಟೀಸರ್​ಗಳು​​ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ.

ಭೀಮಸೇನಾ ನಳಮಹಾರಾಜ ಸಿನಿಮಾ ಕೇವಲ ಟೈಟಲ್​ ಮತ್ತು ಮೊಶನ್​ ಪೋಸ್ಟರ್​ನಿಂದ್ಲೇ ಸಕತ್​ ಸೌಂಡ್ ಮಾಡಿತ್ತು. ಇದೀಗ ಚಿತ್ರದ 2 ಡಿಫ್ರೆಂಟ್ ಟೀಸರ್​ಗಳು ರಿಲೀಸ್​ ಆಗಿದ್ದು, ಸಿನಿಮಾ ಮೇಲೆ ಸಾಕಷ್ಟು ಕುತೂಹಲ ಹೆಚ್ಚಿಸಿದೆ.

ಭೀಮಸೇನ ನಳಮಹರಾಜ ಕಾಮಿಡಿ ಜೊತೆಗೆ ಫ್ಯಾಮಿಲಿ ಎಂಟರ್​ಟೈನರ್​ ಸಿನಿಮಾ ಆಗಿದ್ದು,ತಂದೆ-ಮಗಳ ಬಾಂದವ್ಯದ ಕಥೆಯೂ ಚಿತ್ರದಲ್ಲಿದೆ. ಆದರೆ, ಟೀಸರ್ ನೋಡುತ್ತಿದ್ದರೆ, ಟೈಟಲ್​ಗೆ ತಕ್ಕಂತೆ ಅಡುಗೆಯನ್ನೇ ಮೇನ್​ ಕಾನ್ಸೆಪ್ಟ್​ ಮಾಡಿಕೊಂಡತ್ತಿದೆ.

ಇನ್ನು ಚಿತ್ರದ ಲೀಡ್​ರೋಲ್​ನಲ್ಲಿ ಅರ್​​ವಿಂದ್​ ಅಯ್ಯರ್, ಆರೋಹಿ ನಾರಾಯಣನ್​ ಮುಂತಾದವರು ನಟಿಸಿದ್ದು, ಅರ್​​ವಿಂದ್ ಡಿಫ್ರೆಂಟ್ ಶೇಡ್​ಗಳಲ್ಲಿ ಮಿಂಚಿರೋದು ಟೀಸರ್​ನಲ್ಲಿ ಗೊತ್ತಾಗ್ತಿದೆ.

ಚಿತ್ರಕ್ಕೆ ಕಾರ್ತಿಕ್ ಸರಗೂರು ಆ್ಯಕ್ಷನ್ ಕಟ್ ಹೇಳಿದ್ದು, ಪುಷ್ಕರ್ ಮಲ್ಲಿಕಾರ್ಜುನಯ್ಯ, ನಟ ರಕ್ಷಿತ್ ಶೆಟ್ಟಿ ಬಂಡವಾಳ ಹೂಡಿ್ದ್ದಾರೆ. ಅಂದ್ಹಾಗೇ ಸಿನಿಮ ಇದೇ ಅಕ್ಟೋಬರ್​ 29 ರಂದು ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ತೆರೆಗೆ ಬರ್ತಿದೆ.

Next Story

RELATED STORIES