Top

ಮೇಕಿಂಗ್ ನೋಡಿ ಥ್ರಿಲ್ ಆದ ಬಾದ್ಶಾ ಅಭಿಮಾನಿಗಳು

ರೂಲ್ ಮಾಡೋಕ್ಕೆ ರೆಡಿಯಾದ ಕೋಟಿಗೊಬ್ಬ ಕಿಚ್ಚ

ಮೇಕಿಂಗ್ ನೋಡಿ ಥ್ರಿಲ್ ಆದ ಬಾದ್ಶಾ ಅಭಿಮಾನಿಗಳು
X

ಸ್ಯಾಂಡಲ್​ವುಡ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ಸ್ಟಾರ್ಸ್​ ಸಿನಿಮಾಗಳ ಅಬ್ಬರ ಶುರುವಾಗಿದೆ. ಇಷ್ಟು ದಿನ ಸೈಲೆಂಟಾಗಿದ್ದ ಕೋಟಿಗೊಬ್ಬ 3, ಇದೀಗ ಸದ್ದು ಮಾಡೋಕ್ಕೆ ಶುರುಮಾಡಿದೆ. ಏಪ್ರಿಲ್​ನಲ್ಲಿ ಸಿನಿಮಾ ತೆರೆಗೆ ಬರ್ತಿದ್ದು, ಅದಕ್ಕೂ ಮುನ್ನ ಮೊದಲ ಮೇಕಿಂಗ್​ ವಿಡಿಯೋ ರಿಲೀಸ್​ ಮಾಡಿದ್ದಾರೆ.

ಕೋಟಿಗೊಬ್ಬ 3. ಕಿಚ್ಚ ಸುದೀಪ್​ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಡೆಡ್​ ಸಿನಿಮಾ. ಈಗಾಗಲೇ ಚಿತ್ರದ ಟೀಸರ್. ಲಿರಿಕಲ್​ ಸಾಂಗ್ಸ್​ ಸಖತ್​ ಸೌಂಡ್ ಮಾಡುತ್ತಿದೆ. ಅದರಲ್ಲೂ ಪಟಾಕಿ ಪೊರಿಯೋ ಸಾಂಗ್​ ಅಂತೂ ಪಡ್ಡೆಹುಡುಗರ ಆ್ಯಂತಂ ಆಗ್ಬಿಟ್ಟಿದೆ.

ಇಷ್ಟು ದಿನ ಬೇರೆ ಬೇರೆ ಸ್ಟಾರ್ಸ್​ ಸಿನಿಮಾಗಳ ರಿಲೀಸ್​ ಅಬ್ಬರದಿಂದ, ಕೋಟಿಗೊಬ್ಬ 3 ಸಿನಿಮಾ ತಂಡ ಕೊಂಚ ಸೈಲೆಂಟಾಗೇ ಇತ್ತು. ಇದೀಗ ಏಪ್ರಿಲ್ 29ಕ್ಕೆ ಸಿನಿಮಾ ರಿಲೀಸ್​ ಡೇಟ್ ಫಿಕ್ಸ್ ಆಗಿದ್ದು, ಪ್ರಮೋಶನ್​ ಕೆಲಸ ಶುರುಮಾಡಿದೆ. ಈಗಾಗಲೇ ಕೋಟಿಗೊಬ್ಬ 3 ಟೀ ಶರ್ಟ್​ಗಳು, ಮಾಸ್ಕ್​​​ಗಳು ಮಾರ್ಕೆಟ್​​ಗೆ ಇಳಿದಿವೆ. ಇದೀಗ ಮೊದಲ ಮೇಕಿಂಗ್​ ವಿಡಿಯೋ ರಿಲೀಸ್​ ಮಾಡೋ ಮೂಲಕ ಮತ್ತೆ ಸೌಂಡ್​ ಶುರುಮಾಡಿದೆ.

ಕಿಚ್ಚ ಸುದೀಪ್​ ಐದಾರು ದಿನಗಳ ಹಿಂದೆಯೇ, ಮೇಕಿಂಗ್​ ವಿಡಿಯೋ ರಿಲೀಸ್​ ಮಾಡೊದಾಗಿ ಟ್ವೀಟ್​ ಮಾಡಿದರು. ಅದರಂತೆ ಇದೀಗ ಚಿತ್ರದ ಅದ್ದೂರಿ ಮೇಕಿಂಗ್​ ರಿಲೀಸ್ ಆಗಿದೆ. ಇನ್ನು ಈ ಮೇಕಿಂಗ್​ ವಿಡಿಯೋದಲ್ಲಿ ಕಿಚ್ಚನ ಇಂಟ್ರೋಡಕ್ಷನ್​ ಸಾಂಗ್, ಪಟಾಕಿ ಪೋರಿಯೊ ಸಾಂಗ್​ ಹಾಗೂ ಒಂದಷ್ಟು ದೃಶ್ಯಗಳ ಮೇಕಿಂಗ್​ ಸ್ಯಾಂಪಲ್​ಗಳು ಮಿಕ್ಸ್​ ಆಗಿವೆ. ಚಿತ್ರದ ನಾಯಕಿ ಮಡೋನ್ನಾ ಸಬಾಸ್ಟಿಯನ್​ ಕಲರ್​ಫುಲ್​ ಆಗಿ ಮೇಕಿಂಗ್​ ವಿಡಿಯೋದಲ್ಲಿ ಮಿಂಚಿದ್ದಾರೆ.

ಸದ್ಯ ಕೋಟಿಗೊಬ್ಬ 3 ಮೇಕಿಂಗ್​ ನೋಡಿ ಥ್ರಿಲ್​ ಆಗಿರೋ ಫ್ಯಾನ್ಸ್, ಸಿನಿಮಾ ರಿಲೀಸ್​ಗಾಗಿ ಕಾಯ್ತಿದ್ದಾರೆ. ಅಂದ್ಹಾಗೇ ಕೋಟಿಗೊಬ್ಬ 3 ಶಿವ ಕಾರ್ತಿಕ್​ ನಿರ್ದೇಶನ, ಸೂರಪ್ಪ ಬಾಬು ನಿರ್ಮಾಣದಲ್ಲಿ ಮೂಡಿಬಂದಿದೆ.

Next Story

RELATED STORIES