Top

ಬಡವ ರಾಸ್ಕಲ್ ಸಿನಿಮಾ​ ಶೂಟಿಂಗ್​ ಮುಕ್ತಾಯ; ಕಾರ್ಮಿಕರಿಗೆ ಉಡುಗೊರೆ

ಡಾಲಿ ಧನಂಜಯ್​ ಅವರು 'ಬಡವ ರಾಸ್ಕಲ್'​ ಸಿನಿಮಾ ನಿರ್ಮಾಣ ಮಾಡೋ ಮೂಲಕ ಕೆರೆಯೆ ನೀರನ್ನ ಕೆರೆಗೆ ಚೆಲ್ಲಿ ಅಂತಿದ್ದಾರೆ.

ಬಡವ ರಾಸ್ಕಲ್ ಸಿನಿಮಾ​ ಶೂಟಿಂಗ್​ ಮುಕ್ತಾಯ; ಕಾರ್ಮಿಕರಿಗೆ ಉಡುಗೊರೆ
X

ಸ್ಯಾಂಡಲ್​ವುಡ್​ನ ಡಾಲಿ ಧನಂಜಯ್​ ನಟನೆ ಜೊತೆಗೆ ಸಿನಿಮಾ ನಿರ್ಮಾಣ ಮಾಡುತ್ತಿರೋದು ಗೊತ್ತೇಯಿದೆ. ತಮ್ಮದೇ ನಿರ್ಮಾಣದ ಬಡವ ರಾಸ್ಕಲ್​ ಶೂಟಿಂಗ್​ ಕಂಪ್ಲೀಟ್ ಮಾಡಿರೋ ಡಾಲಿ, ಒಬ್ಬ ನಿರ್ಮಾಪಕನಾಗಿ, ಒಂದೊಳ್ಳೆ ಕೆಲಸ ಮಾಡಿದ್ದಾರೆ. ದುಡಿಯುವ ಕೈಗಳಿಗೆ ತಮ್ಮ ಕೈಲಾದ ಸಹಾಯ ಹಸ್ತ ಚಾಚಿದ್ದು, ಕೆರೆಯ ನೀರನು ಕೆರೆಗೆ ಚೆಲ್ಲಿ ಅನ್ನೋ ಮಾತನ್ನ ಪಾಲಿಸ್ತಾ ಇದ್ದಾರೆ.

ಸಿನಿಮಾರಂಗದಲ್ಲಿ ದುಡಿದಿದ್ದನ್ನ ಮತ್ತೆ ಸಿನಿಮಾರಂಗಕ್ಕೆ ಹಾಕೋರು,ಇಲ್ಲಿ ದುಡಿದಿದ್ದನ್ನ ಇಲ್ಲೇ ಕಳೆಯೋರು, ಇಲ್ಲೆ ಏನಾದ್ರೂ ಮಾಡಬೇಕು. ದುಡಿದರೂ ಇಲ್ಲೇ, ಕಳ್ಕೊಂಡರು ಇಲ್ಲೇ ಅನ್ನೋರು ಬಹಳ ಕಡಿಮೆ ಮಂದಿ. ಆದರೆ, ಈ ಸಾಲಿಗೆ ಸೇರ್ತಾರೆ ಡಾಲಿ ಧನಂಜಯ್​, ಅದಕ್ಕೆ ಉದಾಹರಣೆಗೆ ತಾನು ನಟನಾಗಿ ದುಡಿದ ಹಣವನ್ನ, ನಿರ್ಮಾಪಕರಾಗಿ ಮತ್ತೆ ಸಿನಿಮಾಗೆ ಹಾಕುತ್ತಿರೋದು. ಬಡವ ರಾಸ್ಕಲ್​ ಸಿನಿಮಾ ನಿರ್ಮಾಣ ಮಾಡೋ ಮೂಲಕ ಕೆರೆಯೆ ನೀರನ್ನ ಕೆರೆಗೆ ಚೆಲ್ಲಿ ಅಂತಿದ್ದಾರೆ ಡಾಲಿ.


ಡಾಲಿ ನಿರ್ಮಾಣದ ಮೊದಲ ಸಿನಿಮಾ ಬಡವ ರಾಸ್ಕಲ್​. ಸದ್ಯ ರೀಸೆಂಟಾಗಿ ಚಿತ್ರದ ಶೂಟಿಂಗ್​ ಕಂಪ್ಲೀಟ್ ಮಾಡಿದ್ದಾರೆ. ಇದೇ ಖುಷಿಯಲ್ಲಿ, ತಮ್ಮ ಸಿನಿಮಾಗಾಗಿ ದುಡಿದ ಸಿನಿಕಾರ್ಮಿಕರಿಗೆ ಉಡುಗೊರೆಗಳನ್ನ ನೀಡಿದ್ದಾರೆ ಡಾಲಿ ಧನಂಜಯ್. ಸುಮಾರು 100ಕ್ಕೂ ಹೆಚ್ಚು ಸಿನಿಮಾ ಕಾರ್ಮಿಕರಿಗೆ ಮನೆಗೆ ಉಪಯುಕ್ತವಾಗುವಂತಹ ಕುಕ್ಕರ್, ತವಾ, ಹಾಟ್​ ವಾಟರ್ ಬಾಟಲ್​ಗಳನ್ನ ನೀಡಿದ್ದಾರೆ. ಇಷ್ಟು ದಿನ ಸಿನಿಮಾಗಾಗಿ ದುಡಿದ ಕೈಗಳು ಖುಷಿಯಾಗರ್ಲಿ ಅಂತ ಡಾಲಿ ಈ ಕೆಲಸ ಮಾಡಿದ್ದಾರೆ. ಡಾಲಿ ಉಡುಗೊರೆಯನ್ನ ಸ್ವೀಕರಿಸಿದ ಸಿನಿಕಾರ್ಮಿಕರು , ಡಾಲಿಗೆ ತುಂಬು ಹೃದಯದಿಂದ ಹರಸಿ ಹಾರೈಸಿದ್ದಾರೆ.


ಇನ್ನು ಬಡವ ರಾಸ್ಕಲ್​ ಸಿನಿಮಾ 4 ಶೆಡ್ಯೂಲ್​ಗಳಲ್ಲಿ ಶೂಟಿಂಗ್​ ಮುಗಿಸಿದ್ದು, ಬೆಂಗಳೂರು, ಪಾಂಡವಪುರ ಸೇರಿಂದತೆ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದಾರೆ. ಚಿತ್ರದಲ್ಲಿ ಡಾಲಿಗೆ ಅಮೃತಾ ಅಯ್ಯಂಗಾರ್ ಜೋಡಿಯಾಗಿದ್ದು, ರಂಗಾಯಣ ರಘು, ಹಿರಿಯ ನಟಿ ತಾರಾ ಅನುರಾಧ, ಸ್ಪರ್ಶ ರೇಖಾ ಹೀಗೆ ಸಾಕಷ್ಟು ಕಲಾವಿದರ ದಂಡೇ ಇದೆ.

ಚಿತ್ರಕ್ಕೆ ಶಂಕರ್​ ಗುರು ಆ್ಯಕ್ಷನ್ ಕಟ್ ಹೇಳಿದ್ದು, ವಾಸುಕಿ ವೈಭವ್ ಸಂಗೀತ ನಿರ್ದೇಶನವಿದೆ. ಚಿತ್ರದ ಟೈಟಲ್​ ಈಗಾಗ್ಲೇ ಎಲ್ಲರ ಗಮನ ಸೆಳೆದಿದ್ದು, ಮುಂದಿನ ವರ್ಷ ಬಡವ ರಾಸ್ಕಲ್​ ತೆರೆಗೆ ಬರ್ಲಿದ್ದಾನೆ.

Next Story

RELATED STORIES