Top

ಮತ್ತೆ ಬುರ್ಜ್ ಖಲೀಫಾಗೆ ಕಿಚ್ಚನ ಎಂಟ್ರಿ

ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಚಿತ್ರದ ಟೀಸರ್​ನ್ನ ಕಿಚ್ಚ ಸುದೀಪ್​ ಬುರ್ಜ್​ ಖಲೀಫಾದಲ್ಲಿ ಮಾಡಲಿದ್ದಾರೆ ಅಂತ ಅನೌನ್ಸ್​ ಮಾಡಲಾಗಿದೆ.

ಮತ್ತೆ ಬುರ್ಜ್ ಖಲೀಫಾಗೆ ಕಿಚ್ಚನ ಎಂಟ್ರಿ
X

ಕಿಚ್ಚ ಸುದೀಪ್​ ರೀಸೆಂಟಾಗಿ ತಮ್ಮ 25ನೇ ವರ್ಷದ ಸಿನಿ ಜರ್ನಿಯ ಸಂಭ್ರಮವನ್ನ ಬುರ್ಜ್​ ಖಲೀಫಾದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡರು ಆದರೆ ಇದೀಗ ಮತ್ತೊಮ್ಮೆ ಬುರ್ಜ್​ ಖಲೀಫಾಗೆ ಎಂಟ್ರಿ ಕೊಡ್ತಿದ್ದಾರೆ. ಆದರೆ, ಈ ಬಾರಿ ಕಿಚ್ಚ ದುಬೈ ಫ್ಲೈಟ್ ಹತ್ತುತ್ತಾ ಇರೋದು ಹಾಸ್ಟೆಲ್​ ಹುಡುಗರಿಗಾಗಿ.

ಬಾದ್ಶಾ ಕಿಚ್ಚ ಸುದೀಪ್, ಮೊನ್ನೆ ಮೊನ್ನೆಯಷ್ಟೇ ತಮ್ಮ 25ನೇ ವರ್ಷದ ಸಿನಿಜರ್ನಿ ಸೆಲೆಬ್ರೇಷನ್​ನ್ನ ಅದ್ದೂರಿಯಾಗಿ ಬುರ್ಜ್​ ಖಲೀಫಾದಲ್ಲಿ ಆಚರಿಸಿಕೊಂಡರು. ಇದೀಗ ಮತ್ತೊಮ್ಮೆ ಕಿಚ್ಚ ದುಬೈ ಫ್ಲೈಟ್ ಹತ್ತೊಕ್ಕೆ ರೆಡಿಯಾಗಿದ್ದಾರೆ. ಅದು ಸ್ಯಾಂಡಲ್​ವುಡ್​ನ ಹೊಸ ಚಿತ್ರತಂಡವಾದ ಹಾಸ್ಟೆಲ್​ ಹುಡುಗರಿಗಾಗಿ.

ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ. ಇದು ಸ್ಯಾಂಡಲ್​ವುಡ್​ ನಲ್ಲಿ ರೆಡಿಯಾಗ್ತಿರೋ ಹೊಸ ಸಿನಿಮಾ. ಟೈಟಲ್ಲೇ ಸಖತ್​ ಡಿಫ್ರೆಂಟಾಗಿದ್ದು, ಈ ಹಿಂದೆ ಚಿತ್ರದ ಪೋಸ್ಟರ್​ಅನ್ನು 18 ಸಾವಿರ ಅಡಿ ಎತ್ತರದ ಜಾಗದಲ್ಲಿ ನಿಂತು ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ ಲಾಂಚ್ ಮಾಡಿದರು. ಕಟ್ ಮಾಡಿದ್ರೆ ಅಪ್ಪು ಗ್ರೀನ್​ ಮ್ಯಾಟ್​ನಲ್ಲಿ ನಿಂತಿರೋ ದೃಶ್ಯ ಕಣ್ಣಿಗೆ ಬೀಳುತ್ತೆ. ಈ ರೀತಿ ಫನ್​ ವೇ ನಲ್ಲಿ ಮೊದಲ ಪೋಸ್ಟರ್ ಬಿಟ್ಟಿದ್ರು ಹಾಸ್ಟೆಲ್​ ಹುಡುಗರು.

ಇದೀಗ ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಚಿತ್ರದ ಟೀಸರ್​ನ್ನ ಕಿಚ್ಚ ಸುದೀಪ್​ ಬುರ್ಜ್​ ಖಲೀಫಾದಲ್ಲಿ ಮಾಡಲಿದ್ದಾರೆ ಅಂತ ಅನೌನ್ಸ್​ ಮಾಡಲಾಗಿದೆ. ಹಾಗಾದ್ರೆ ಕಿಚ್ಚನ ನಿಜಕ್ಕೂ ಮತ್ತೆ ದುಬೈ ಫ್ಲೈಟ್ ಹತ್ತುತ್ತಾರಾ(?) ಅಲ್ಲೇ ಟೀಸರ್ ಲಾಂಚ್​ ಅಗುತ್ತಾ ಅಥವಾ ಮತ್ತೊಮ್ಮೆ ಹಾಸ್ಟೆಲ್​ ಹುಡುಗರು ಬಿಸ್ಕೆಟ್ ಹಾಕೋ ಪ್ಲಾನ್​ ಮಾಡಿದ್ದಾರಾ ಅನ್ನೋದು ಫೆಬ್ರವರಿ 15 ರಂದು ಗೊತ್ತಾಗಲಿದೆ.

Next Story

RELATED STORIES