Top

ವಿಕ್ರಾಂತ್​ ರೋಣ ಚಿತ್ರತಂಡದಿಂದ ಬಿಗ್​ ಅಪ್​ಡೇಟ್​

ಬಹುಶಃ ವಿಕ್ರಾಂತ್​ ರೋಣ ಚಿತ್ರದ ಟ್ರೇಲರ್, ಸಾಂಗ್​ ಅಥವಾ ರಿಲೀಸ್​ ಡೇಟ್ ಅನೌನ್ಸ್​ ಆಗಬಹುದು ಅಂತಿದ್ದಾರೆ ಕಿಚ್ಚ ಫ್ಯಾನ್ಸ್

ವಿಕ್ರಾಂತ್​ ರೋಣ ಚಿತ್ರತಂಡದಿಂದ ಬಿಗ್​ ಅಪ್​ಡೇಟ್​
X

ಕಿಚ್ಚ ಸುದೀಪ್​ ವಿಕ್ರಾಂತ್​ ರೋಣ ಆಗಿದ್ದೇ ತಡ. ಚಿತ್ರದ ಮೇಲಿನ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಬುರ್ಜ್​ ಖಲೀಫಾ ಮೇಲೆ ಟೈಟಲ್​ ಲೋಗೋ ಲಾಂಚ್ ಆದಮೇಲಂತೂ ಸಿನಿಮಾದ ಅದ್ದೂರಿತನದ ಬಗ್ಗೆ ಮಾತಾಡೋ ಹಾಗೇ ಇಲ್ಲ. ಇದೀಗ ವಿಕ್ರಾಂತ್​ ರೋಣನ ಕಡೆಯಿಂದ ಒಂದು ಸರ್​ಪ್ರೈಸ್​ ಸಿಗೋ ಟೈಂ ಬಂದಿದೆ.

ವಿಕ್ರಾಂತ್​ ರೋಣ. ಸಿನಿಮಾ ಶುರುವಿನಿಂದ ಇಲ್ಲಿವರೆಗೂ ಚಿತ್ರದ ಮೇಲಿನ ನಿರೀಕ್ಷೆ ಹಂತಹಂತವಾಗಿ ಹೆಚ್ಚಾಗ್ತಾನೇ ಇದೆ. ಈವರೆಗೂ ಚಿತ್ರದ ಲೀಡ್​ ಪಾತ್ರಗಳ ಪರಿಚಯ ಆಗಿದೆ. ಮೇಕಿಂಗ್​ ವಿಡಿಯೋಸ್​, ಜೊತೆಗೆ ಟೀಸರ್​ನಂತಹ ಸ್ಮಾಲ್​ ಝಲಕ್​ಗಳನ್ನು ನೋಡಿದ್ದೇವೆ. ಇದಿಷ್ಟೇ ಸ್ಯಾಂಪಲ್​ಗಳು ವಿಕ್ರಾಂತ್​ ರೋಣನನ್ನ ಬಿಗ್​ ಸ್ಕ್ರೀನ್ ಮೇಲೆ ನೋಡೋ ಕ್ಯೂರಿಯಾಸಿಟಿ ಜಾಸ್ತಿ ಮಾಡಿದೆ.

ಇದೀಗ ವಿಕ್ರಾಂತ್​ ರೋಣ ಚಿತ್ರದಿಂದ ಬಿಗ್​ ಸರ್​​ಪ್ರೈಸ್​ವೊಂದು ಕಾದಿದೆ. ಹೀಗಂತ ಸ್ವತಃ ಕಿಚ್ಚ ಸುದೀಪ್​ ಮತ್ತು ನಿರ್ದೇಶಕ ಅನೂಪ್​ ಭಂಡಾರಿ ಟ್ವೀಟ್ ಮಾಡಿದ್ದಾರೆ. ಆದರೆ, ಈ ಸರ್​​ಪ್ರೈಸ್​ ಏನು ಅಂತ ತಿಳ್ಕೋಳ್ಳೋಕ್ಕೆ ಏಪ್ರಿಲ್​ 15 ರವರೆಗೆ ಕಾಯಲೇಬೇಕು. ಏಪ್ರಿಲ್​ 15, ಬೆಳಿಗ್ಗೆ 11.10 ಕ್ಕೆ ಈ ಸರ್​ಪ್ರೈಸ್​​ ರಿವೀಲ್​ ಆಗಲಿದೆ.

ಈಗಾಗಲೇ ಅಭಿಮಾನಿಗಳು ಈ ಸರ್​ಪ್ರೈಸ್​ ಏನಿರಬಹುದು ಅಂತ ಗೆಸ್​ ಮಾಡೋಕ್ಕೆ ಶುರುಮಾಡಿದ್ದಾರೆ. ಬಹುಶಃ ವಿಕ್ರಾಂತ್​ ರೋಣ ಚಿತ್ರದ ಟ್ರೇಲರ್, ಸಾಂಗ್​ ಅಥವಾ ರಿಲೀಸ್​ ಡೇಟ್ ಅನೌನ್ಸ್​ ಆಗಬಹುದು ಅಂತಿದ್ದಾರೆ ಕಿಚ್ಚ ಫ್ಯಾನ್ಸ್.

ಇನ್ನು ಚಿತ್ರಕ್ಕೆ ನಿರ್ಮಾಪಕ ಜಾಕ್​ ಮಂಜು ಬಂಡವಾಳ ಹೂಡಿದ್ದು, ನಿರೂಪ್​ ಭಂಡಾರಿ, ನೀತಾ ಅಶೋಕ್​ ಲೀಡ್​ ರೋಲ್​ನಲ್ಲಿ ಮಿಂಚಿದ್ದಾರೆ. ಅಜನೀಶ್​ ಲೋಕನಾಥ್​ ಮ್ಯೂಸಿಕ್​ ಮಾಡಿದ್ದು, ಸದ್ಯದಲ್ಲೇ ವಿಕ್ರಾಂತ್​ ರೋಣನ ಬಿಗ್​ ಅಪ್​ಡೆಟ್ ಸಿಗಲಿದೆ.

Next Story

RELATED STORIES