Top

'ಅಂಬಿ ನಿಂಗ್ ವಯಸ್ಸಾಯ್ತೋ' ನಿರ್ದೇಶಕನ ನೆಕ್ಸ್ಟ್ ವೆಂಚರ್​​ನಲ್ಲಿ ಪ್ರಜ್ಜು

ಆ್ಯಕ್ಷನ್​ ಥ್ರಿಲ್ಲರ್​ ಸಿನಿಮಾದಲ್ಲಿ ಹೇಗಿರಲಿದೆ ಡೈನಾಮಿಕ್​ ಪ್ರಿನ್ಸ್​ ಲುಕ್

ಅಂಬಿ ನಿಂಗ್ ವಯಸ್ಸಾಯ್ತೋ ನಿರ್ದೇಶಕನ ನೆಕ್ಸ್ಟ್ ವೆಂಚರ್​​ನಲ್ಲಿ ಪ್ರಜ್ಜು
X

ರೆಬೆಲ್​ ಸ್ಟಾರ್ ಅಂಬರೀಶ್​ ಅಭಿನಯದ ಲಾಸ್ಟ್ ಫಿಲ್ಮ್ ಅಂಬಿ ನಿಂಗ್ ವಯಸ್ತಾಯ್ತೋ. ಈ ಸಿನಿಮಾ ಆದ್ಮೇಲೆ ಒಂದಷ್ಟು ಗ್ಯಾಪ್​ ತೊಗೊಂಡಿದ್ದ ಯಂಗ್​ ಡೈರೆಕ್ಟರ್ ಗುರುದತ್ ಗಾಣಿಗ ಇದೀಗ, ಎರಡನೇ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ. ಈ ಬಾರಿ ಯಾರಿಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ಮೂಲಕ ಗುರುತಿಸಿಕೊಂಡಿದ್ದ ಯಂಗ್​ ಡೈರೆಕ್ಟರ್ ,ಗುರುದತ್ ಗಾಣಿಗ, ಇದೀಗ ಎರಡನೇ ಸಿನಿಮಾಗೆ ಆಕ್ಷನ್ ಕಟ್ ಹೇಳೋಕ್ಕೆ ರೆಡಿಯಾಗಿದ್ದಾರೆ. ಔಟ್ ಅಂಡ್ ಔಟ್ ಆ್ಯಕ್ಷನ್​ ಥ್ರಿಲ್ಲರ್​ ಸಿನಿಮಾ ಇದಾಗಿದ್ದು, ಡೈನಮಿಕ್​ ಪ್ರಿನ್ಸ್​ ಪ್ರಜ್ವಲ್​ ದೇವರಾಜ್​ ಲೀಡ್​ ರೋಲ್ನಲ್ಲಿ ಮಿಂಚ್ತಿದ್ದಾರೆ.

ಚಿತ್ರಕ್ಕೆ ಇನ್ನು ಟೈಟಲ್​ ಫಿಕ್ಸ್​ ಮಾಡಿರದ ಚಿತ್ರತಂಡ, ಸದ್ಯ ಪ್ರೀ ಪ್ರೊಡಕ್ಷನ್ ವರ್ಕ್​ನಲ್ಲಿ ಬ್ಯುಸಿಯಾಗಿದೆ. ಜನವರಿಯಲ್ಲಿ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲು ಪ್ಲಾನ್​ ಮಾಡಿಕೊಂಡಿದ್ದಾರೆ. ಮಾನವ ಕಳ್ಳಸಾಗಾಣಿಕೆಯ ಕುರಿತು ಈ ಸಿನಿಮಾ ರೆಡಿಯಾಗ್ತಿದ್ದು, ಪ್ರಜ್ವಲ್​ ದೇವರಾಜ್​ ಇದುವರೆಗೂ ಕಾಣಿಸಿಕೊಳ್ಳದಂತ ಪಾತ್ರ ಮತ್ತು ಲುಕ್​ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಸದ್ಯ ಇನ್ಸ್ ಪೆಕ್ಟರ್ ವಿಕ್ರಂ, ಅರ್ಜುನ್ ಗೌಡ, ವೀರಂ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಡೈನಮಿಕ್​ ಪ್ರಿನ್ಸ್​ ಜನವರಿಯಿಂದ ಹೊಸ ಚಿತ್ರದ ಶೂಟಿಂಗ್​ಗೆ ಹಾಜರಾಗಲಿದ್ದಾರಂತೆ.

Next Story

RELATED STORIES