Top

ನಿವೃತ್ತ ಕ್ಯಾಪ್ಟನ್ ಪಾತ್ರದಲ್ಲಿ ನಟ ರಾಘವೇಂದ್ರ ರಾಜ್​ಕುಮಾರ್

ಹೊಸ ವರ್ಷಕ್ಕೆ ಥಿಯೇಟರ್​ನಲ್ಲಿ ‘ರಾಜತಂತ್ರ’ ದರ್ಬಾರ್

ನಿವೃತ್ತ ಕ್ಯಾಪ್ಟನ್ ಪಾತ್ರದಲ್ಲಿ ನಟ ರಾಘವೇಂದ್ರ ರಾಜ್​ಕುಮಾರ್
X

ಕೊರೊನಾ ಸಮಸ್ಯೆಯಿಂದ ತಿಂಗಳುಗಟ್ಟಲೆ ಮುಚ್ಚಿದ್ದ ಥಿಯೇಟರ್​ಗಳ ಬಾಗಿಲು ತೆರೆದಿದ್ರೂ, ಸಿನಿಮಾ ರಿಲೀಸ್​ಗಳ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು. ಆದರೆ, ಹೊಸವರ್ಷಕ್ಕೆ ಸಾಲು ಸಾಲು ಹೊಸ ಸಿನಿಮಾಗಳು ತೆರೆಗೆ ಬರೋ ನಿರೀಕ್ಷೆಯಂತೂ ಇದೆ. ಹೊಸವರ್ಷದ ಮೊದಲ ದಿನವೇ ರಾಘವೇಂದ್ರ ರಾಜ್​ಕುಮಾರ್ ಅಭಿನಯದ ರಾಜತಂತ್ರ ಸಿನಿಮಾ ತೆರೆಗೆ ಬರೋ ಮೂಲಕ ಇದಕ್ಕೆ ನಾಂದಿ ಹಾಡುತ್ತಿದೆ.

ರಾಜತಂತ್ರ. ಹೊಸವರ್ಷದ ಮೊದಲ ಸಿನಿಮಾ ಆಗಿ ತೆರೆಗೆ ಬರ್ತಿದೆ. ಈ ಹಿಂದೆಯೇ ಚಿತ್ರದ ಟೀಸರ್​ನ್ನ ಅದ್ದೂರಿಯಾಗಿ ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್ ರಿಲೀಸ್ ಮಾಡಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಟೀಸರ್ ಪಾಸಿಟಿವ್​ ರೆಸ್ಪಾನ್ಸ್​ ಪಡೆದುಕೊಂಡಿತ್ತು.

ಇದೊಂದು ವಿಭಿನ್ನ ಕಥಾಹಂದರವನ್ನ ಹೊಂದಿರೋ ಸಿನಿಮಾ ಆಗಿದ್ದು, ನಿವೃತ್ತ ಮಿಲಿಟರಿ ಕ್ಯಾಪ್ಟನ್, ಆಗಿ ರಾಘವೇಂದ್ರ ರಾಜ್ ಕುಮಾರ್ ಅಭಿನಯಿಸುತ್ತಿದ್ದಾರೆ. ಹೊರಗಿನ ಶತ್ರುಗಳಿಂದ ದೇಶವನ್ನು ರಕ್ಷಿಸುತ್ತಿದ್ದ ನಾಯಕ, ನಿವೃತ್ತಿಯ ನಂತರವೂ ,ದೇಶದ ಒಳಗೆ ಯಾವರೀತಿ ಸಮಾಜ, ದೇಶವನ್ನು ದುಷ್ಟರಿಂದ ರಕ್ಷಿಸುತ್ತಾನೆ ಅನ್ನೋದೇ ಈ ಪಾತ್ರದ ಹೈಲೈಟ್.

ಚಿತ್ರದಲ್ಲಿ ನಟ ರಾಘವೇಂದ್ರ ರಾಜ್‍ಕುಮಾರ್ ಜೊತೆಗೆ ಹಿರಿಯ ಕಲಾವಿದರಾದ ದೊಡ್ಡಣ್ಣ, ಭವ್ಯ, ಶ್ರೀನಿವಾಸಮೂರ್ತಿ, ಶಂಕರ್‍ಅಶ್ವಥ್, ಮುನಿರಾಜು, ನೀನಾಸಂ ಅಶ್ವಥ್ ಹೀಗೆ ಸಾಕಷ್ಟು ಕಲಾವಿದರು ಕಾಣಿಸಿಕೊಂಡಿದ್ದಾರೆ.

ವಿಶೇಷ ಅಂದ್ರೆ ಚಿತ್ರದಲ್ಲಿ ಸ್ವತಃ ರಾಘವೇಂದ್ರ ರಾಜ್​ಕುಮಾರ್ ಆ್ಯಕ್ಷನ್​ ಸೀಕ್ವೆನ್ಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಫೈಟ್ಸ್, ಸಾಂಗ್ಸ್ ಎಲ್ಲಾ ಎಲಿಮೆಂಟ್ಸ್​ ಇರುವ ಕಮರ್ಷಿಯಲ್ ಸಿನಿಮಾ ಆಗಿದ್ದು, ಪಿವಿಆರ್ ಸ್ವಾಮಿ ಆ್ಯಕ್ಷನ್ ಕಟ್ ಹೇಳಿದ್ದಾರೆ.

ರಾಜತಂತ್ರ ಜನವರಿ 1 ರಂದು ರಾಜ್ಯಾದ್ಯಾಂತ 75 ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ತೆರೆಗೆ ಬರ್ತಿದ್ದು, ತ್ರಿವೇಣಿ ಮೇನ್​ ಥಿಯೇಟರ್ ಆಗಿದೆ.

Next Story

RELATED STORIES