Top

ಸ್ಯಾಂಡಲ್​ವುಡ್​ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಪತ್ನಿ ಅಂಬುಜಾ ವಿಧಿವಶ

ಅನಾರೋಗ್ಯದಿಂದ ದ್ವಾರಕೀಶ್ ಪತ್ನಿ ನಿಧನ

ಸ್ಯಾಂಡಲ್​ವುಡ್​ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಪತ್ನಿ ಅಂಬುಜಾ ವಿಧಿವಶ
X

ಬೆಂಗಳೂರು: ಚಂದನವನದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರ ಧರ್ಮಪತ್ನಿ ಅಂಬುಜಾ ಅವರು ಇಂದು ವಿಧಿವಶರಾಗಿದ್ದಾರೆ. 79 ವರ್ಷ ವಯಸ್ಸಾಗಿದ್ದ ಅಂಬುಜಾರವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ಹೆಚ್​ಎಸ್​ಆರ್​ ಲೇಔಟ್​ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳಿದ್ದಾರೆ.

ಅಂಬುಜಾರವರು ಅವರು ತಮ್ಮ ಪತಿ ದ್ವಾರಕೀಶ್​ ಹಾಗೂ ಐವರು ಪುತ್ರರನ್ನ ಅಗಲಿದ್ದಾರೆ. ಇನ್ನು ಇವರ ಅಂತ್ಯಕ್ರಿಯೆ ಇಂದು ಸಂಜೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.Next Story

RELATED STORIES