Top

ರೈಡರ್ ಆಗಿ ಫೀಲ್ಡ್​ನಲ್ಲಿ ಧೂಳೆಬ್ಬಿಸಿದ ಯುವರಾಜ

  • ಕನ್ನಡ & ತೆಲುಗಿನಲ್ಲಿ ಏಕಕಾಲಕ್ಕೆ ನಿಖಿಲ್​ ಕುಮಾರ್ ಸವಾರಿ.
  • ಬ್ಯಾಸ್ಕೆಟ್​ ಬಾಲ್​ ಪ್ಲೇಯರ್​​ ಅವತಾರದಲ್ಲಿ ನಿಖಿಲ್.
  • ಸಖತ್​ ಸೌಂಡ್​ ಮಾಡ್ತಿದೆ 'ರೈಡರ್​' ಮೋಷನ್​ ಪೋಸ್ಟರ್.

ರೈಡರ್ ಆಗಿ ಫೀಲ್ಡ್​ನಲ್ಲಿ ಧೂಳೆಬ್ಬಿಸಿದ ಯುವರಾಜ
X

ಸೀತಾರಾಮ ಕಲ್ಯಾಣ ಸಿನಿಮಾ ಸಕ್ಸಸ್​ ನಂತರ ಲಾಕ್​ಡೌನ್​ ನಡುವೆಯೂ ನಿಖಿಲ್​-ರೇವತಿ ಕಲ್ಯಾಣ ನೆರವೇರಿತ್ತು. ಜಾಗ್ವಾರ್​, ಸೀತಾರಾಮ ಕಲ್ಯಾಣ, ಕುರುಕ್ಷೇತ್ರ ಸಿನಿಮಾಗಳ ನಂತ್ರ ನಿಖಿಲ್​ ಯಾವ ಸಿನಿಮಾದಲ್ಲಿ ನಟಿಸ್ತಾರೆ ಅನ್ನೋದಕ್ಕೆ ಕೆಲ ದಿನಗಳ ಹಿಂದೆಯೇ ಉತ್ತರ ಸಿಕ್ಕಿತ್ತು. ಮುಹೂರ್ತ ನೆರವೇರಿದ್ರು, ಸಿನಿಮಾ ಟೈಟಲ್​ ಏನು ಅನ್ನೋದು ಮಾತ್ರ ಸೀಕ್ರೆಟ್​​ ಆಗಿತ್ತು.

ಸ್ಯಾಂಡಲ್​ವುಡ್​ ಯುವರಾಜ ನಿಖಿಲ್​ ಕುಮಾರ್​, ಮೂರು ಸಿನಿಮಾಗಳ ನಂತರ ರಾಜಕೀಯರಂಗದಲ್ಲಿ ಕೊಂಚ ಬ್ಯುಸಿಯಾಗಿದರು. ಇದೀಗ ನಿಖಿಲ್​ ಅಭಿನಯದ 4ನೇ ಸಿನಿಮಾ ಬಗ್ಗೆ ಬಿಗ್​ ಅಪ್​ಡೇಟ್​ ಸಿಕ್ಕಿದೆ. ಕೆಲ ದಿನಗಳ ಹಿಂದೆಯೇ ಮುಹೂರ್ತ ನೆರವೇರಿಸಿದ್ದ ಚಿತ್ರತಂಡ ಈಗ ಟೈಟಲ್​ ಜೊತೆಗೆ ಫಸ್ಟ್​​ ಲುಕ್​ ಮೋಷನ್​ ಪೋಸ್ಟರ್ ರಿಲೀಸ್​ ಮಾಡಿದ್ದಾರೆ. ಚಿತ್ರದಲ್ಲಿ ನಿಖಿಲ್​ ಬ್ಯಾಸ್ಕೆಟ್​ ಬಾಲ್​ ಪ್ಲೇಯರ್​ ಆಗಿ ನಟಿಸ್ತಿರೋದು ಗೊತ್ತಾಗ್ತಿದ್ದು, ಪೋಸ್ಟರ್​ಗೆ ಸಖತ್​ ರೆಸ್ಪಾನ್ಸ್​ ಸಿಕ್ತಿದೆ.

ನಿಖಿಲ್​ ಕುಮಾರ್​ ಅಭಿನಯದ ನಾಲ್ಕನೇ ಸಿನಿಮಾ ಟೈಟಲ್ ರೈಡರ್​. ಜಾಗ್ವಾರ್​ ಆಗಿ ಚಿತ್ರರಂಗಕ್ಕೆ ಜಿಗಿದು, ರಾಮನಾಗಿ ಸೀತೆಯ ಕೈ ಹಿಡಿದು, ಅಭಿಮನ್ಯುವಾಗಿ ಚಕ್ರವ್ಯೂಹ ಭೇದಿಸಿದ ಯುವರಾಜ ಈ ಬಾರಿ ಎದುರಾಳಿಗಳ ಮೇಲೆ ಸವಾರಿ ಮಾಡೋಕ್ಕೆ ಬರ್ತಿದ್ದಾರೆ. ಲಹರಿ ಸಂಸ್ಥೆ ಬ್ಯಾನರ್​​ನಲ್ಲಿ ಚಂದ್ರು ಮನೋಹರನ್​​ ರೈಡರ್​ ಸಿನಿಮಾವನ್ನ ನಿರ್ಮಾಣ ಮಾಡ್ತಿದ್ದು, ತೆಲುಗು ನಿರ್ದೇಶಕ ವಿಜಯ್​ ಕುಮಾರ್​ ಕೊಂಡ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ.


ಇನ್ನು ರೈಡರ್​ ಸಿನಿಮಾವನ್ನ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣ ಮಾಡಲಾಗುತ್ತಿದೆ. ಈ ಹಿಂದೆ ನಿಖಿಲ್​ ಅಭಿನಯದ ಜಾಗ್ವಾರ್​ ಮತ್ತು ಕುರುಕ್ಷೇತ್ರ ಸಿನಿಮಾಗಳು ತೆಲುಗು ಪ್ರೇಕ್ಷಕರ ಮುಂದೆ ಹೋಗಿತ್ತು. ಇದೀಗ 4ನೇ ಸಿನಿಮಾ ರೈಡರ್ ಕೂಡ ಅದೇ ಹಾದಿಯಲ್ಲಿದೆ. ಪುಣೆ ಮೂಲದ ನಟಿ ಕಾಶ್ಮೀರಿ ರೈಡರ್​ ನಿಖಿಲ್​ ಕುಮಾರ್​ಗೆ ನಾಯಕಿಯಾಗಿದ್ದಾರೆ. ಅರ್ಜುನ್​ ಜನ್ಯಾ ಸಂಗೀತ, ಶ್ರೀಶ ಕುದವಳ್ಳಿ ಛಾಯಾಗ್ರಹಣ ಚಿತ್ರಕ್ಕಿದೆ.

ಕೊರೊನಾ ಹಾವಳಿ ಇಲ್ಲದೇ ಇದ್ದಿದ್ರೇ ಈಗಾಗಲೇ ರೈಡರ್​ ಚಿತ್ರದ ಬಹುತೇಕ ಶೂಟಿಂಗ್​ ಕಂಪ್ಲೀಟ್​ ಆಗ್ತಿತ್ತು. ಇದೀಗ ನಿಧಾನವಾಗಿ ಸಿನಿಮಾಗಳ ಶೂಟಿಂಗ್​ ಶುರುವಾಗುತ್ತಿದೆ. ಕೊನೆಗೂ ಭರ್ಜರಿ ಮೋಷನ್ ಪೋಸ್ಟರ್​ ರಿಲೀಸ್​ ಮಾಡಿ ಶೂಟಿಂಗ್​ ಸೆಟ್​ಗೆ ಹೋಗಲು ರೈಡರ್​ ಟೀಮ್​ ಸಿದ್ಧವಾಗಿದೆ. ಮೋಷನ್​ ಪೋಸ್ಟರ್ ಸೋಷಿಯಲ್​ ಮೀಡಿಯಾದಲ್ಲಿ ಸಖತ್ ಸೌಂಡ್​ ಮಾಡ್ತಿದೆ.

ಬೆಂಗಳೂರು, ಹೈದರಾಬಾದ್​ ಸೇರಿದಂತೆ ಹಲವು ಲೊಕೇಶನ್​ಗಳಲ್ಲಿ ರೈಡರ್​ ಸಿನಿಮಾ ಶೂಟಿಂಗ್​​ಗೆ ಪ್ಲಾನ್​ ಮಾಡಲಾಗಿದೆ. ಮೋಹನ್​ ಬಿ. ಕೆರೆ ಕಲಾ ನಿರ್ದೇಶನ, ಕೆ.ಎಂ ಪ್ರಕಾಶ್​ ಸಂಕಲನ ರೈಡರ್ ಚಿತ್ರಕ್ಕಿದೆ. ಒಂದು ಭರ್ಜರಿ ಆ್ಯಕ್ಷನ್​ ಝಲಕ್​ ಬ್ಯಾಕ್​ಡ್ರಾಪ್​ನಲ್ಲಿ ಮೋಷನ್​ ಪೋಸ್ಟರ್​ ಡಿಸೈನ್​ ಮಾಡಲಾಗಿದೆ. ನಿಖಿಲ್​ ಸ್ಪೋರ್ಟ್ಸ್​​ಮನ್​ ಲುಕ್​ನಲ್ಲಿ ದರ್ಶನ ಕೊಟ್ಟಿದ್ದು, ಆ್ಯಕ್ಷನ್​ ಹೀರೋ ಆಗಿಯೂ ಧೂಳೆಬ್ಬಿಸಿದ್ದಾರೆ. ಹಾಗಾಗಿ ರೈಡರ್​ ಪಕ್ಕಾ ಮಾಸ್​ ಆ್ಯಕ್ಷನ್​ ಎಂಟ್ರಟ್ರೈನರ್​ ಸಿನಿಮಾ ಆಗುತ್ತೆ ಅನ್ನೋದು ಗೊತ್ತಾಗ್ತಿದೆ.

Next Story

RELATED STORIES