Top

All OK ರ‍್ಯಾಪ್​ ಸಾಂಗ್​ನಲ್ಲಿ 9 ಕಾಮಿಡಿ ಸ್ಟಾರ್ಸ್​​ ಸ್ಟೆಪ್ಸ್

ನೊಂದವರನ್ನ ಮತ್ತಷ್ಟು ನೋಯಿಸೋ ಬದಲು, ಖುಷಿ ಹಂಚಬೇಕು. ಇಂತದ್ದೊಂದು ಕಾನ್ಸೆಪ್ಟ್ ಇಟ್ಕೊಂಡು ಅದ್ಬುತವಾದ ಸಾಂಗೊಂದನ್ನ ರೆಡಿ ಮಾಡಿದ್ದಾರೆ

All OK ರ‍್ಯಾಪ್​ ಸಾಂಗ್​ನಲ್ಲಿ 9 ಕಾಮಿಡಿ ಸ್ಟಾರ್ಸ್​​ ಸ್ಟೆಪ್ಸ್
X

ಕೊರೊನಾ ಮತ್ತು ಲಾಕ್​ಡೌನ್​ನಿಂದ ಇಡೀ ಜನಸಮೂಹವೇ ಬೇಸತ್ತು ಹೋಗಿದೆ. ಎಷ್ಟೋ ಜನ ಕೆಲಸ ಕಳೆದುಕೊಂಡಿದ್ದಾರೆ. ಜನಜೀವನವೇ ಅಸ್ತವ್ಯಸ್ಥವಾಗಿದೆ. ಹಾಗಂತ ಇಲ್ಲಿಗೆ ಜೀವನ ಮುಗಿದುಹೋಯ್ತು ಅಂತ ತಲೆ ಮೇಲೆ ಕಯ ಹೊತ್ತು ಕೋರೋಕ್ಕಾಗುತ್ತಾ. ಜೀವನದಲ್ಲಿ ಯಾವಾಗ್ಲು ಖುಷಿ ಆಗರಬೇಕು. ಬೇರೆಅವ್ರಿಗೂ ಖುಷಿ ಹಂಚಬೇಕು.

ಕೊರೊನಾ ಮತ್ತು ಲಾಕ್​ಡೌನ್​ನಿಂದ ಇಡೀ ಜನ ಜೀವನ ಅಸ್ತವ್ಯಸ್ತವಾಗಿದೆ. ಕೆಲಸ ಕಳೆದುಕೊಂಡಿದ್ದಾರೆ. ಹೀಗೆ ಸಾಕಷ್ಟು ಮಂದಿ ಸಾಕಷ್ಟು ತೊಂದರೆಗಳಲ್ಲಿ ಸಿಕ್ಕಿಹಾಕೊಂಡಿರೋದು ಇದೆ. ಆದರೆ, ಜೀವನದಲ್ಲಿ ಇದೆಲ್ಲಾ ಸಹಜ. ಹಾಗಂತ ಇಷ್ಟಕ್ಕೆ ಜೀಬನ ಮುಗಿತು ಅಂತ ಅಂದುಕೊಂಡ್ರೆ ತಪ್ಪಾಗುತ್ತೆ. ಜೀವನದಲ್ಲಿ ಯಾವಾಗ್ಲೂ ಖುಷಿ ಆಗಿ ಇರ್ಬೇಕು. ನೊಂದವರನ್ನ ಮತ್ತಷ್ಟು ನೋಯಿಸೋ ಬದಲು, ಖುಷಿ ಹಂಚಬೇಕು. ಇಂತದ್ದೊಂದು ಕಾನ್ಸೆಪ್ಟ್ ಇಟ್ಕೊಂಡು ಅದ್ಬುತವಾದ ಸಾಂಗೊಂದನ್ನ ರೆಡಿ ಮಾಡಿದ್ದಾರೆ ರ್ಯಾಪರ್​ ಆಲ್​ ಓಕೆ.

ಜೀವನದಲ್ಲಿ ನಾವು ಜೀವನದಲ್ಲಿ ಬೇರೆಯವ್ರ ಮಾತಿಗೆ ಜಾಸ್ತಿ ತಲೆಕೆಡಿಸಿಕೊಳ್ಬಾರ್ದು. ನಮ್ಮ ಜೀವನ ನಮ್ಮದು. ನಮಗೆ ಹೇಗೆ ಬೇಕೋ ಹಾಗೇ ಬದುಕಬೇಕು. ಹೀಗೆ ಸಾಕಷ್ಟು ಮೋಟಿವೇಟ್​ ಮಾಡುವ, ಜೀವನದ ಬಗ್ಗೆ ಪ್ರೀತಿ ಮೂಡಿಸುವ ಸಾಲುಗಳು ಈ ಹಾಡಿನಲ್ಲಿದೆ.

ಹ್ಯಾಪಿಯಾಗಿದೆ ಹ್ಯಾಪಿಯಾಗಿದೆ ಅನ್ನೋ ಅಂತ ಶುರುವಾಗೋ ಈ ಹಾಡಿನಲ್ಲಿ ಸ್ಯಾಂಡಲ್​ವುಡ್​ 9 ಮಂದಿ ಹಿರಿಯ ಹಾಸ್ಯ ಕಲಾವಿದರು ಹೆಜ್ಜೆ ಹಾಕಿರೋದು ವಿಶೇಷ. ಉಮೇಶ್, ಶಿವರಾಂ, ಬಿರಾದಾರ್, ದ್ವಾರಕೀಶ್, ಡಿಂಗ್ರಿ ನಾಗರಾಜ್, ಬ್ಯಾಂಕ್​ ಜನಾರ್ಧನ್, ದೊಡ್ಡ ಣ್ಣ, ರೇಖಾದಾಸ್, ಸಿಹಿಕಹಿ ಚಂದ್ರು ದಂಪತಿ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಒಂದ್ಕಾಲದಲ್ಲಿ ಸಖತ್​ ಬ್ಯುಸಿಯಾಗಿದ್ದ ಈ ಲೆಜೆಂಡ್​​ ಕಾಮಿಡಿಯನ್ಸ್​ ನಲ್ಲಿ ಕೆಲವರು ಇದೀಗ ಅವಕಾಶವಂಚಿತರಾಗಿದ್ದಾರೆ. ಇಂಥಾ ಸಮಯದಲ್ಲಿ ಈ ಹಾಡಿನ ಮೂಲಕ ಮತ್ತೊಮ್ಮೆ ಎಲ್ಲರೂ ತೆರೆಮೇಲೆ ಕಾಣಿಸಿಕೊಂಡಿರೋದು ಖುಷಿಯ ವಿಚಾರ.

ಇನ್ನು ಹಾಡಿಗೆ ಲಿರಿಕ್ಸ್, ಮ್ಯೂಸಿಕ್, ಕಂಪೋಸಿಶನ್,ಡೈರೆಕ್ಷನ್, ಪ್ರೊಡ್ಯೂಸರ್,ಪರ್ಫಾಮೆನ್ಸ್ ಎಲ್ಲವೂ ಒನ್​ ಅಂಡ್ ಓನ್ಲಿ ಆಲ್​ ಓಕೆಯದ್ದೇ ಆಗಿದ್ದು,ಎಡಿಟಿಂಗ್ ಮತ್ತು ಸಿನಿಮಾಟೋಗ್ರಫಿ ಜವಾಬ್ದಾರಿಯನ್ನ ಹೊತ್ತಿರೋದು ಆಕಾಶ್ ಜೋಶಿ.

Next Story

RELATED STORIES