Top

ತೆಲುಗು ನಾಡಿನಲ್ಲಿ ರಾರಾಜಿಸಿದ ರಾಬರ್ಟ್

ಹೈದರಾಬಾದ್ನಲ್ಲಿ ಅದ್ಧೂರಿ ಪ್ರೀ ರಿಲೀಸ್ ಇವೆಂಟ್

ತೆಲುಗು ನಾಡಿನಲ್ಲಿ ರಾರಾಜಿಸಿದ ರಾಬರ್ಟ್
X

ಹೈದರಾಬಾದ್​: ಮಾರ್ಚ್​11ರಂದು ಡಿ ಹಬ್ಬಕ್ಕೆ ಡೇಟ್​ ಫಿಕ್ಸ್​ ಆಗಿದೆ. ಕನ್ನಡ ತೆಲುಗು 2 ಭಾಷೆಯಲ್ಲಿ ಸಿನಿಮಾ ರಿಲೀಸ್​ ಆಗುತ್ತಿದ್ದು, ಕನಾರ್ಟಕ ಮತ್ತು ಹೈದ್ರಾಬಾದ್​ನಲ್ಲಿ ಅದ್ದೂರಿ ಪ್ರಿ ರಿಲೀಸ್​ ಇವೆಂಟ್ ಮಾಡುತ್ತಿದೆ ಚಿತ್ರತಂಡ. ಈಗಾಗಲೇ ಟಾಲಿವುಡ್​​ನಲ್ಲಿ ಅದ್ದೂರಿ ಕಾರ್ಯಕ್ರಮ ನೆರವೇರಿದೆ.

ರಾಬರ್ಟ್ ಸದ್ಯ ಕರ್ನಾಟಕದ ಟಾಕ್ ಅಫ್ ದ ಟೌನ್ ಆಗಿ ಬಿಟ್ಟಿದೆ. ಎಲ್ಲಿ ನೋಡಿದ್ರೂ ರಾಬಟ್​ನದ್ದೇ ಮಾತು. ಕರುನಾಡಿನ ದಶದಿಕ್ಕುಗಳಲ್ಲೂ ರಾಬರ್ಟ್ ರಂಗು ಮೂಡಿಸಿದೆ. ಡಿ ಬಾಸ್ ಅಭಿಮಾನಿಗಳಂತೂ ರಾಬರ್ಟ್ ದರ್ಶನಕ್ಕಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ನಡುವೆ ರಾಬರ್ಟ್ ಸಿನಿಮಾದ ಪ್ರಮೋಶನ್ ಜೋರಾಗಿಯೇ ನಡೆಯುತ್ತಿದೆ. ರಾಬರ್ಟ್ ಕನ್ನಡದ ಜೊತೆಗೆ, ತೆಲುಗು ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಹೀಗಾಗಿ ಹೈದರಾಬಾದ್ನಲ್ಲಿ ರಾಬರ್ಟ್ ಪ್ರಿರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.

ತೆಲುಗುನಾಡಿನಲ್ಲಿ ಕೂಡ ರಾಬರ್ಟ್ ರಾರಾಜಿಸುತ್ತಿದೆ. ಹೈದರಾಬಾದ್​ನಲ್ಲಿ ಅದ್ದೂರಿಯಾಗಿ ರಾಬರ್ಟ್ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿದೆ. ಕನ್ನಡ ಸಿನಿಮಾವೊಂದು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೇರೆ ಭಾಷೆಯಲ್ಲಿ ಪ್ರಿ ರಿಲೀಸ್ ಕಾರ್ಯಕ್ರಮ ಮಾಡ್ತಾ ಇರೋದು ಇದೆ ಮೊದಲು ಅನ್ಸುತ್ತೆ. ರಾಬರ್ಟ್ ಸಿನಿಮಾ ಎಷ್ಟು ಕಲರ್ಫುಲ್ ಆಗಿದ್ಯೋ ಈ ಕಾರ್ಯಕ್ರಮ ಕೂಡ ಅಷ್ಟೇ ಕಲರ್ಫುಲ್ ಆಗಿತ್ತು.

ರಾಬರ್ಟ್ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಇಡೀ ರಾಬರ್ಟ್ ಚಿತ್ರತಂಡವೇ ಭಾಗಿಯಾಗಿತ್ತು. ನಾಯಕಿ ಆಶಾ ಭಟ್, ನಿರ್ದೇಶಕ ತರುಣ್ ಸುಧೀರ್, ನಟ ವಿನೋದ್ ಪ್ರಭಾಕರ್, ನಿರ್ಮಾಪಕ ಉಮಾಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದರು. ಅಷ್ಟೆಅಲ್ಲ ವಿಲನ್ ಪಾತ್ರದಲ್ಲಿ ಮಿಂಚಿರುವ ಜಗಪತಿ ಬಾಬು ಈ ಕಾರ್ಯಕ್ರಮದ ಮೈನ್ ಅಟ್ರ್ಯಾಕ್ಷನ್ ಆಗಿದರು. ಇನ್ನು ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ಮಾತು ಆರಂಭಿಸಿದ ದರ್ಶನ್ ನಂತರ ತೆಲುಗಿನಲ್ಲಿ ಮಾತನಾಡಿ ತೆಲುಗು ಪ್ರೇಕ್ಷಕರ ಮನಗೆದರು.

ಇನ್ನು ಈ ಕಾರ್ಯಕ್ರಮದಲ್ಲಿ ದರ್ಶನ್ ಹಲವು ವಿಚಾರಗಳನ್ನ ಹಂಚಿಕೊಂಡರು. ಅದರಲ್ಲೂ ವಿಲನ್ ಜಗಪತಿ ಬಾಬು ಬಗ್ಗೆ ವಿಶೇಷವಾಗಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್, ರಾಬರ್ಟ್ ಅಲ್ಲ ಹೀರೋ, ನಿಜವಾದ ಹೀರೋ ಜಗಪತಿ ಬಾಬು ನಿರ್ವಹಿಸಿರುವ ನಾನಾ ಪಾತ್ರ ಅಂತ ,ಮೆಚ್ಚುಗೆ ವ್ಯಕ್ತಪಡಿಸಿದರು.

Next Story

RELATED STORIES