Top

ಗುರು-ಶಿಷ್ಯರಿಗೆ ಸಾಥ್​ ನೀಡಿದ ದ್ವಾರಕೀಶ್

ಬಯಲಾಯ್ತು ಶರಣ್​ ವಿಶಲ್​ ಹಿಂದಿನ ರಹಸ್ಯ

ಗುರು-ಶಿಷ್ಯರಿಗೆ ಸಾಥ್​ ನೀಡಿದ ದ್ವಾರಕೀಶ್
X

ಸ್ಯಾಂಡಲ್​ವುಡ್​ನ ಸೂಪರ್ ಹಿಟ್​ ಸಿನಿಮಾ ಗುರು ಶಿಷ್ಯರು ಸಿನಿಮಾ ಮತ್ತೆ ಸದ್ದು ಮಾಡುತ್ತಿದೆ. ಆದರೆ, ಈ ಬಾರಿ ಗುರು ಮತ್ತು ಶಿಷ್ಯರು ಇಬ್ಬರೂ ಬದಲಾಗಿದ್ದಾರೆ.

ಕೊರೊನಾ ಲಾಕ್‌ಡೌನ್‌ ವೇಳೆ ಸ್ಯಾಂಡಲ್‌ವುಡ್‌ ನಟ ಶರಣ್‌, ಮನೆಯಲ್ಲಿ , ಶೂಟಿಂಗ್​ ಸೆಟ್​ನಲ್ಲಿ, ಕುಂತಲ್ಲಿ, ನಿಂತಲ್ಲಿ ವಿಷಲ್‌ ಹೊಡಿತಾ ಇದ್ದರು. ಅವರ ದೈನಂದಿನ ಮಾತುಕತೆ, ಪ್ರಶ್ನೆ, ಉತ್ತರ, ಪ್ರತಿಕ್ರಿಯೆ ಎಲ್ಲವೂ ವಿಷಲ್‌ಮಯವಾಗಿದ್ದವು. ಶರಣ್‌ ಯಾಕಪ್ಪಾ ಹೀಗೆ ಎಂದು ಸಿನಿಪ್ರಿಯರು ತಲೆ ಕೆಡಿಸಿಕೊಂಡಿದರು. ಈ ವಿಷಲ್ ಹಿಂದಿನ ಸೀಕ್ರೆಟ್ ಈಗ ಬಯಲಾಗಿದೆ. ಶರಣ್​ ವಿಷಲ್ ಹೊಡೆದಿದ್ದು ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಶರಣ್​​​ ವಿಷಲ್ ಹೊಡೆದಿದ್ದು ಗುರು-ಶಿಷ್ಯರಿಗಾಗಿ.

ಗುರು ಶಿಷ್ಯರು ಎಂದಾಕ್ಷಣ ಹಿರಿಯ ನಟ ದ್ವಾರಕೀಶ್‌ ಮತ್ತು ಡಾ.ವಿಷ್ಣುವರ್ಧನ್‌ ಅವರ ನಟನೆಯ 'ಗುರು ಶಿಷ್ಯರು' ಸಿನಿಮಾ ಕಣ್ಣ ಮುಂದೆ ಬರುತ್ತೆ. 1981ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ದ್ವಾರಕೀಶ್ ನಿರ್ಮಾಣ ಮಾಡಿದರು. ಎಚ್‌.ಆರ್‌. ಭಾರ್ಗವ ನಿರ್ದೇಶಿಸಿದ್ದರು. ಚಿತ್ರದಲ್ಲಿ ಮಂಜುಳ, ಜಯಮಾಲಿನಿ ಹೇಮಾ ಚೌಧರಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದ್ದ ಈ ಸಿನಿಮಾ ಈಗ ಮತ್ತೆ ಸದ್ದು ಮಾಡುತ್ತಿದೆ. ಗುರು ಶಿಷ್ಯರು ಸಿನಿಮಾ ಮತ್ತೆ ಬರ್ತಿದೆ. ಆದರೆ, ಈ ಬಾರಿ ದ್ವಾರಕೀಶ್ ಇರಲ್ಲ. ಬದಲಾಗಿ ಕಾಮಿಡಿ ಕಿಂಗ್ ಶರಣ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಲಡ್ಡು ಸಿನಿಮಾ ಹೌಸ್ ಹಾಗೂ ತರುಣ್ ಸುಧೀರ್ ಕ್ರಿಯೇಟಿವ್ಸ್ ಬ್ಯಾನರ್ ನಿರ್ಮಾಣ ಮಾಡುತ್ತಿರುವ ಶರಣ್ ಹೊಸ ಸಿನಿಮಾದ ಟೈಟಲ್​​​​​​​ ವಿಭಿನ್ನವಾಗಿ ರಿಲೀಸ್​ ಆಗಿದೆ. ಟೈಟಲ್ ರಿವೀಲ್​​​​​ ಮಾಡಲು ಹೊಸ ಕಾನ್ಸೆಪ್ಟ್​ ಅನ್ನು ಈ ಚಿತ್ರತಂಡ ಪ್ರಯೋಗ ಮಾಡಿದೆ. ಟೈಟಲ್ ಬಿಡುಗಡೆಗಾಗಿಯೇ ಇದೇ ಮೊದಲ ಬಾರಿಗೆ ನಿರ್ದೇಶಕರು, ನಿರ್ಮಾಪಕರು ಮತ್ತು ಹೀರೋ ಒಟ್ಟಾಗಿ ವಿಡಿಯೋ ಒಂದನ್ನು ಶೂಟ್ ಮಾಡಿದ್ದಾರೆ. ಈ ಟೈಟಲ್ ಟೀಸರ್​ನ್ನ ಹಿರಿಯ ನಟ ದ್ವಾರಕೀಶ್ ಬಿಡುಗಡೆ ಮಾಡಿದ್ದಾರೆ.

ಫಸ್ಟ್​ಲುಕ್​​​ ತುಂಬಾನೇ ಅಟ್ರ್ಯಾಕ್ಟಿವ್ ಆಗಿದೆ. ಒಂದೆಡೆ ಶರಣ್ ಮತ್ತೊಂದೆಡೆ ಮಕ್ಕಳು ಹಗ್ಗಜಗ್ಗಾಡುತ್ತಿರುವ ಚಿತ್ರವಿದೆ. ಶರಣ್ ಇಲ್ಲೂ ಕೂಡ ವಿಷಲ್ ಬಿಟ್ಟಿಲ್ಲ. ಇಂಟ್ರೆಸ್ಟಿಂಗ್ ಸಂಗತಿ ಅಂದ್ರೆ ಇದೊಂದು 1995ರ ಕಾಲಘಟ್ಟದ ಕಥೆ ಅನ್ನೋದನ್ನು ಟೈಟಲ್ ಟೀಸರ್​ನಲ್ಲೇ ಬಹಿರಂಗಪಡಿಸಿದೆ. ಈ ಚಿತ್ರದಲ್ಲಿ ಖೋ ಖೋ ಆಟ ಇದೆ ಅನ್ನೋ ಸಣ್ಣದೊಂದು ಹಿಂಟ್​ ಅನ್ನ ಚಿತ್ರತಂಡ ಬಿಟ್ಟುಕೊಟ್ಟಿದೆ. ಇನ್ನು ಸಿನಿಮಾದಲ್ಲಿ ತರುಣ್ ಮತ್ತು ಶರಣ್​ ಸಕ್ಸಸ್​ ಜೋಡಿ ಮತ್ತೆ ಕಂಬ್ಯಾಕ್ ಮಾಡಿದೆ. ಇಬ್ಬರು ಸೇರಿಕೊಂಡು ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ.

ಶರಣ್​ ಲೀಡ್​ ರೋಲ್​ನಲ್ಲಿ ನಟಿಸುತ್ತಿರೋ ಗುರು ಶಿಷ್ಯರಿಗೆ ಜಡೇಶ್​ ಕೆ ಹಂಪಿ ಆಕ್ಷನ್ ಕಟ್​ ಹೇಳಲಿದ್ದಾರೆ. ಇನ್ನು ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸದ್ಯ ಫಸ್ಟ್ ಲುಕ್ ಅನೌನ್ಸ್ ಮಾಡಿರುವ ಸಿನಿಮಾತಂಡ ಜನವರಿಯಿಂದ ಚಿತ್ರೀಕರಣ ಪ್ರಾರಂಭ ಮಾಡುವ ಸಾಧ್ಯತೆ ಇದೆ. ಒಟ್ನಲ್ಲಿ ಶರಣ್ ಹೊಸ ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಗುರು ಶಿಷ್ಯರ ಕಾಮಿಡಿ ಮೋಡಿ ಅದ್ಯಾವ ರೀತಿ ತೆರೆ ಮೇಲೆ ಬರುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

Next Story

RELATED STORIES