Top

TV5 ಕನ್ನಡ 'ಮುಂದುವರೆದ ಅಧ್ಯಾಯ' ಸಿನಿಮಾದ ವಿರ್ಮಶೆ

ಇದೊಂದು ಸಸ್ಪೆನ್ಸ್​ ಥ್ರಿಲ್ಲರ್, ಮರ್ಡ್​ರ್ ಮಿಸ್ಟ್ರಿಯಾಗಿದ್ದು ಸಿನಿಮಾ ನೋಡಿಸವರು ಚಿತ್ರಕ್ಕೆ ಪಾಸಿಟಿವ್​ ರೆಸ್ಪಾನ್ಸ್​ ಕೊಟ್ಟಿದ್ದಾರೆ.

TV5 ಕನ್ನಡ ಮುಂದುವರೆದ ಅಧ್ಯಾಯ ಸಿನಿಮಾದ ವಿರ್ಮಶೆ
X

ಸ್ಯಾಂಡಲ್​​ವುಡ್​ನಲ್ಲಿ ಬಹುದಿನಗಳಿಂದ ಸುದ್ದಿ ಮಾಡ್ತಿರುವ ಮುಂದುವರೆದ ಅಧ್ಯಾಯ ಚಿತ್ರ ಇಂದು ರಾಜ್ಯಾದ್ಯಂತ ತೆರೆಗೆ ಬಂದಿದೆ. ಟೀಸರ್, ಟ್ರೇಲರ್​ನಿಂದ ಕ್ಯೂರಿಯಾಸಿಟಿ ಬಿಲ್ಡ್​ ಮಾಡಿದ್ದ ಈ ಸಿನಿಮಾದಲ್ಲಿ ಡೆಡ್ಲಿ ಸ್ಟಾರ್ ಲಾಂಗ್​ ಬಿಟ್ಟು ಗನ್​ ಹಿಡಿದಿರೋದೇ ಇಂಟ್ರೆಸ್ಟಿಂಗ್.

ಮುಂದುವರೆದ ಅಧ್ಯಾಯ. ಮೂರು ವರ್ಷಗಳ ನಂತ್ರ ಡೆಡ್ಲಿ ಸ್ಟಾರ್​ ತೆರೆ ಮೇಲೆ ಕಾಣಿಸಿಕೊಳ್ತಿರೋ ಸಿನಿಮಾ. ಬ್ಯಾಕ್​ ಟು ಬ್ಯಾಕ್​​ ಅಂಡರ್​ವರ್ಲ್ಡ್​ ಸಿನಿಮಾಗಳಲ್ಲಿ ಲಾಂಗ್​ ಹಿಡಿದು ಅಬ್ಬರಿಸಿದ್ದ ನಟ ಆದಿತ್ಯ, ಇದೀಗ ಖಾಕಿ ತೊಟ್ಟು, ಸೂಪರ್ ಕಾಪ್​ ಪಾತ್ರದಲ್ಲಿ ಮಿಂಚಿದ್ದಾರೆ. ಇದೊಂದು ಸಸ್ಪೆನ್ಸ್​ ಥ್ರಿಲ್ಲರ್, ಮರ್ಡ್​ರ್ ಮಿಸ್ಟ್ರಿಯಾಗಿದ್ದು ಸಿನಿಮಾ ನೋಡಿಸವರು ಚಿತ್ರಕ್ಕೆ ಪಾಸಿಟಿವ್​ ರೆಸ್ಪಾನ್ಸ್​ ಕೊಟ್ಟಿದ್ದಾರೆ.

ಚಿತ್ರ: ಮುಂದುವರೆದ ಅಧ್ಯಾಯ

ನಿರ್ದೇಶನ: ಬಾಲು ಚಂದ್ರಶೇಖರ್

ನಿರ್ಮಾಣ: ಕಣಜ ಎಂಟರ್​ಪ್ರೈಸಸ್..

ಸಂಗೀತ: ಜಾನ್​, ನಿತಿನ್

ಛಾಯಾಗ್ರಹಣ: ದಿಲೀಪ್ ಚಕ್ರವರ್ತಿ

ತಾರಾಗಣ: ಆದಿತ್ಯ,ಜೈ ಜಗದೀಶ್, ಮುಖ್ಯಮಂತ್ರಿ ಚಂದ್ರು,ಇತರರು

ಮುಂದುವರೆದ ಅಧ್ಯಾಯ ಸ್ಟೋರಿಲೈನ್

ಮುಂದುವರೆದ ಅಧ್ಯಾಯ. ಇದೊಂದು ಆ್ಯಕ್ಷನ್​ ಥ್ರಿಲ್ಲರ್​ ಚಿತ್ರವಾಗಿದ್ದು, ಬಾಲು ಚಂದ್ರಶೇಖರ್ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಂದ್ಹಾಗೇ ಈ ಚಿತ್ರದ ಸ್ಟೋರಿಲೈನ್​ ಇಂಟ್ರೆಸ್ಟಿಂಗ್​ ಆಗಿದ್ದು, ಸಮಾಜದಲ್ಲಿ ರೌಡಿಸಂ, ಅಂಡರ್​ವರ್ಲ್ಡ್​ ಆಕ್ಟಿವಿಟಿಸ್ಗೆ ಕೊನೆ ಇಲ್ಲ.ಆದ್ರೆ ಜನ ಬದಲಾದರೆ ಸಮಾಜದ ಬದಲಾವಣೆ ಸಾಧ್ಯ ಅನ್ನೋದನ್ನ ಚಿತ್ರದ ಮೂಲಕ ಹೇಳೋಕ್ಕೆ ಹೊರ್ಟಿದ್ದಾರೆ.

ಶಿವರಾತ್ರಿ ಹಬ್ಬದ ದಿನ ಡಾಕ್ಟರ್ ಮತ್ತು ಜರ್ನಲಿಸ್ಟ್ ಇಬ್ಬರೂ ಹೆಣ್ಣು ಮಕ್ಕಳು ಕಣ್ಮರೆಯಾಗ್ತಾರೆ..ಅದು ಯಾಕೆ. ಹೇಗೆ ಅದರ ಹಿಂದಿನ ರಹಸ್ಯ ಏನು ಅನ್ನೋದನ್ನ ಇನ್ವೆಸ್ಟಿಗೇಶನ್​ ಆಫೀಸರ್ ಹೇಗೆ ಭೇದಿಸ್ತಾನೆ ಅನ್ನೋದೇ ಮುಂದುವರೆದ ಅಧ್ಯಾಯ ಸ್ಟೋರಿಲೈನ್. ಜೊತಗೆ ಡ್ರಗ್​ ಮಾಫಿಯಾದ ಎಳೆ ಕೂಡ ಚಿತ್ರದಲ್ಲಿದೆ.

ಮುಂದುವರೆದ ಅಧ್ಯಾಯ ಆರ್ಟಿಸ್ಟ್​ ಪರ್ಫಾಮೆನ್ಸ್​

ಚಿತ್ರದ ನಾಯಕನ ಪಾತ್ರದಲ್ಲಿ ನಟ ಆದಿತ್ಯ ಪಾತ್ರಕ್ಕೆ ತಕ್ಕಂತೆ ಸೆಟಲ್​ ಆಗಿ ಅಭಿನಯಿಸಿದ್ದಾರೆ. ಮಾತು ಕಡಿಮೆ ತಲೆಗೆ ಕೆಲಸ ಜಾಸ್ತಿ ಕೊಡುವಂತಹ ಕ್ಯಾರೆಕ್ಟರ್. ಇಂಟಲಿಜೆನ್ಸ್​ ಮೂಲಕವೇ ಕೇಸ್​ ಸಾಲ್ವ್ ಮಾಡುವ ಇನ್​​ವೆಸ್ಟಿಗೇಶನ್​ ಆಫೀಸರ್​. ಖಾಕಿ ತೊಟ್ಟು ಖಡಕ್​ ಆಗಿ ಕಾಣ್ತಾರೆ. ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಸಿನಿಮಾದಲ್ಲಿ ಹಿರಿಯ ಕಲಾವಿದರಾದ ಜೈ ಜಗದೀಶ್​ ಪೊಲೀಸ್ ಅಧಿಕಾರಿಯಾಗಿ ಮತ್ತು ಮುಖ್ಯಮಂತ್ರಿ ಚಂದ್ರು ಜನಪ್ರತಿನಿಧಿಯಾಗಿ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಉಳಿದಂತೆ ಡಾಕ್ಟರ್ ಪಾತ್ರದಲ್ಲಿ ಹೊಸ ಪ್ರತಿಭೆ ಚಂದನಾ, ಜರ್ನಲಿಸ್ಟ್ ಆಗಿ ಆಶಿಕಾ, ಹಾಗೂ ಸಂದೀಪ್, ಅಜಯ್​ ಮೊದಲ ಸಿನಿಮಾನೇ ಆದ್ರೂ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ.

ಮುಂದುವರೆದ ಅಧ್ಯಾಯ ಪ್ಲಸ್ ಪಾಯಿಂಟ್ಸ್

ನಿರ್ದೇಶನ ಮತ್ತು ನಿರೂಪಣೆ

​ಬ್ಯಾಗ್ರೌಂಡ್​​ ಮ್ಯೂಸಿಕ್

ಸಸ್ಪೆನ್ಸ್​ ಥ್ರಿಲ್​ ಚೆನ್ನಾಗಿದೆ

ದ್ವಿತೀಯಾರ್ಧ ವೇಗ

TV5 ರೇಟಿಂಗ್

3/5

ಫೈನಲ್​ ಸ್ಟೇಟ್​ಮೆಂಟ್​

ಮುಂದುವರೆದ ಅಧ್ಯಾಯ ಸಿನಿಮಾದಲ್ಲಿ ಆದಿತ್ಯ, ಹಿಂದಿನ ಸಿನಿಮಾಗಳಿಗಿಂತಲೂ ವಿಭೀನ್ನ ಪಾತ್ರದಲ್ಲಿ ಮಿಂಚಿದ್ದು, ಸಿನಿಮಾ ಇಂಟ್ರೆಸ್ಟಿಂಗ್​ ಆಗಿ ಸಾಗುತ್ತದೆ. ಸುಮಾರು 2 ಗಂಟೆ 15 ನಿಮಿಷದ ಈ ಚಿತ್ರ ಸಿನಿಪ್ರಿಯರನ್ನ ಮೊದಲಿನಿಂದ ಕೊನೆಯವರೆಗೂ ಹಿಡಿದಿಡುತ್ತದೆ.

Next Story

RELATED STORIES