Top

ಮೊದಲ ವಾರವೇ 1100 ಕೋಟಿ ಬಾಚಿದ 'ಟೆನೆಟ್​' ಸಿನಿಮಾ

  • ಕೊರೊನಾ ಆತಂಕದ ನಡುವೆ ಪ್ರೇಕ್ಷಕರನ್ನ ಎಳೆದು ತಂದ ಸ್ಪೈ ಥ್ರಿಲ್ಲರ್.
  • ಮೊದಲ ವಾರವೇ 1100 ಕೋಟಿ ಬಾಚಿದ 'ಟೆನೆಟ್​'

ಮೊದಲ ವಾರವೇ 1100 ಕೋಟಿ ಬಾಚಿದ ಟೆನೆಟ್​ ಸಿನಿಮಾ
X

ಕೊರೊನಾ ನಾಶವಾಗದ ಹೊರತು ಸಿನಿಮಾ ಪ್ರದರ್ಶನ ಶುರು ಮಾಡಿದ್ರೆ, ಮೊದಲಿನಂತೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರ್ತಾರಾ(?) ಇಲ್ವಾ ಅನ್ನೋ ಗೊಂದಲ ಕೆಲವರಲ್ಲಿದೆ. ಆದರೆ, ಈಗಾಗಲೇ ಹಾಲಿವುಡ್​ ಸಿನಿಮಾವೊಂದು ಪ್ರಪಂಚದ ವಿವಿಧ ದೇಶಗಳಲ್ಲಿ ರಿಲೀಸ್​ ಆಗಿ ಸಾವಿರಾರು ಕೋಟಿ ಬಾಚಿದೆ. ಇದು ಸಹಜವಾಗಿಯೇ ಥಿಯೇಟರ್​ ಬಾಗಿಲು ತೆರೆದರೆ ಕಂಡಿತ ಪ್ರೇಕ್ಷಕರು ಬಂದೇ ಬರ್ತಾರೆ ಅನ್ನೋ ಭರವಸೆ ಮೂಡಿಸಿದೆ.

ಕ್ರಿಸ್ಟೋಫರ್​ ನೋಲನ್​ ನಿರ್ದೇಶನದ ಹಾಲಿವುಡ್​ನ​ ಟೆನೆಟ್​ ಸಿನಿಮಾ ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿದೆ. ಫಸ್ಟ್​ ವೀಕೆಂಡ್​ನಲ್ಲಿ ನೂರಾರು ಕೋಟಿ ಬಾಚಿದ್ದು, ಈಗಾಗಲೇ ಕಲೆಕ್ಷನ್​ 1000 ಕೋಟಿ ಗಡಿ ದಾಟಿದೆ. ಇದು ಇಂಡಿಯನ್​ ಫಿಲ್ಮ್​ ಮೇಕರ್ಸ್​​ಗೂ ಸಂತಸ ತಂದಿದೆ.

ಕೊರೊನಾ ಆತಂಕ ಮತ್ತು ಲಾಕ್​ಡೌನ್​ ಹಿನ್ನಲೆಯಲ್ಲಿ ಥಿಯೇಟರ್ ಬಂದ್ ಆಗಿ ಸಿನಿಮಾ ಪ್ರದರ್ಶನ ನಿಂತಿದೆ. ಆದರೆ, ಕೆಲ ದೇಶಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆ. ಮುನ್ನೆಚ್ಚರಿಕೆ ಕ್ರಮಗಳನ್ನ ಪಾಲಿಸುತ್ತಲೇ ಸಿನಿಮಾ ನೋಡೋದಕ್ಕೆ ಮುಗಿ ಬಿದ್ದಿದ್ದಾರೆ. ಹಾಲಿವುಡ್​ನ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಟೆನೆಟ್​ ಸಿನಿಮಾ ಈಗಾಗಲೇ ಒಂದು ವಾರ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಆಗಸ್ಟ್​ 26ಕ್ಕೆ ಯೂಕೆ ಮತ್ತು ಸೆಪ್ಟೆಂಬರ್​ 3ಕ್ಕೆ ಯೂಎಸ್​ ಸೇರಿದಂತೆ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಇರುವ ಎಲ್ಲಾ ದೇಶಗಳಲ್ಲೂ ಸಿನಿಮಾ ತೆರೆಪ್ಪಳಿಸಿದೆ.

ಜಾನ್​ ಡೇವಿಡ್​ ವಾಷಿಂಗ್​ಟನ್, ರಾಬರ್ಟ್​ ಪೀಟರ್​ಸನ್​, ಎಲಿಜಬೆತ್​ ಡೆಬೆಕಿ, ಬಾಲಿವುಡ್​ ನಟಿ ಡಿಂಪಲ್​ ಕಪಾಡಿಯಾ ಸೇರಿದಂತೆ ದೊಡ್ಡ ತಾರಾಗಣ ಟೆನೆಟ್​ ಸಿನಿಮಾದಲ್ಲಿದೆ. ಲಾಕ್​ಡೌನ್​ನಿಂದ ಅಂತರಾಷ್ಟ್ರೀಯ ಮಲ್ಟಿಫ್ಲೆಕ್ಸ್​ಗಳಲ್ಲಿ ಒಂದಾದ ಐಮ್ಯಾಕ್ಸ್​ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಐಮ್ಯಾಕ್ಸ್​ ಫಾರ್ಮ್ಯಾಟ್​ನಲ್ಲಿ ರಿಲೀಸ್​ ಆಗಿರೋ ಟೆನೆಟ್​ ಸಿನಿಮಾ ಭರ್ಜರಿ ಕಲೆಕ್ಷನ್​ ಮಾಡುತ್ತಿದೆ. ಇದರಿಂದ ಐಮ್ಯಾಕ್ಸ್​​ಗೆ ಚೇತರಿಸಿಕೊಳ್ಳುವಂತಾಗಿದೆ.

ದೊಡ್ಡ ದೊಡ್ಡ ಸಿನಿಮಾಗಳು ಪ್ರೇಕ್ಷಕರನ್ನ ಎಂಥಹ ಸಮಯದಲ್ಲೂ ಚಿತ್ರಮಂದಿರಕ್ಕೆ ಎಳೆದುಕೊಂಡು ಬರುತ್ತೆ ಅನ್ನೋದು ಇದರಿಂದ ಸ್ಪಷ್ಟವಾಗುತ್ತಿದೆ. ಇತ್ತೀಚೆಗೆ ಹಾಲಿವುಡ್​ ಸೂಪರ್​ ಸ್ಟಾರ್ ಟಾಮ್​ ಕ್ರೂಸ್ ಕೂಡ ಮಾಸ್ಕ್​ ಧರಿಸಿ, ಪ್ರೇಕ್ಷಕರ ಜೊತೆ ಚಿತ್ರಮಂದಿರದಲ್ಲಿ ಟೆನೆಟ್​ ಸಿನಿಮಾ ವೀಕ್ಷಿಸಿದ್ದರು.

ಭಾರತದಲ್ಲಿ ಥಿಯೇಟರ್​ ಬಂದ್​ 6 ತಿಂಗಳಾಗಿದೆ. ಎಲ್ಲಾ ಚಟವಟಿಕೆಗಳಿಗೆ ಅವಕಾಶ ಸಿಕ್ಕಿದ್ರು, ಸಿನಿಮಾ ಪ್ರದರ್ಶನಕ್ಕೆ ಮಾತ್ರ ಅವಕಾಶ ಸಿಕ್ಕಿಲ್ಲ ಅಂತ ಫಿಲ್ಮ್​ ಮೇಕರ್ಸ್​ ಬೇಸರಗೊಂಡಿದ್ದಾರೆ. ಇನ್ನು ಥಿಯೇಟರ್​ ಬಾಗಿಲು ತೆರೆದ್ರು, ಪ್ರೇಕ್ಷಕರು ಮೊದಲಿನಂತೆ ಬರ್ತಾರಾ ಅನ್ನೋ ಅನುಮಾನವಿತ್ತು. ಆ ಅನುಮಾನವನ್ನ ಟೆನೆಟ್​ ರೀತಿಯ ಸಿನಿಮಾ ದೂರಾಗಿಸಿದೆ.

Next Story

RELATED STORIES