Top

ಹ್ಯಾಂಡ್​ ಸ್ಯಾನಿಟೈಸರ್​ ಬಳಕೆ ಮಾಡುವಾಗ ಮುನ್ನ ಎಚ್ಚರವಹಿಸಿ

ಡಿಮ್ಯಾಂಡ್ ಇದೆ ಜೊತೆಗೆ ಇದರ ಡಿಮ್ಯಾಂಡ್​ ಜಾಸ್ತಿಯಾಗುತ್ತಿದಂತೆ ನಕಲಿ ಸ್ಯಾನಿಟೈಸರ್​ಗಳ ಹಾವಳಿ ಕೂಡ ಹೆಚ್ಚಾಗಿದೆ.

ಹ್ಯಾಂಡ್​ ಸ್ಯಾನಿಟೈಸರ್​ ಬಳಕೆ ಮಾಡುವಾಗ ಮುನ್ನ ಎಚ್ಚರವಹಿಸಿ
X

ಕೋವಿಡ್​ 19 ವೈರಸ್​ ವಿಶ್ವವನ್ನೇ ಬೆಚ್ಚಿ ಬೀಳುವಂತೆ ಮಾಡುತ್ತಿದ್ದು, ಈ ಸೋಂಕು ಹರಡಲು ಆರಂಭವಾಗುತ್ತಿದ್ದಂತೆಯೇ ಎಲ್ಲೆಡೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಗಳಿಗೆ ಸಿಕ್ಕಾಬಟ್ಟೆ ಡಿಮ್ಯಾಂಡ್ ಇದೆ ಜೊತೆಗೆ ಇದರ ಡಿಮ್ಯಾಂಡ್​ ಜಾಸ್ತಿಯಾಗುತ್ತಿದಂತೆ ನಕಲಿ ಸ್ಯಾನಿಟೈಸರ್​ಗಳ ಹಾವಳಿ ಕೂಡ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಜನರು ಬಹಳ ಎಚ್ಚರವಹಿಸಬೇಕಿದ್ದು, ಸ್ವಚ್ಛತೆ ದೃಷ್ಠಿಯಿಂದ ಎಲ್ಲಾರು ಜಾಗೃತಿಯಿಂದ ಇರುವುದು ಬಹಳ ಮುಖ್ಯವಾಗಿದೆ.

ಸದ್ಯ ನಾವು ಬಳಕೆ ಮಾಡುವ ಸ್ಯಾನಿಟೈಸರ್ ಹೇಗಿರಬೇಕು(?) ಬಳಸುವುದು ಹೇಗೆ(?) ಇದರ ಬಗ್ಗೆ ಸಂಪೂರ್ಣ ವಿವರ ನೀಡಲಾಗಿದೆ.

  1. ಸಾಮಾನ್ಯವಾಗಿ ಹ್ಯಾಂಡ್​ ಸ್ಯಾನಿಟೈಸರ್​ಗಳಲ್ಲಿ ಶೇ.60ರಿಂದ ಶೇ.70ರಷ್ಟು ಆಲ್ಕೋಹಾಲ್​ ಅಂಶವಿರುತ್ತದೆ. ಇದು ಬ್ಯಾಕ್ಟೀರಿಯಾ ಅಥವಾ ವೈರಸ್​ಗಳನ್ನು ನಾಶ ಮಾಡುವ ಶಕ್ತಿಯನ್ನು ಹೊಂದಿರುತ್ತದೆ. ಕೈ ತೊಳೆಯಲು ಸೋಪು ಅಥವಾ ನೀರು ಇಲ್ಲದಿದ್ದಾಗ ಇದನ್ನು ಬಳಕೆ ಮಾಡಬಹುದು.
  2. ಹ್ಯಾಂಡ್​ ಸ್ಯಾನಿಟೈಸರ್​ಗಳನ್ನು ಹಾಕಿಕೊಂಡ ಬಳಿಕ ಕನಿಷ್ಟ 15-20 ಸೆಕೆಂಡ್ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಬೇಕು. ಹೀಗಾಗಿ ಮಾಡುವುದರಿಂದ ವೈರಸ್​ಗಳು ಕೈನಲ್ಲಿ ಉಳಿಯಲು ಸಾಧ್ಯವಿಲ್ಲ. ಸ್ಯಾನಿಟೈಸರ್ ಹಚ್ಚಿ ಸರಿಯಾಗಿ ಕೈಗಳನ್ನು ಉಜ್ಜದೆ, ಕೈ ತೊಳೆಯದೇ ಆಹಾರ ಸೇವನೆ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ.
  3. ಮಕ್ಕಳಿಗೆ ಸಾಧ್ಯವಾದಷ್ಟು ಸ್ಯಾನಿಟೈಸರ್ ಕಡಿಮೆ ಬಳಕೆ ಮಾಡಬೇಕು. ಮಕ್ಕಳು ಆಗಾಗ ತಮ್ಮ ಬೆರಳು ಹಾಗೂ ಕೈಗಳನ್ನು ಬಾಯಿಗೆ ಹಾಕಿಕೊಳ್ಳುವುದು, ಕೈಯಲ್ಲಿಯೇ ಏನಾದರೂ ತಿನ್ನುವ ಸಾಧ್ಯತೆಗಳಿರುತ್ತವೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.
  4. ಮಕ್ಕಳು ಅಥವಾ ದೊಡ್ಡವರ ಹೊಟ್ಟೆಗೆ ಹೆಚ್ಚಿನ ಪ್ರಮಾಣದ ಸ್ಯಾನಿಟೈಸರ್ ಹೋದ್ರೆ, ವಾಂತಿ, ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಆಲ್ಕೋಹಾಲ್ ವಿಷಕಾರಕವಾಗಿದ್ದು, ಮಕ್ಕಳು ಇದರಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪುವ ಸಾಧ್ಯತೆಗಳಿರುತ್ತವೆ. ಮಕ್ಕಳೇನಾದರೂ ಸ್ಯಾನಿಟೈಸರ್​ಗಳನ್ನು ಕುಡಿದು ಬಿಟ್ಟಿದ್ದರೆ, ಕೂಡಲೇ ವೈದ್ಯರ ಬಳಿಗೆ ಮಗು ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿ, ಚಿಕಿತ್ಸೆ ಕೊಡಿಸಿ.
  5. ವರ್ಷಕ್ಕಿಂತಲೂ ಕಡಿಮೆ ಇರುವ ಮಕ್ಕಳಿಗೆ ಸ್ಯಾನಿಟೈಸರ್ ಬಳಕೆ ಮಾಡದಿರುವುದು ಉತ್ತಮ. ಸಾಧ್ಯವಾದಷ್ಟು ಸ್ಯಾನಿಟೈಸರ್ ಗಳನ್ನು ಮಕ್ಕಳಿಂದ ದೂರ ಇಡುವುದು ಒಳಿತು.
  6. ಸ್ಯಾನಿಟೈಸರ್ ಹಾಕಿಕೊಂಡ ಬಳಿಕ ಕೈಗಳು ಒಣಗುವವರೆಗೂ ಉಜ್ಜಿಕೊಳ್ಳಿ. ಕೈಗಳು ಬೇಗ ಒಣಗಲಿ ಎಂದು ಗಾಳಿಗೆ ಬಿಡಬೇಡಿ. ಈ ವೇಳೆ ಗಾಳಿಯಲ್ಲಿರುವ ಸೂಕ್ಷ್ಮಜೀವಿಗಳು ಮತ್ತೆ ಕೈಗಳಿಗೆ ಅಂಟಿಕೊಳ್ಳುವ ಸಾಧ್ಯತೆಗಳಿರುತ್ತವೆ.
Next Story

RELATED STORIES