Top

COVID 19 India Updates: ದೇಶದಾದ್ಯಂತ ಈವರೆಗೆ ಕೋವಿಡ್ 19​ ಸೋಂಕಿತರ ಸಂಖ್ಯೆ 83 ಲಕ್ಷ ಗಡಿದಾಟಿದೆ

ದೇಶದಾದ್ಯಂತ ಬುಧವಾರದ ವೇಳೆಗೆ ಕೋವಿಡ್‌ ಸೋಂಕಿತರ ಸಂಖ್ಯೆ 83 ಲಕ್ಷ ದಾಟಿದೆ.

COVID 19 India Updates: ದೇಶದಾದ್ಯಂತ ಈವರೆಗೆ ಕೋವಿಡ್ 19​ ಸೋಂಕಿತರ ಸಂಖ್ಯೆ 83 ಲಕ್ಷ ಗಡಿದಾಟಿದೆ
X

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 46,254 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, 514 ಮಂದಿ ಮೃತಪಟ್ಟಿದ್ದಾರೆ ಇದರೊಂದಿಗೆ ಸೋಂಕಿತರ ಸಂಖ್ಯೆ 83,13,877ಕ್ಕೆ ಏರಿಕೆ ಆಗಿದೆ. ಆ ಪೈಕಿ 1,23,611 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಚೇತರಿಕೆ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈವರೆಗೆ 76,56,478 ಮಂದಿ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 5,33,787 ಸಕ್ರಿಯ ಪ್ರಕರಣಗಳಿವೆ.

ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ 16.87 ಲಕ್ಷ ಮಂದಿಗೆ ಸೋಂಕು ತಗುಲಿದ್ದು, ಆ ಪೈಕಿ 44,128 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಕರ್ನಾಟಕದಲ್ಲಿ ಮಂಗಳವಾರ 2,756 ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 8,32,396ಕ್ಕೆ ಏರಿಕೆ ಆಗಿದೆ.

Next Story

RELATED STORIES