Top

COVID 19 India Updates: ದೇಶದಾದ್ಯಂತ ನಿನ್ನೆ ಒಂದೇ ದಿನ 45,903 ಹೊಸ ಕೋವಿಡ್‌ ಪ್ರಕರಣಗಳು ಪತ್ತೆ

ಕೋವಿಡ್​ ಸೋಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿರುವ ಕರ್ನಾಟಕದಲ್ಲಿ ಒಟ್ಟು 8,46,887 ಮಂದಿಗೆ ಸೋಂಕು ಪತ್ತೆಯಾಗಿದೆ.

COVID 19 India Updates: ದೇಶದಾದ್ಯಂತ ನಿನ್ನೆ ಒಂದೇ ದಿನ 45,903 ಹೊಸ ಕೋವಿಡ್‌ ಪ್ರಕರಣಗಳು ಪತ್ತೆ
X

ನವದೆಹಲಿ: ದೇಶದಾದ್ಯಂತ ನಿನ್ನೆ ಒಂದೇ ದಿನ 45,903 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. 490 ಮಂದಿ ಸಾವನಪ್ಪಿದ್ದಾರೆ. 48,405 ಮಂದಿ ಗುಣಮುಖರಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಇಲ್ಲಿಯತನಕ 85,53,657 ಮಂದಿಗೆ ಸೋಂಕು ತಗುಲಿದ್ದು, 1,26,611 ಮಂದಿ ಸಾವಿಗೀಡಾಗಿದ್ದಾರೆ. ಇದುವರೆಗೆ 79,17,373 ಮಂದಿ ಗುಣಮುಖರಾಗಿದ್ದಾರೆ.

ಸದ್ಯ 5,09,673 ಸಕ್ರಿಯ ಪ್ರಕರಣಗಳು ಇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಅತಿ ಹೆಚ್ಚು ಕೋವಿಡ್ ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ 17,19,858 ಜನರಿಗೆ ಸೋಂಕು ತಗುಲಿದೆ. ಈವರೆಗೂ 45,240 ಮಂದಿ ಕೋವಿಡ್-19ನಿಂದ ಸಾವನ್ನಪ್ಪಿದ್ದಾರೆ. ಆಂಧ್ರ ಪ್ರದೇಶದಲ್ಲಿ ಇಲ್ಲಿಯ ವರೆಗೂ 8,42,967 ಮಂದಿಗೆ ಕೋವಿಡ್​ ಸೋಂಕು ತಗುಲಿದೆ. 21,403 ಸಕ್ರಿಯ ಪ್ರಕರಣಗಳೊಂದಿಗೆ 8,14,773 ಮಂದಿ ಚೇತರಿಕೆಯಾಗಿದ್ದಾರೆ.

ಕೋವಿಡ್​ ಸೋಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿರುವ ಕರ್ನಾಟಕದಲ್ಲಿ ಒಟ್ಟು 8,46,887 ಮಂದಿಗೆ ಸೋಂಕು ಪತ್ತೆಯಾಗಿದ್ದು, 11,391 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 33,697 ಸಕ್ರಿಯ ಪ್ರಕರಣಗಳಿದ್ದು, 8,01,799 ಮಂದಿ ಚೇತರಿಕೆಯಾಗಿದ್ದಾರೆ.

Next Story

RELATED STORIES