Top

ಆನ್​ಲೈನ್​ ಕ್ಲಾಸ್​ಗಾಗಿ​ ಬೆಟ್ಟವೇರುವ ವಿದ್ಯಾರ್ಥಿಗಳು

ಈ ವಿದ್ಯಾರ್ಥಿಗಳ ಗೋಳು ಕೇಳೋಱರು..?

ಆನ್​ಲೈನ್​ ಕ್ಲಾಸ್​ಗಾಗಿ​ ಬೆಟ್ಟವೇರುವ ವಿದ್ಯಾರ್ಥಿಗಳು
X

ಉಡುಪಿ: ಕೊರೊನಾದಿಂದ ಶಿಕ್ಷಣ ಕ್ಷೇತ್ರದ ಮೇಲೆ ಭಾರೀ ಹೊಡೆತ ಬಿದ್ದಿದ್ದು, ವಿದ್ಯಾರ್ಥಿಗಳ ಕಲಿಕಾ ವ್ಯವಸ್ಥೆ ತಲೆಕೆಳಗಾಗಿದೆ. ಕೊರೊನಾದಿಂದ ಶಾಲೆಗೆ ಬಾಗಿಲು ಮುಚ್ಚಿದ್ದು, ಆನ್​ಲೈನ್​ ತರಗತಿಯಲ್ಲೇ ಪಾಠ ನಡೆಯುತ್ತಿದೆ. ಆದರೆ ಕೆಲ ಪ್ರದೇಶಗಳಲ್ಲಿ ನೆಟ್​ವರ್ಕ ಸಮಸ್ಯೆಯಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಉಡುಪಿಯ ಜಿಲ್ಲೆಯ ಹೆಬ್ರಿ ತಾಲೂಕಿನ ಮಡಾಮಕ್ಕಿಯ ಹುಂಜ, ಕಾರೀಮನೆ, ಎಡ್ಮಲೆ ಗ್ರಾಮದ ವಿದ್ಯಾರ್ಥಿಗಳು ಆನ್​​ಲೈನ್​ ನೆಕ್​ವರ್ಕ ಇಲ್ಲದೇ ಪರದಾಡುತ್ತಿದ್ದಾರೆ. ಪ್ರತಿನಿತ್ಯ ವಿದ್ಯಾರ್ಥಿಗಳು ಎರಡು ಕಿಲೋ ಮೀಟರ್​ ಬೆಟ್ಟ ಹತ್ತಿ ಕ್ಲಾಸ್​ ಅಟೆಂಡ್​ ಆಗುತ್ತಿದ್ದಾರೆ.

ಪ್ರಾಥಮಿಕ ತರಗತಿಯಿಂದ ಡಿಪ್ಲೋಮೊವರೆಗಿನ ವಿವಿಧ ತರಗತಿಯ ಒಟ್ಟು 30 ವಿದ್ಯಾರ್ಥಿಗಳು ಬೆಟ್ಟದ ಮೇಲೆ ಟೆಂಟ್​ ರಚಿಸಿಕೊಂಡು ಪ್ರತಿ ನಿತ್ಯ ತರಗತಿಗೆ ಹಾಜರಾಗುತ್ತಿದ್ದಾರೆ. ಇನ್ನು ಪ್ರತಿನಿತ್ಯ ಭಾರೀ ಮಳೆಯಾಗುತ್ತಿದ್ದು, ವಿದ್ಯಾರ್ಥಿಗಳು ಗುಡುಗು ಸಿಡಿಲು ಹಾಗೂ ಭೂಕುಸಿತದ ಆತಂಕದ ನಡುವೇಯೇ ಪಾಠ ಕೇಳುತ್ತಿದ್ದಾರೆ. ಈ ಬಗ್ಗೆ ಪೋಷಕರು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.

Next Story

RELATED STORIES