Top

ಶಿರಾ ಉಪಚುನಾವಣೆ: 3 ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮತ ಚಲಾಯಿಸಿದರು

ಶಿರಾ ವಿಧಾನಸಭೆ ಚುನಾವಣೆ ಯಾವುದೇ ಸದ್ದುಗದ್ದಲವಿಲ್ಲದೆ ಶಾಂತವಾಗಿ ನಡೆಯಿತು. ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮತಚಲಾಯಿಸಿದರು.

ಶಿರಾ ಉಪಚುನಾವಣೆ: 3 ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮತ  ಚಲಾಯಿಸಿದರು
X

ತುಮಕೂರು: ಇಂದು ಶಿರಾ ವಿಧಾನಸಭೆಗೆ ಉಪಚುನಾವಣೆ ನಡೆಯಿತು. ಯಾವುದೇ ಗದ್ದಲ, ಗಲಾಟೆಗಳಿದ್ದ ಬಹಳ ಶಾಂತಯುತವಾಗಿ ಮುಕ್ತಾಯವಾಯ್ತು. ಮೂರು ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ಬೂತ್​ಗಳಲ್ಲಿ ಮತದಾನ ಮಾಡಿದರು.

ಸಾಕಷ್ಟು ಕುತೂಹಲ ಕೆರಳಿಸಿದ್ದ ಶಿರಾ ವಿಧಾನಸಭೆ ಉಪಚುನಾವಣೆಯು ಯಾವುದೇ ಸದ್ದುಗದ್ದಲವಿಲ್ಲದೆ ಮುಕ್ತಾಯವಾಯ್ತು. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ಮತಗಟ್ಟೆಗಳಲ್ಲಿ ಮತಚಲಾಯಿಸಿದರು. ಬೆಳಗ್ಗೆ 7 ಗಂಟೆಗೆ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ತಮ್ಮ ಊರು ಚಿರತಹಳ್ಳಿಯಲ್ಲಿ ಮತ ಚಲಾಯಿಸಿದರು. ಮತಚಲಾವಣೆಗೂ ಮುನ್ನ ಊರಿನ ಕರಿಯಮ್ಮ ಹಾಗೂ ಆಂಜನೇಯನಿಗೆ ವಿಶೇಷ ಪೂಜೆಯನ್ನ ಸಲ್ಲಿಸಿದರು.

ಮತದಾನಕ್ಕೂ ಮುನ್ನ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಗ್ರಾಮದ ಕರಿಯಮ್ಮ ಹಾಗೂ ಆಂಜನೇಯನಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಅರ್ಚಕರು ಮಂಗಳಾರತಿ ಮಾಡುವ ವೇಳೆ ಮೂರು ಭಾರಿ ಮಂಗಳಾರತಿ ಮಾಡಿದರು. ಎರಡು ಬಾರಿ ಜೋರಾಗಿ ಉರಿದ ದೀಪ ಮೂರನೇ ಬಾರಿ ಆರಿಹೋಯ್ತು. ಇದು ಎಲ್ಲೋ ಒಂದು ಕಡೆ ಅಶುಭವೆಂಬ ಮಾತುಗಳೂ ಕೇಳಿ ಬರ್ತಿವೆ.

ಇನ್ನು ಮಾಜಿ ಕಾನೂನು ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಪತ್ನಿ ಸಮೇತ ಆಗಮಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತಗಟ್ಟೆಯಲ್ಲಿಮತ ಚಲಾಯಿಸಿದರು. ಅದಕ್ಕೂ ಮುನ್ನ ಪೇಟೆ ಬೀದಿಯಲ್ಲಿರುವ ರಾಘವೇಂದ್ರ ಮಠಕ್ಕೆ ತೆರಳಿ ವಿಶೇಷ ಪ್ರಾರ್ಥನೆಯನ್ನೂ ಸಲ್ಲಿಸಿದರು ನಂತರ ನೇರವಾಗಿ ಬೂತ್​ಗೆ ಆಗಮಿಸಿದ ಮತ ಚಲಾಯಿಸಿದರು. ದೇವರು ಮತದಾರರ ಆಶೀರ್ವಾದ ನನ್ನ ಕಡೆಯಿದ್ದು ಸುಲಭವಾಗಿ ಜಯಗಳಿಸ್ತೇನೆ ಅಂತ ವಿಶ್ವಾಸವ್ಯಕ್ತಪಡಿಸಿದರು.

ಇನ್ನು ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ತಮ್ಮ ಮೊಮ್ಮಗಳ ಜೊತೆ ಆಗಮಿಸಿ ರಂಗನಾಥ ಕಾಲೇಜಿನ ಮತಗಟ್ಟೆಯಲ್ಲಿ ಮತಹಾಕುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು ಅದಕ್ಕೂ ಮುನ್ನ ಅವರು, ಪೇಟೆ ಬೀದಿಯಲ್ಲೇ ಇರುವ ಮಾರಮ್ಮನಿಗೆ ಪೂಜೆ ಸಲ್ಲಿಸಿದರು. ಮತದಾನದ ಬಳಿಕ ಮಾತನಾಡಿದ ಅಮ್ಮಾಜಮ್ಮಾ ಮತದಾರರು ನನ್ನ ಕೈಬಿಡುವುದಿಲ್ಲವೆಂದರು.

Next Story

RELATED STORIES