Top

ಮುಂದೆ ನಾವೇ ಅಧಿಕಾರಕ್ಕೆ ಬರ್ತೇವೆ ಆಗ ಏನು ಮಾಡಬೇಕೋ ಮಾಡುತ್ತೇವೆ - ಡಿಕೆಶಿ

ಹಣದಿಂದ ಗೆಲ್ಲಬೇಕು ಅಂತ ಹೊರಟಿದ್ದಾರೆ. ಅವರು ಎಲ್ಲೂ ಯಶಸ್ವಿ ಆಗಿಲ್ಲ,

ಮುಂದೆ ನಾವೇ ಅಧಿಕಾರಕ್ಕೆ ಬರ್ತೇವೆ ಆಗ ಏನು ಮಾಡಬೇಕೋ ಮಾಡುತ್ತೇವೆ - ಡಿಕೆಶಿ
X

ತುಮಕೂರು: ಕ್ಷೇತ್ರದಲ್ಲಿ ಹೇಗಿದೆ ಅನ್ನೋದನ್ನ ನೀವೇ ನೋಡುತ್ತಿದ್ದೀರ, ಸೋಲಿನ ಭಯ ಅವರಿಗೆ ಕಾಡುತ್ತಿದೆ. ಹೀಗಾಗಿ ಬೆಳಗ್ಗೆ ಏಳು ಗಂಟೆಗೇ ಹಣ ಹಂಚುತ್ತಿದ್ದಾರೆ ಅವರು ಹತಾಶರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬುಧವಾರ ಹೇಳಿದ್ದಾರೆ.

ತುಮಕೂರು ಜಿಲ್ಲೆಯ ಶಿರಾ ಉಪಚುನಾವಣೆ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಅವರು, ಹಣದಿಂದ ಗೆಲ್ಲಬೇಕು ಅಂತ ಹೊರಟಿದ್ದಾರೆ. ಅವರು ಎಲ್ಲೂ ಯಶಸ್ವಿ ಆಗಿಲ್ಲ, ಪೊಲೀಸರು, ಅಧಿಕಾರಿಗಳು ಅವರಿಗೆ ಸಾಥ್ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆರೋಪ ಮಾಡಿದ್ದಾರೆ.

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರಕ್ಕೆ ಬಿಜೆಪಿ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿಯವರ ಸಂಸ್ಕೃತಿ, ಆಚಾರವನ್ನ ತೋರಿಸುತ್ತಿದ್ದಾರೆ. ಅವರಿಗೆ ಎರಡೂ ಕ್ಷೇತ್ರದಲ್ಲಿ ಸೋಲಿನ ಭೀತಿ ಎದುರಾಗಿದೆ. ನಮ್ಮ ನಾಯಕರು ಪ್ರಚಾರ ಹೆಚ್ಚು ಮಾಡುತ್ತಿದ್ದಾರೆ ಅದಕ್ಕೆ ಇಂತಹ ತಡೆಗಳನ್ನು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಇಬ್ಬರು ಎಸಿಪಿಗಳ ವರ್ಗಾವಣೆಗೆ ದೂರು ನೀಡಿದ್ದೇವೆ. ಅವರನ್ನ ವರ್ಗಾವಣೆ ಅಲ್ಲ ಸಸ್ಪೆಂಡ್ ಮಾಡಬೇಕು. ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಸಸ್ಪೆಂಡ್ ಮಾಡುವವರೆಗೆ ನಾವು ಸುಮ್ಮನಿರಲ್ಲ, ಮುಂದೆ ನಾವೇ ಅಧಿಕಾರಕ್ಕೆ ಬರ್ತೇವೆ. ಆಗ ಏನು ಮಾಡಬೇಕೋ ಮಾಡುತ್ತೇವೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

Next Story

RELATED STORIES