Top

ಕಾರಜೋಳ, ಶ್ರೀರಾಮುಲು, ಅಶೋಕ್​ಗೆ ಕಿಮ್ಮತ್ ಇಲ್ವಾ - ಮಾಜಿ ಶಾಸಕ ಕೆ.ಎನ್​ ರಾಜಣ್ಣ

ಬಿಜೆಪಿಯ ತಳಸಮುದಾಯದ ನಾಯಕರನ್ನೇ ಸಿಎಂ ಅವಹೇಳನ ಮಾಡ್ತಾರೆ

ಕಾರಜೋಳ, ಶ್ರೀರಾಮುಲು, ಅಶೋಕ್​ಗೆ ಕಿಮ್ಮತ್ ಇಲ್ವಾ - ಮಾಜಿ ಶಾಸಕ ಕೆ.ಎನ್​ ರಾಜಣ್ಣ
X

ತುಮಕೂರು: ಯಡಿಯೂರಪ್ಪ ಮಗನನ್ನ ಹೊಗಳ್ತಾರೆ, ಮಗ ಬಂದಿದ್ದಕ್ಕೆ ಇಲ್ಲಿ ಬಿಜೆಪಿ ನೆಲೆ ಬಂದಿದೆ ಅಂತ ಹಾಗಾದ್ರೆ ಕಾರಜೋಳ, ಶ್ರೀರಾಮುಲು, ಅಶೋಕ್​ಗೆ ಕಿಮ್ಮತ್ ಇಲ್ವಾ(?) ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರು ಸಿಎಂ ಬಿಎಸ್​ವೈ ಪ್ರಶ್ನೆ ಮಾಡಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ತಳಸಮುದಾಯಗಳನ್ನ ಕಡೆಗಣಿಸೋದೇ ಯಡಿಯೂರಪ್ಪ ಕೆಲಸವೇ(?) ಸುರೇಶ್ ಗೌಡ ಇಲ್ಲೇ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಕಾರಜೋಳ ತಳಸಮುದಾಯದ ಮುಖಂಡ. ರವಿಕುಮಾರ್ ತಳಸಮುದಾಯ ಎಂಎಲ್​ಸಿ, ಇವರೆಲ್ಲಾ ಪಾಪ ಓಡಾಡುತ್ತಿದ್ದಾರೆ. ಆದರೆ, ಯಡಿಯೂರಪ್ಪ ಮಗನನ್ನ ಹೊಗಳ್ತಾರೆ ಎಂದಿದ್ದಾರೆ.

ಇನ್ನು ಮಗ ಬಂದಿದ್ದಕ್ಕೆ ಇಲ್ಲಿ ಬಿಜೆಪಿಗೆ ನೆಲೆ ಬಂತಂತೆ. ಅವರಿಗೆ ಏನಾದ್ರೂ ಮಾನಮರ್ಯಾದೆ ಇದ್ಯಾ(?) ಬಿಜೆಪಿಯ ತಳಸಮುದಾಯದ ನಾಯಕರಿಗೆ ಇದ್ಯಾ(?) ಇದ್ರೆ ಮೊದಲು ಎಲ್ಲರೂ ಇಲ್ಲಿಂದ ಹೊರಡಲಿ. ಬಿಜೆಪಿಯ ತಳಸಮುದಾಯದ ನಾಯಕರನ್ನೇ ಸಿಎಂ ಅವಹೇಳನ ಮಾಡ್ತಾರೆ ಎಂದು ಕೆ.ಎನ್​ ರಾಜನ್​ ಅವರು ಸಿಎಂ ಮಗ ವಿಜಯೇಂದ್ರನ ಪರ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.

Next Story

RELATED STORIES