Top

ಸಚಿವ ಸ್ಥಾನ ಬೇಕು ಎಂಬುದು ಅಪರಾಧ ಅಲ್ಲವಲ್ಲಾ - ಸಚಿವ ಕೆ. ಸುಧಾಕರ್

  • ರಾಜ್ಯದಲ್ಲಿ ಐದು ಲಕ್ಷ ಸೋಂಕಿತರಾಗಿದ್ದನ್ನ ನೋಡಿದ್ದೇವೆ. ಅದೇ ರೀತಿ ನಾಲ್ಕು ಲಕ್ಷ ಗುಣಮುಖರನ್ನೂ ನೋಡಿದ್ದೇವೆ.

ಸಚಿವ ಸ್ಥಾನ ಬೇಕು ಎಂಬುದು ಅಪರಾಧ ಅಲ್ಲವಲ್ಲಾ - ಸಚಿವ ಕೆ. ಸುಧಾಕರ್
X

ತುಮಕೂರು: ಯಾವ್ಯಾವ ಜಿಲ್ಲೆಯಲ್ಲಿ ಸಮಸ್ಯೆ ಇತ್ತೋ ಆಯಾ ಜಿಲ್ಲೆಗಳಿಗೆ ಪೂರೈಕೆ ಮಾಡಿದ್ದೇವೆ. ಗುಜರಾತ್ ಮತ್ತು ಹೈದರಾಬಾದ್ ಮೂಲದ ಖಾಸಗಿ ಸಂಸ್ಥೆಗಳಿಂದ ಖರೀದಿ ಮಾಡೋಕೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಶನಿವಾರ ಹೇಳಿದ್ದಾರೆ.

ತುಮಕೂರಿನ ಅಗಲಕೋಟೆಯಲ್ಲಿರುವ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಕೊರೊನಾ ಟೆಸ್ಟಿಂಗ್ ಲ್ಯಾಬ್ ಉದ್ಘಾಟನೆ ಸಂದರ್ಭದಲ್ಲಿ ರಾಜ್ಯದ ಕೋವಿಡ್ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಮಸ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಐದು ಲಕ್ಷ ಸೋಂಕಿತರಾಗಿದ್ದನ್ನ ನೋಡಿದ್ದೇವೆ. ಅದೇ ರೀತಿ ನಾಲ್ಕು ಲಕ್ಷ ಗುಣಮುಖರನ್ನೂ ನೋಡಿದ್ದೇವೆ. ಸದ್ಯ ಒಂದು ಲಕ್ಷ ಆಕ್ಟೀವ್ ಕೇಸ್ ಇವೆ ಎಂದು ಅವರು ತಿಳಿಸಿದರು.

ಇನ್ನು ಹಾಗೇ ನೋಡಿದ್ರೆ 20 ಪರ್ಸೆಂಟ್ ಕೂಡಾ ಇಲ್ಲ. ಕೊರೊನಾ ನಿರ್ವಹಣೆಯಲ್ಲಿ ದೇಶದ ಒಟ್ಟು ಸಾವಿನ ಪ್ರಮಾಣ 1.64 ಇದೆ. ರಾಜ್ಯದಲ್ಲಿ 1.56 ರಷ್ಟಿದೆ. ಹೀಗಿರುವಾಗ ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಅಂತ ವಿರೋಧ ಪಕ್ಷದ ನಾಯಕರು ಹೇಗೆ ಹೇಳುತ್ತಾರೆ ಎಂದು ಅವರು ವಿರೋಧ ಪಕ್ಷದರಿಗೆ ಪ್ರಶ್ನೆ ಮಾಡಿದರು.

ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ವಿಷಯ ಕುರಿತು ಮಾತನಾಡಿದ ಅವರು, ಸಚಿವ ಸ್ಥಾನ ಬೇಕು ಎಂಬುದು ಅಪರಾಧ ಅಲ್ಲವಲ್ಲಾ. ಸಿಎಂ ಇವತ್ತು ಬರೋರಿದ್ದಾರೆ. ಅವರಿಂದಲೇ ಸ್ಪಷ್ಟನೆ ಪಡಿಬೇಕು ಎಂದು ಸಚಿವ ಡಾ.ಕೆ ಸುಧಾಕರ್ ಅವರು ಪ್ರತಿಕ್ರಿಯೆ ನೀಡಿದರು.

Next Story

RELATED STORIES