Top

ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್​ ಪ್ರಚಾರದ ಬಗ್ಗೆ ಮಾಜಿ ಸಿಎಂ ಹೆಚ್ಡಿಕೆ ಪ್ರತಿಕ್ರಿಯೆ

ಸ್ಟಾರ್ ಕ್ಯಾಂಪೇನ್​ನಿಂದ ಯಾರು ಗೆದ್ದಿಲ್ಲ. ಮತ ಕೇಳ್ತಾರೆ ಹೋಗ್ತಾರೆ ಅಷ್ಟೇ. ಸ್ಟಾರ್​ಗಳು ಜನರ ಕಷ್ಟ-ಸುಖ ಕೇಳಲು ಬರಲ್ಲ

ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್​ ಪ್ರಚಾರದ ಬಗ್ಗೆ ಮಾಜಿ ಸಿಎಂ ಹೆಚ್ಡಿಕೆ ಪ್ರತಿಕ್ರಿಯೆ
X

ತುಮಕೂರು: ಸ್ಟಾರ್ ಕ್ಯಾಂಪೇನ್​ಗಳ ಪ್ರಚಾರದಿಂದ ಚುನಾವಣೆ ಗೆಲ್ಲಲು ಆಗಲ್ಲ, ಮಂಡ್ಯ ಚುನಾವಣೆ ಬೇರೆ, ಈ ಉಪ ಚುನಾವಣೆಯೇ ಬೇರೆ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಶುಕ್ರವಾರ ಹೇಳಿದ್ದಾರೆ.

ಆರ್.​ಆರ್ ​ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಅವರ ಪ್ರಚಾರ ಕೈಗೊಂಡಿರುವ ಕುರಿತು ಶಿರಾದ ಸೋರೆಕುಂಟೆಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಮಂಡ್ಯದಲ್ಲಿ ಲೋಕಸಭೆ ಅಭ್ಯರ್ಥಿ ಪರ ಕಾಂಗ್ರೆಸ್-ಬಿಜೆಪಿ, ರೈತ ಸಂಘ ಒಟ್ಟಾಗಿ ಕೆಲಸ ಮಾಡಿದರು. ಮಂಡ್ಯ ಪಕ್ಷೇತರ ಅಭ್ಯರ್ಥಿ ಪರ ಮಾಧ್ಯಮದವರು ಅನುಕಂಪ ತೋರಿದ ಹಿನ್ನೆಲೆಯಲ್ಲಿ ಗೆದ್ದರು. ಸ್ಟಾರ್ ಕ್ಯಾಂಪೇನ್​ನಿಂದ ಯಾರು ಗೆದ್ದಿಲ್ಲ. ಮತ ಕೇಳ್ತಾರೆ ಹೋಗ್ತಾರೆ ಅಷ್ಟೇ. ಸ್ಟಾರ್​ಗಳು ಜನರ ಕಷ್ಟ-ಸುಖ ಕೇಳಲು ಬರಲ್ಲ ಎಂದಿದ್ದಾರೆ.

ಶಿರಾದ ಮದಲೂರುಕೆರೆಗೆ ನೀರು ಕೊಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಐದು ವರ್ಷ ಇತ್ತು. ಆಗ ನೀರು ಕೊಡದವರು ಈಗ ಕೊಡ್ತಾರಾ(?) ಬೇರೆ ಬೇರೆ ಜಿಲ್ಲೆಗಳಿಂದ ಕೇಸರಿ ಟವೆಲ್ ಹಾಕಿಕೊಡವರನ್ನ ಕರೆತಂದಿದ್ದಾರೆ. ಸಮ್ಮಿಶ್ರ ಸರ್ಕಾರ ಬಿದ್ದು, ಹೊಸ ಸರ್ಕಾರ ಬಂದಿದೆ. ಅದು ಮುಗಿದ ಅಧ್ಯಾಯ ಮಾತನಾಡೋದು ಬೇಡ. ಜನತೆಯ ಪರಿಸ್ಥಿತಿ ಎಲ್ಲಿಗೆ ತಂದಿದ್ದಾರೆ. ಮೈತ್ರಿ ಸರ್ಕಾರ ಬೀಳಲು ಯಾರು ಕಾರಣ ಅಂತ ಚರ್ಚಿಸುವ ಸಮಯ ವಲ್ಲ ಎಂದು ಹೆಚ್ಡಿಕೆ ಹೇಳಿದರು.

ಶಿರಾದಲ್ಲಿ ಜೆಡಿಎಸ್ ಸೊಲುತ್ತೆ ಎಂಬ ಸಚಿವ ಆರ್​.ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅಶೋಕ್​ಗೂ ಶಿರಾಗೂ ಸಂಬಂದವೇನು(?) ಎಷ್ಟು ಹಳ್ಳಿವೆ, ಕಷ್ಟವೇನು, ಪರಿಸ್ಥಿತಿ ಏನು ಅಂತ ಅವರಿಗೆ ಗೊತ್ತಿದ್ಯಾ(?) ಬಂದ್ರು ಟಾಟಾ ಮಾಡಿ ಹೋಗಿದ್ದಾರೆ. ಎಲ್ಲೋ ಬೆಂಗಳೂರಲ್ಲಿ ಕುಳಿತು ಶಿರಾದಲ್ಲಿ ಜೆಡಿಎಸ್ ಗೆಲ್ಲಲ್ಲ ಅಂತಾರೆ. ರೈತರ ಪಕ್ಷದ ಪರ ಅಶೋಕ್ ಸರ್ಟಿಫಿಕೇಟ್ ಕೊಡುವ ಅಗತ್ಯವಿಲ್ಲ. ಆಸೆ ಆಮೀಷಕ್ಕೆ ಶಿರಾ ಜನರು ಬಲಿಯಾಗಿಲ್ಲ ಎಂದರು.

ಕೆ.ಆರ್.ಪೇಟೆಯಲ್ಲಿ ಏನ್ ಮಾಡಿ ಎಂಎಲ್ಎ ಆಗಿದ್ದಾರೆ. ಬಿಜೆಪಿ ಸರ್ಕಾರ ಕೋಟಾ ನೋಟ್ ಕೊಟ್ಟಿದ್ಯಾ(?) ಅಸಲಿ ನೋಟ್ ಕೊಟ್ಟಿದ್ಯಾ(?) 1000 ಕೋಟಿ ಕೋಟಾ ನೋಟ್ ಕೊಟ್ಟಿದ್ದಾರೆ. ಅಲ್ಲಿನ ರಾಜಕಾರಣ ಬೇರೆ, ಶಿರಾ ರಾಜಕೀಯ ಬೇರೆ. ಕುಮಾರಸ್ವಾಮಿ ಸರ್ಕಾರದಲ್ಲಿ ಕೊಟ್ಟ ದುಡ್ಡೇ ಸಿಎಂ ಬಿಎಸ್​ವೈ ಕೆಲ ಶಾಸಕರ ಕ್ಷೇತ್ರಕ್ಕೆ ದುಡ್ಡು ಕೊಟ್ಟಿಲ್ಲ ಎಂದು ಮಾಜಿ ಸಿಎಂ ಹೆಚ್ಡಿಕೆ ಅವರು ನಾರಾಯಣ್​ ಗೌಡ ಅವರಿಗೆ ಟಾಂಗ್​ ಕೊಟ್ಟಿದ್ದಾರೆ.

Next Story

RELATED STORIES