Top

ಸಿಎಂ ಬಿಎಸ್​ವೈ ದೆಹಲಿಗೆ ಹೋಗಿ ಬರಿಗೈಯಲ್ಲಿ ಬಂದಿರೋದು ರಾಜ್ಯಕ್ಕೆ ಮಾಡಿದ ಅವಮಾನ

ಇದು ಯಡಿಯೂರಪ್ಪನವರ ಬದಲಾವಣೆಯ ಮುನ್ಸೂಚನೆಯಾಗಿದೆ

ಸಿಎಂ ಬಿಎಸ್​ವೈ ದೆಹಲಿಗೆ ಹೋಗಿ ಬರಿಗೈಯಲ್ಲಿ ಬಂದಿರೋದು ರಾಜ್ಯಕ್ಕೆ ಮಾಡಿದ ಅವಮಾನ
X

ತುಮಕೂರು: ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗಿ ಬರಿಗೈಯಲ್ಲಿ ಬಂದಿರೋದು ರಾಜ್ಯಕ್ಕೆ ಮಾಡಿದ ಅವಮಾನ. ಇದು ಯಡಿಯೂರಪ್ಪನವರ ಬದಲಾವಣೆಯ ಮುನ್ಸೂಚನೆಯಾಗಿದೆ ಎಂದು ಕಾಂಗ್ರೆಸ್ ಮಾಜಿ​ ಶಾಸಕ ಕೆ.ಎನ್​ ರಾಜಣ್ಣ ಅವರು ಹೇಳಿದ್ದಾರೆ.

ತುಮಕೂರಿನಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಯಡಿಯೂರಪ್ಪನವರನ್ನೇ ಮುಂದುವರೆಸೋದಿದ್ರೆ ಅವರ ಲಿಸ್ಟ್​ಗೆ ಅನುಮತಿ ಸಿಗಬೇಕಿತ್ತು. ಒಬ್ಬ ಕೇಂದ್ರ ಸಚಿವರನ್ನು ಮುಖ್ಯಮಂತ್ರಿಗಳು ಭೇಟಿ ಮಾಡಲು ಅವಕಾಶ ಕೊಡಲ್ಲ ಅಂದರೆ ಇದು ನಿಜಕ್ಕೂ ಖಂಡನೀಯ. ಮುಖ್ಯಮಂತ್ರಿಗಳು ಇಡೀ ಕರ್ನಾಟಕದ ನಾಯಕರು. ಅವರಿಗೆ ಒಬ್ಬ ಕೇಂದ್ರದ ಯಕಶ್ಚಿತ್ ಗೃಹ ಸಚಿವರು ಭೇಟಿಗೆ ಅವಕಾಶ ಕೊಟ್ಟಿಲ್ಲ ಅಂದರೆ ಕರ್ನಾಟಕ ರಾಜ್ಯದ ಜನತೆಗೆ ಮಾಡಿದ ಅವಮಾನ ಎಂದರು.

ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಇಷ್ಟು ದಿನ ಮುಖ್ಯಮಂತ್ರಿಗಳಿಗೆ ಜ್ಞಾನೋದಯ ಇರಲಿಲ್ವಾ(?) ಅವತ್ತು ಮರಾಠರು ಇರಲಿಲ್ವಾ(?)ಮರಾಠರು ನಿನ್ನೆ ಹುಟ್ಟಿದ್ರಾ(?) ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ಬಸವಕಲ್ಯಾಣ, ಬೆಳಗಾವಿ ಉಪಚುನಾಚಣೆ ಗಮನದಲ್ಲಿಟ್ಟುಕೊಂಡು ಪ್ರಾಧಿಕಾರ ರಚನೆ ಮಾಡ್ತಾ ಹೋಗೋದು ದುರಂತವೇ ಸರಿ. ಪ್ರಾಧಿಕಾರಿದಲ್ಲಿ ಹಣ ಇರೋದಿಲ್ಲ, ಸುಮ್ಮನೆ ರಚನೆ ಮಾಡುತ್ತಾರೆ. ನಾಳೆ ತೆಲುಗು, ತಮಿಳು ಪ್ರಾಧಿಕಾರ ಕೇಳುತ್ತಾರೆ ಅದನ್ನು ಮಾಡಿದ್ರೆ ತಪ್ಪಲ್ವಾ(?) ನಾವು ರಾಜ್ಯೋತ್ಸವ ಮಾಡುವಾಗ ಮರಾಠಿಗರು ಕಪ್ಪುಪಟ್ಟಿ ಧರಿಸಿ ಕನ್ನಡಿಗರಿಗೆ ಅವಮಾನ ಮಾಡುತ್ತಾರೆ ಅಂಥವರಿಗೆ ಉದ್ದಾರ ಮಾಡುತ್ತೇವೆ ಅನ್ನೋದು ಸರಿಯಲ್ಲ ಎಂದು ಮಾಜಿ ಶಾಸಕ ಕೆ.ಎನ್​ ರಾಜಣ್ಣ ಅವರು ಹೇಳಿದ್ದಾರೆ.

Next Story

RELATED STORIES