Top

ಇದು ಬಿಜೆಪಿನಾ ಎಂಬ ಅನುಮಾನ ಹುಟ್ಟುತ್ತಿದೆ - ಸಚಿವ ಕೆ.ಎಸ್ ಈಶ್ವರಪ್ಪ ಬೇಸರ

ಯಡಿಯರಪ್ಪ ಅವರ ಮೇಲೆ ಆರೋಪ ಮಾಡೋದು, ಅವರ ಕುಟುಂಬದವರ ಮೇಲೆ ಆರೋಪ ಮಾಡೋದು ಸರಿಯಲ್ಲ.

ಇದು ಬಿಜೆಪಿನಾ ಎಂಬ ಅನುಮಾನ ಹುಟ್ಟುತ್ತಿದೆ - ಸಚಿವ ಕೆ.ಎಸ್ ಈಶ್ವರಪ್ಪ ಬೇಸರ
X

ಶಿವಮೊಗ್ಗ: ಇತ್ತೀಚೆಗೆ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆ, ಶಾಸಕರ ವರ್ತನೆ ನನಗೆ ಬೇಸರ ತರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​ ಈಶ್ವರಪ್ಪ ಅವರು ಶುಕ್ರವಾರ ಹೇಳಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಪಕ್ಷದ ಹಿತೈಷಿಗಳಿಗೆ ಹಿರಿಯರಿಗೆ ಈ ಬೆಳವಣಿಗೆಯಿಂದ ಸಮಾಧಾನ ಇಲ್ಲ. ಇದು ಬಿಜೆಪಿನಾ ಎಂಬ ಅನುಮಾನ ಹುಟ್ಟುತ್ತಿದೆ. ಕೇವಲ ಮಂತ್ರಿ ಆಗುವ ಉದ್ದೇಶಕ್ಕೆ ಮಾತ್ರ ರಾಜಕಾರಣಿಯಾಗುವುದು ಸರಿಯಲ್ಲ ಎಂದರು.

ಇನ್ನು ಈ ರೀತಿ ಸಮಸ್ಯೆಯನ್ನ ಯಾರು ಉಂಟು ಮಾಡುತ್ತಿದ್ದಾರೆ ಅವರ ಬಗ್ಗೆ ನಾಳೆ ದಿನ ಪಕ್ಷ ಶಿಸ್ತು ಕ್ರಮ ತೆಗೆದುಕೊಳ್ಳಬಹುದು. ಆದರೆ, ನಮ್ಮ ಪಕ್ಷದವರ ಮೇಲೆ ಶಿಸ್ತು ಕ್ರಮ ಜರುಗಿಸುವುದು ಕೂಡ ಸರಿಯಾಗೋದಿಲ್ಲ. ಸಂಪುಟ ವಿಸ್ತರಣೆ ಸಂಬಂಧ ಅಸಮಾಧಾನ ಇರುವುದು ನಿಜ. ಆದರೆ, ಅದನ್ನು ಎಲ್ಲಿ ಸರಿಪಡಿಸಿಕೊಳ್ಳಬೇಕೋ ಅಲ್ಲಿ ಸರಿಪಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಹಾದಿ ಬೀದಿಯಲ್ಲಿ ಮಾತನಾಡಿದರೆ ಬಗೆಹರಿಯುತ್ತದೆಯಾ(?) ಎಂದಿದ್ದಾರೆ.

ಸದ್ಯ ಯಡಿಯರಪ್ಪ ಅವರ ಮೇಲೆ ಆರೋಪ ಮಾಡೋದು, ಅವರ ಕುಟುಂಬದವರ ಮೇಲೆ ಆರೋಪ ಮಾಡೋದು ಸರಿಯಲ್ಲ. ಈ ಎಲ್ಲಾ ಬೆಳವಣಿಗೆಯನ್ನು ಹೈಕಮಾಂಡ್ ಗಮನಿಸುತ್ತಿದೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೆ ಎಂದು ಸಚಿವ ಕೆ.ಎಸ್​ ಈಶ್ವರಪ್ಪ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

Next Story

RELATED STORIES