Top

ಸಂಘಟನೆ, ನಾಯಕತ್ವ ಇದ್ದರೆ ಅತಿಹೆಚ್ಚು ಸ್ಥಾನ ಗೆಲ್ಲಬಹುದು ಎಂಬುದಕ್ಕೆ ಈ ಚುನಾವಣೆ ಸಾಕ್ಷಿ

ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅತಿಹೆಚ್ಚು ಸ್ಥಾನ ಗೆದ್ದಿದ್ದಾರೆ

ಸಂಘಟನೆ, ನಾಯಕತ್ವ ಇದ್ದರೆ ಅತಿಹೆಚ್ಚು ಸ್ಥಾನ ಗೆಲ್ಲಬಹುದು ಎಂಬುದಕ್ಕೆ ಈ ಚುನಾವಣೆ ಸಾಕ್ಷಿ
X

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಗೆ ಬ್ರಿಟನ್​ನಿಂದ ಬಂದಿದ್ದ 4 ಮಂದಿಯಲ್ಲಿ ಬ್ರಿಟನ್ ವೈರಸ್ ಪತ್ತೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​ ಈಶ್ವರಪ್ಪ ಅವರು ಗುರುವಾರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತ ಎಲ್ಲಾ ಅಗತ್ಯ ಕ್ರಮಕೈಗೊಂಡಿದೆ. ಜಿಲ್ಲೆಯ ಜನತೆ ಗಾಬರಿಯಾಗುವ ಅವಶ್ಯಕತೆ ಇಲ್ಲ. ಹೊಸ ವೈರಸ್​ನಿಂದ ಸಾವು ಸಂಭವಿಸುವುದಿಲ್ಲ. ಈ ಬಗ್ಗೆ ತಜ್ಞರೇ ತಿಳಿಸಿದ್ದಾರೆ ಎಂದರು.

ಮಂಗಳೂರಿನಲ್ಲಿ ಎಸ್​ಡಿಪಿಐ ಕಾರ್ಯಕರ್ತರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಯಾರೋ 4 ಜನ ಪಾಕಿಸ್ತಾನ ಜಿಂದಾಬಾದ್ ಅಂತಾ ಕೂಗಬಹುದು. ಹಿಂದೂಸ್ಥಾನ್ ಜಿಂದಾಬಾದ್ ಎಂದು ಕೂಗಲು 4 ಸಾವಿರ ಜನ ಇದ್ದಾರೆ. ಅವರ ವಿರುದ್ದ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೀವಿ. ಎಸ್​ಡಿಪಿಐ ಅವರಿಗೆ ಮುಸಲ್ಮಾನ್ ಅವರೇ ಬೆಂಬಲಿಸುವುದಿಲ್ಲ. ಕಾಂಗ್ರೆಸ್ ಅವರು ಈ ರೀತಿ ಘೋಷಣೆ ಕೂಗಿದಾಗ ತುಟಿ ಬಿಚ್ಚುವುದಿಲ್ಲ ಎಂದು ಹೇಳಿದರು.

ಇನ್ನು ಗೋಮಾಂಸ ತಿನ್ನುತ್ತೀನಿ ನಾನು ನೀವು ಏನು ಮಾಡ್ತೀರಿ. ಅನ್ನುವವರಿಗೆ ರಾಜ್ಯದ ಜನ ಬೆಂಬಲ ಕೊಟ್ಟಿಲ್ಲ. ಗೋಮಾತೆ ಪೂಜಿಸುವವರಿಗೆ ಬೆಂಬಲ ಕೊಟ್ಟಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಅನ್ನುವವರಿಗೆ ಬೆಂಬಲ ಕೊಟ್ಟಿಲ್ಲ. ಹಿಂದೂಸ್ಥಾನ್ ಜಿಂದಾಬಾದ್ ಎನ್ನುವವರಿಗೆ ಬೆಂಬಲ ಕೊಟ್ಟಿದ್ದಾರೆ. ಹನುಮ ಜಯಂತಿ ದಿನ ಚಿಕನ್ ಸೇವಿಸುವವರಿಗೆ ಬೆಂಬಲ ಕೊಟ್ಟಿಲ್ಲ. ರಾಮನ ಭಕ್ತರಿಗೆ ಬೆಂಬಲ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸಹ ಜೆಡಿಎಸ್​ನಿಂದ ಕಾಂಗ್ರೆಸ್​ಗೆ ಬಂದರು. ಯಾಕೆ ಬಂದ್ರು, ಸಿಎಂ ಮಾಡ್ತೀವಿ ಅಂತ ಆಸೆ ತೋರಿಸಿದ್ದಕ್ಕೆ ತಾನೇ ಬಂದಿದ್ದು. ನಿಮ್ಮ ಹಿಂಬಾಲಕರು ಸಹ ಅದೇ ರೀತಿ ಇದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಸದ್ಯ ಸಂಘಟನೆ ಮಾಡಿ ಚುನಾವಣೆಗೆ ಬನ್ನಿ. ಸಂಘಟನೆ ಮಾಡದೇ ಚುನಾವಣೆಗೆ ಹೋದ್ರೆ ಸೋಲ್ತೀರಾ(?) ಸೋತು ನಂತರ ನಿಮ್ಮ ಪಕ್ಷದ ನಾಯಕರನ್ನೇ ಬೈಯುತ್ತೀರಾ(?) ಕಾಂಗ್ರೆಸ್ ನಾಯಕತ್ವ ಸತ್ತು ಹೋಗಿದೆ. ಸಂಘಟನೆ, ನಾಯಕತ್ವ ಇದ್ದರೆ ಅತಿಹೆಚ್ಚು ಸ್ಥಾನ ಗೆಲ್ಲಬಹುದು ಎಂಬುದಕ್ಕೆ ಗ್ರಾಮ ಪಂಚಾಯ್ತಿ ಫಲಿತಾಂಶವೇ ಸಾಕ್ಷಿ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅತಿಹೆಚ್ಚು ಸ್ಥಾನ ಗೆದ್ದಿದ್ದಾರೆ ಎಂದು ಸಚಿವ ಈಶ್ವರಪ್ಪ ಅವರು ಹೇಳಿದರು.

Next Story

RELATED STORIES